Posts

"ಉಪನಿಷತ್ತಿನಲ್ಲಿರುವುದೆಲ್ಲಾ ವಚನ ಸಾಹಿತ್ಯದಲ್ಲಿ ಇದೆ ಆದರೆ ವಚನ ಸಾಹಿತ್ಯದಲ್ಲಿರುದೆಲ್ಲಾ ಉಪನಿಷತ್ತಿನಲ್ಲಿ ಇಲ್ಲ | "

Image
 " ಉಪನಿಷತ್ತಿನಲ್ಲಿರುವುದೆಲ್ಲಾ ವಚನ ಸಾಹಿತ್ಯದಲ್ಲಿ ಇದೆ ಆದರೆ ವಚನ ಸಾಹಿತ್ಯದಲ್ಲಿರುದೆಲ್ಲಾ ಉಪನಿಷತ್ತಿನಲ್ಲಿ ಇಲ್ಲ " -  ರಂಗನಾಥ ದೀವಾಕರ ಉನ್ನತ ಸಂಸ್ಕೃತ ವಿದ್ವಾಂಸರು (ವೈದಿಕ ಸಾಹಿತ್ಯ ಪಂಡಿತರು) ಹಾಗೂ ಪ್ರಖ್ಯಾತ ಲೇಖಕರು " Everything that is in the Upanishads is in the Vachana Sahitya, but everything that is in the Vachana Sahitya is not in the Upanishads" -  Ranganatha Diwakara Eminent Sanskrit Scholars (Vedic Literature Scholars) and eminent authors. Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

Snake Does not drink Milk | ಹಾವು ಹಾಲು ಕೊಡಿಯುವುದಿಲ್ಲಾ

  ವಚನ ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ಉಂಬ ಜಂಗಮ ಬಂದಡೆ ನಡೆಯೆಂಬರು  ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ  ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ - ವಿಶ್ವಗುರು ಬಸವಣ್ಣನವರು

Hindhu ಹಿಂದು (ಲಿಂಗಾಯತರಯ ಹಿಂದುಗಳಲ್ಲಾ/ Lingayat are not Hindhu)

Image
  Hindhu ಹಿಂದು (ಲಿಂಗಾಯತರಯ ಹಿಂದುಗಳಲ್ಲಾ/ Lingayat are not Hindhu) ಹಿಂದು ವ್ಯಾಖ್ಯಾನ ನೊಡಿ , ಹಾಗಾಗಿ ನಾವು (ಲಿಂಗಾಯತರು) ಹಿಂದುಗಳಲ್ಲಾ Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಪರಮ ದಾಸೋಹಿ ಲಿಂಗಾಂಗ ಯೋಗಿ ನೀಲಗಂಗಾಂಬಿಕಾ ತಾಯಿಯವರ ಲಿಂಗೈಕ್ಯ ಸಂಸ್ಮರಣೆ

Image
ಪರಮ ದಾಸೋಹಿ ಲಿಂಗಾಂಗ ಯೋಗಿ ನೀಲಗಂಗಾಂಬಿಕಾ ತಾಯಿಯವರ ಲಿಂಗೈಕ್ಯ ಸಂಸ್ಮರಣೆ  *ನೀಲಾಂಬಿಕಾ ಷಷ್ಠಿ* (10.08.2024) ವಚನ: ಪರಮ ದಾಸೋಹವನು ನೆರೆಮಾಡಿ ಜಂಗಮದ ಪರಮ ಪ್ರಸಾದವನು ಸವಿದು ಸುಖದಿ ಕರದಿಷ್ಟಲಿಂಗದೊಳೂ ಶರೀರವನಿಂಬಿಟ್ಟ ಕರುಣಿ ನೀಲಮ್ಮ ಶರಣು ಯೋಗಿನಾಥ -ಬಸವಯೋಗಿ ಸಿದ್ಧರಾಮೇಶ್ವರರು. ವಿಶ್ವ ವಿಭೂತಿ, ಜ್ಞಾನಜೋತಿ, ಭಕ್ತಿ  ಭಂಡಾರಿ ವಿಶ್ವಗುರು ಬಸವಣ್ಣನವರು ತಮ್ಮ ಸುತ್ತಲಿನ ಸಮಾಜದಲ್ಲಿರುವ ವೈಷಮ್ಯ ಮತ್ತು ಅಸಮಾನತೆಯನ್ನು ತೊಡೆದುಹಾಕಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಹೊಸ ಲಿಂಗಾಯತ ಧರ್ಮವನ್ನು ನೀಡಿ ಹೊಸ ಸಮಾಜವನ್ನು ರಚಿಸುವ ಕಾರ್ಯದಲ್ಲಿ ತೊಡಗಿದಾಗ, ಅಕ್ಕನಾಗಮ್ಮನವರಿಂದ ಲಿಂಗಾಯತ ಧರ್ಮ ದೀಕ್ಷೆಯನ್ನು ಪಡೆದು ಆತ್ಮೋನ್ನತಿಯ ಮಾರ್ಗವನ್ನು ತುಳಿದು ಗುರು ಬಸವಣ್ಣನವರ ವಿಚಾರಪತ್ನಿ (Intellectual companion)ಯಾಗಿ ಬಾಳಿದವರು ಪರಮ ದಾಸೋಹಿ ಲಿಂಗಾಂಗ ಯೋಗಿ ನೀಲಾಂಬಿಕಾ ತಾಯಿ. ನೀಲಲೋಚನೆ, ಗಂಗಾಂಬಿಕೆ, ನೀಲಗಂಗಾ, ನೀಲಗಂಗಾಬಿಕೆ ನೀಲವ್ವ ಎಂದೂ ಇವರನ್ನು ಕರೆಯುತ್ತಿದ್ದರು. ಬಾಲ್ಯ: ಕಲಚೂರ್ಯ ಬಿಜ್ಜಳನ ಮಹಾಮಂತ್ರಿ ಬಲದೇವರಸರ ಏಕೈಕ ಪುತ್ರಿ ನೀಲಾಂಬಿಕೆ ಇವರ ತಾಯಿಯ ಹೆಸರು ಮುಕ್ತಾಂಬೆ ಎಂದು ಸಾಹಿತ್ಯದಲ್ಲಿ ಹೇಳಲಾಗಿದೆ. ರಾಜಕೀಯ ಮನೆತನದಲ್ಲಿ ಬೆಳೆದುದರಿಂದ ಧೈರ್ಯ ಸ್ಥೈರ್ಯಗಳು ಸ್ವಭಾವಿಕವಾಗಿ ಬೆಳೆದು ಬಂದಿದ್ದವು. ಸಾಹಿತ್ಯ, ಸಂಗೀತ, ಕತ್ತಿವರಸೆಗಳಲ್ಲೂ ಬಲ್ಲಿದವರಾಗಿದ್ದರು. ತಂದೆಯ ಪ್ರತಿಯೊಂದು ಕಾರ್ಯದಲ್...

ಬಸವ ಪಂಚಮಿ | Basava Pachami

Image
ಬಸವ ಪಂಚಮಿ | Basava Pachami ಉಟ್ಟ ಸೀರೆಯ ಹರಿದು ಹೋದಾತ ನೀನಲಾ ಬಸವಣ್ಣ. ಮೆಟ್ಟಿದ ಕೆರಹ ಕಳೆದು ಹೋದಾತ ನೀನಲಾ ಬಸವಣ್ಣ. ಕಟ್ಟಿದ ಮುಡಿಯ ಬಿಟ್ಟು ಹೋದಾತ ನೀನಲಾ ಬಸವಣ್ಣ. ಸೀಮೆ ಸಂಬಂಧವ ತಪ್ಪಿಸಿ ಹೋದಾತ ನೀನಲಾ ಬಸವಣ್ಣ. ಲಿಂಗಕ್ಕೆ ಮಾಡಿದುದ ಸೋಂಕದೆ ಹೋದೆಯಲ್ಲಾ ಬಸವಣ್ಣ. ಜಂಗಮಕ್ಕೆ ಮಾಡುವ ಮಾಟವ ಕೈಯಲ್ಲಿ ಹಿಡಿದುಕೊಂಡು ಹೋದೆಯಲ್ಲಾ ಬಸವಣ್ಣ ಆ ಬಸವಣ್ಣಂಗೆ ಶರಣೆಂಬ ಪಥವನೆ ತೋರು ಕಂಡಾ ಕಲಿದೇವರ ದೇವಾ. - ಮಡಿವಾಳ ಮಾಚಿದೇವರು  ಬಸವ ಪಂಚಮಿ, ಲಿಂಗಾಯತ ಧರ್ಮೀಯರಿಗೆ ಇದು ನಾಗ ಪಂಚಮಿಯಲ್ಲ. ಕಲ್ಲು ನಾಗರಕ್ಕೆ ಹಾಲೆರೆಯುವವರು ಲಿಂಗಾಯತರೇ ಅಲ್ಲ. ಶ್ರಾವಣ ಶುದ್ಧ ಪಂಚಮಿ 30-07-1196 ರಂದು ಗುರುಬಸವಣ್ಣನವರು ಲಿಂಗೈಕ್ಯರಾಗಿದ್ದರು. ನಮಗೆ ಬಸವ ಜಯಂತಿಗಿಂತ ಬಸವ ಪಂಚಮಿ ಅತಿ ಮಹತ್ವದ ದಿನ. ಗುರುಬಸವಣ್ಣನರು 30-04-1134ರಂದು ಜನಿಸಿದರು. ಅವರು ಜನಿಸಿದಾಗ ನಮಗೆ ಯಾವುದೇ ತತ್ವ, ಧರ್ಮವನ್ನು ಕೊಟ್ಟಿರಲಿಲ್ಲ. ಆದರೆ ಅವರು ಲಿಂಗೈಕ್ಯರಾಗುವುದರ ಒಳಗಾಗಿ ಲಿಂಗಾಯತ ಧರ್ಮವೆಂಬ ಹೊಸ ಧರ್ಮವನ್ನು ಕೊಟ್ಟರು. ಅನುಭಾವ ಮಂಟಪವೆಂಬ ಧಾರ್ಮಿಕ ಸಂಸ್ಥೆಯನ್ನು ರಚಿಸಿ, ಆ ಮೂಲಕ ಸಂಸ್ಕಾರ, ಸಂಘಟನೆ ಮತ್ತು ಸಹೋದರತೆಯನ್ನು ಈ ಸಮಾಜದಲ್ಲಿ ತಂದರು. ಗುರುಬಸವಣ್ಣನವರು ಪ್ರತಿಯೊಂದು ರಂಗದಲ್ಲಿಯೂ ಸುಧಾರಣೆಯನ್ನು ತಂದರು. ಇದರಿಂದಾಗಿ ಮತ್ರ್ಯಲೋಕಕ್ಕೆ ಹೊಸ ಬೆಳಕು ಬಂದಂತಾಯಿತು. ಎಲ್ಲಾ ಬಲ್ಲಿದನಯ್ಯಾ ಕಲ್ಯಾಣ ಬಸವಯ್ಯ ಚೆಲ್ಲಿದನು ತಂದು ಶಿವಬೆಳಕ| ನಾಡೊಳಗ...

What is issue with "Vachana Darshana" | "ವಚನ ದರ್ಶನ" ಪುಸ್ತಕದ ಸಮಸ್ಯೆ ಏನು?

Image
 What is issue with "Vachana Darshana" "ವಚನ ದರ್ಶನ" ಪುಸ್ತಕದ ಸಮಸ್ಯೆ ಏನು? ವನನಾನಂದ ಹೇಳಿಕೆ

Difference between Hindu and Lingayat ಹಿಂದು ಧರ್ಮ ಮತ್ತು ಲಿಂಗಾಯತ ಧರ್ಮಕ್ಕೆ ಇರುವ ವ್ಯತ್ಯಾಸಗಳು

Image
  Difference between Hindu and Lingayat  ಹಿಂದು ಧರ್ಮ ಮತ್ತು ಲಿಂಗಾಯತ ಧರ್ಮಕ್ಕೆ ಇರುವ ವ್ಯತ್ಯಾಸಗಳು

ಧರ್ಮಪಿತ ಬಸವಣ್ಣನವರನ್ನು ಏಕವಚನದಲ್ಲಿ ಸಂಬೋಧಿಸುವುದು ಸಲ್ಲದು

Image
  ಧರ್ಮಪಿತ ಬಸವಣ್ಣನವರನ್ನು ಏಕವಚನದಲ್ಲಿ ಸಂಬೋಧಿಸುವುದು ಸಲ್ಲದು ಅನೇಕರು ಧರ್ಮಗುರು ಬಸವಣ್ಣನವರಿಗೆ ಬಸವಣ್ಣ ಎಂದು ಏಕವಚನದಲ್ಲಿ "ಅವ"  "ಇವ" "ಅವನು" "ಇವನು" "ಆತ" "ಈತ" "ಹೇಳಿದನು" "ಮಾಡಿದನು" ಎಂದೆಲ್ಲ ತೀರ ಹಗುರವಾಗಿ ಸಂಭೋಧಿಸುವುದು ಯಾವ ಕಾರಣಕ್ಕೂ ಯಾವ ಕಾಲಕ್ಕೂ ಸಲ್ಲದು. ಅಧಿಕಾರಿಗಳು, ಗಣ್ಯರು ಮೊದಲಾದವರನ್ನು ಬಹುವಚನದಲ್ಲಿಯೇ ಸಂಬೋಧಿಸಲಾಗುತ್ತದೆ. ಧರ್ಮಗುರು ಅದಕಿಂತ ಕಡಿಮೆಯೇ? ಅವರು ಧರ್ಮಗುರು ಅಷ್ಟೇ ಅಲ್ಲ ಧರ್ಮಪಿತ-ಅಪ್ಪ-ತಂದೆ. 'ಓಂ ಶ್ರೀ ಗುರು ಬಸವಲಿಂಗಾಯ ನಮಃ' ಮಂತ್ರದಲ್ಲಿಯೆ ಬಸವಣ್ಣನವರಿಗೆ 'ಶ್ರೀ ಗುರು' ಎಂದು ಪೂಜ್ಯಭಾವದ ವಿಶೇಷಣ ಇರುವುದು ತಿಳಿದ ವಿಚಾರ. ಸಿಖ್ಖರು ತಮ್ಮ ಧರ್ಮ ಸ್ಥಾಪಕರಾದ 'ನಾನಕ' ಅವರನ್ನು 'ಗುರು ನಾನಕ್ ದೇವ್' ಎಂದು ಪೂಜ್ಯತೆಯಿಂದ ಸಂಬೋಧಿಸುವರು.  ಆತ್ಮೀಯತೆ ಇದ್ದ ಮಾತ್ರಕ್ಕೆ ಎಕವಚನದಲ್ಲಿ ಸಂಬೋಧಿಸುವುದು ಸರಿಯಲ್ಲ. ಆತ್ಮಿಯತೆ ಇದ್ದರೂ ಮಕ್ಕಳು ತಂದೆಯವರು ಎಂದು ಹೇಳುತ್ತಾರೆ. ಅದ್ದರಿಂದ, ಧರ್ಮಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಚ್ಯುತಿ ಬರದಂತೆ "ಧರ್ಮಪಿತರು, ಧರ್ಮಗುರು ಬಸವಣ್ಣನವರು, ಗುರು ಬಸವಣ್ಣನವರು, ಬಸವಣ್ಣನವರು" ಎಂದು ಗೌರವಪೂರ್ವಕವಾಗಿ ಸಂಬೋಧಿಸಬೇಕು. -  ನುಡಿದರೆ ಮುತ್ತಿನ  ಹಾರದಂತಿರಬೇಕು.

Lingayat News Paper statements / Articles

Image
  Lingayat News Paper statements / Articles  ಲಿಂಗಾಯತ ಸಮುದಾಯದ ಪತ್ರಿಕಾ ಹೆಳಿಕೆಗಳು

ಅರಿವಿನ ಮನೆ Comunity and Groups Members Feedback

Image
Feedback  

🔯 ನೆನಹು 🔯 ಸಾಮೂಹಿಕ ಪ್ರಾರ್ಥನೆ

ಓಂ ಶ್ರೀ ಗುರು ಬಸವಲಿಂಗಾಯ ನಮಃ.       🔯🏵️*೮೬೬೬೬೬*🏵️🔯 🔯 ನೆನಹು 🔯  ಸಾಮೂಹಿಕ ಪ್ರಾರ್ಥನೆ  ಪ್ರತಿ ದಿನ ಸಂಜೆ 07: ೦೦ ಗಂಟೆಗೆ 🔯🔯🔯🔯🔯🔯🔯🔯  ಮಂತ್ರ ಪುರುಷ ಗುರು ಬಸವಣ್ಣನವರ ಪೂಜೆ ಮುಕ್ತಿದಾಯಕ  ,ಶರಣರಕ್ಷಕ, ನಿತ್ಯ ಮೂರುತಿ ಬಸವನೆ, ಭಕ್ತಿಯಿಂದಲಿ ಚರಣಕಮಲಕೆ, ನಿತ್ಯವಂದಿಪೆ ತಂದೆಯೆ. ॥ಪ॥ ಅರಿವು ಇಲ್ಲದ ಮನುಜ ಜನ್ಮವು, ಶಾಪವೆನ್ನುತ ನೊಂದೆನು, ಮರೆವ ಹರಿಯುವ, ಗುರುವೆ ಎನುತಲಿ ನಿಮ್ಮ ಚರಣವ ಪಿಡಿದೆನು. ನಿಮ್ಮ ಕರುಣೆಯು, ಎನ್ನ ಬಾಳಿನ ರಕ್ಷೆ ಎನುತಲಿ ನಂಬಿಹೆ.        ಬನ್ನ ತೊಡೆಯುವ ಬೆಳಗ ಬೀರುವ ಶಕ್ತಿ ಎನ್ನುತ ಕಾದಿಹೆ.     ॥೧॥ ಮೋಹರಹಿತನೆ ಜ್ಞಾನಭರಿತನೇ,ಪರಮಶಾಂತಿಯ ಧಾಮವೆ, ಕಾವುದೆಮ್ಮನು ಕೈಯಬಿಡದೆ, ಹರನ ಕರುಣೆಯ ಕಂದನೆ, ಕಾಮಕ್ರೋಧದ ಕೊಳೆಯ ಕಳೆದು, ಭಕ್ತಿ ಜಲದಲಿ ಮೀಯಿಸು .ಜ್ಞಾನ ದುಡುಗೆಯ ಮನಕೆ ಉಡಿಸಿ ಮೃಡನ ಪಾದಕ್ಕೆ ಏರಿಸು.॥೨॥ ನಿಮ್ಮ ಚಿನ್ಮಯ ಜ್ಞಾನವೆನಗೆ, ಮಾರ್ಗದರ್ಶಕ ದೀಪ್ತಿಯು. ನಿಮ್ಮ ಮಮತೆಯ ಹೃದಯ ಮಂದಿರ, ನನಗೆ ಶಾಂತಿಯ ಹಂದರ. ನಿಮ್ಮ ಪಾವನ ಚರಣಯುಗ್ಮವು, ಭವವ ದಾಂಟಿಪ ದೋಣಿಯು. ಸನ್ನುತಾಂಗನೆ ನಿಮ್ಮ ನೆನಹಿದು, ಬಾಳಿಗಮೃತ ಸೋನೆಯು. ॥ ೩॥ ನೀನು ಆಡಿಪ ಬೊಂಬೆನಾನು ಮಿಡಿಸೇ ನುಡಿಯುವ ವೀಣೆಯು. ನೀನು ಉಡಿಸಿ ಉಣಿಸಿ ಸಲಹಲು, ಎನ್ನ ಬಾಳೋಳು ಝೇಂಕೃತಿ. ಮಂತ್ರ ಪುರುಷನೇ ಶಾಂತಿ ಚಂದ್ರನೆ, ದುರಿತ ...

ಜಾಗತಿಕ ಲಿಂಗಾಯತ ಮಹಾಸಭಾ" ಇದು ಲಿಂಗಾಯತ ಧರ್ಮಕ್ಕ್ ಮಾನ್ಯತೆ ಕೊಡಿಸಲು ಹುಟ್ಟಿದ ಸಂಸ್ಥೆ ಎಂದು ಹೇಳಲಾಗಿತ್ತು. ಇದರ ಮೂಲ ಉದ್ದೇಶದ ಕಡೆ ಗಮನ ಕೊಡಿ.

Image
  ಜಾಗತಿಕ ಲಿಂಗಾಯತ ಮಹಾಸಭಾ" ಇದು ಲಿಂಗಾಯತ ಧರ್ಮಕ್ಕ್ ಮಾನ್ಯತೆ ಕೊಡಿಸಲು ಹುಟ್ಟಿದ ಸಂಸ್ಥೆ ಎಂದು ಹೇಳಲಾಗಿತ್ತು. ಇದರ ಮೂಲ ಉದ್ದೇಶದ ಕಡೆ ಗಮನ ಕೊಡಿ. 👉 ಕಲಬುರ್ಗಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಶರಣ ಪ್ರಭುಲಿಂಗ ಮಹಾಗಾಂವಕರ್ ಅವರೇ,....         ತಾವು ಪೂಜ್ಯ ಮಾತಾಜಿ ಸಂಸ್ಮರಣೆ ಕಾರ್ಯಕ್ರಮ ನಿಮಿತ್ಯ ಬರೆದ *ಪತ್ರ* ದಲ್ಲಿ ಈ ರೀತಿ ಬರೆದಿದ್ದೀರಿ. "ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಮಾಡಿದರೆ ಸೂಕ್ತ *ಕಾನೂನು ಕ್ರಮ* ತೆಗೆದುಕೊಳ್ಳಲಾಗುವುದು" ಎಂದು ಬರೆಯಲಾಗಿದೆ.       ತಾವು ಈ ಪತ್ರವನ್ನು ಬರೆದಿರುವ ದಾಟಿಯನ್ನು ನೋಡಿದರೆ ತಾವು ತಮ್ಮನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರೆಂದು ಅಥವಾ ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ ಎಂದು ತಿಳಿದುಕೊಂಡು ಬರೆದಿರುವ ಪತ್ರದ ಹಾಗೆ ಇದೆ.         ಮೊದಲು ಸುಪ್ರೀಂ ಕೋರ್ಟ್ ತೀರ್ಪಿನ *ದಾಖಲೆ* ಯನ್ನು (ಕಾಪಿ) ತೆಗೆದುಕೊಂಡು ಬನ್ನಿ.  ಅದನ್ನು ತೋರಿಸಿ ಹೇಳಿ. ನಿಮಗೆ ಚಾಲೆಂಜ್ ಮಾಡುತ್ತೇನೆ. ಸುಪ್ರೀಂ ಕೋರ್ಟ್ ಲಿಂಗದೇವ ವಚನಾಂಕಿತವನ್ನು ಬಳಸಬಾರದು ಎಂದು ಎಲ್ಲಿಯೂ ಹೇಳಿಲ್ಲ. ಸುಮ್ಮನೆ ತಮಗೆ ಬೇಕಾದ ಹಾಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಚೇಂಜ್ ಮಾಡಿ *ಸುಳ್ಳು* ಹೇಳುವುದು ಸರಿಯಲ್ಲ.         ಪೂಜ್ಯ ಮಾತಾಜಿ ಅವರಿಗೆ ತಮ್ಮ ಜೀವಿತಾವಧಿಯಲ್...

ಚಪ್ಪಾಳೆ ಗಿಟ್ಟಿಸಿಕೊಳ್ಳವ ಭರದಲ್ಲಿ ಮೂಲ ಸಿದ್ಧಾಂತಕ್ಕೆ ಧಕ್ಕೆ ತಂದವರಿಗೊಂದು ಪತ್ರ

Image
ಚಪ್ಪಾಳೆ ಗಿಟ್ಟಿಸಿಕೊಳ್ಳವ ಭರದಲ್ಲಿ ಮೂಲ ಸಿದ್ಧಾಂತಕ್ಕೆ ಧಕ್ಕೆ ತಂದವರಿಗೊಂದು ಪತ್ರ   - ಜಾಗತಿಕ ಲಿಂಗಾಯತ ಮಾಹಾಸಭಾದ ಎಸ ಎಮ ಜಮಾದರ ಬೆಳಗಾವಿಯಲ್ಲಿ ೨೭-೦೧-೨೦೨೪ರಿಂದ  ಎರಡು ದಿನದಗಳ ಲಿಂಗಾಯತ ಮಹಿಳಾ ಅಧಿವೆಶನದಲ್ಲಿ ಭಾಷಣ ಮಾಡಿದ ಮೀನಾಕ್ಷಿ ಬಾಳೆಯವರಿಗೆ, ಬಹಳ ಮನನೊಂದು ಬಸವ ಅಭಿಮಾನಿಯೊಬ್ಬರು (ಸು ಮಲ್ಲಿಕಾರ್ಜುನಪ್ಪಾ, ಎಂ ಎ ಬಿ ಇಡ್) ಈ ಪತ್ರವನ್ನು ಬರೆದಿದ್ದಾರೆ. ಸು ಮಲ್ಲಿಕಾರ್ಜುನಪ್ಪಾ,  ಎಂ ಎ, ಬಿ ಇಡ್.

ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಮಲ್ಲಮ್ಮಾಜಿಯವರು.

Image
  ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಮಲ್ಲಮ್ಮಾಜಿಯವರು. ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿ ನಡುವೆ ನಡೆದ ಯುದ್ಧದ ಐತಿಹಾಸಿಕ ದಾಖಲೆಗಳ ಪಟ್ಟಿ. 1. ಬೆಳವಡಿ ಸಂಸ್ಥಾನದ ಪಾರಂಪರಿಕ ತಾಣವಾದ ಬೃಹನ್ಮಠದ ಶಿವ ಬಸವ ಶಾಸ್ತ್ರಿಯವರು ಬರೆದ ತರಾತುರಿ ಪಂಚಮರ ಇತಿಹಾಸ ಪುಸ್ತಕದಲ್ಲಿ ಬೆಳವಡಿ ಸಂಸ್ಥಾನದ ಇತಿಹಾಸವು 1511ರಿಂದ ರಾಜ ಚಂದ್ರಶೇಖರ ರಾಜನೊಂದಿಗೆ ಪ್ರಾರಂಭವಾಗುತ್ತದೆ. ಈ ಪುಸ್ತಕದಲ್ಲಿ ಮರಾಠಿ ರಾಜ ಶಿವಾಜಿ ಮತ್ತು ಬೆಳವಡಿ ಮಲ್ಲಮ್ಮನವರ ನಡುವೆ ನಡೆದ ಯುದ್ಧ ದಾಖಲಾಗಿದೆ. ಇಶಪ್ರಭು ಯುದ್ಧಭೂಮಿಯಲ್ಲಿ ನಿಧನರಾದ ನಂತರ ಮಲ್ಲಮ್ಮ ಛತ್ರಪತಿ ಶಿವಾಜಿ ಮಹಾರಾಜರಣ ಸೋಲಿಸಿದಳು. ಈ ಯುದ್ಧದ ನೆನಪಿಗಾಗಿ ವೀರಗಲ್ಲುಗಳನ್ನು ಬೆಳವಡಿಯ ಸಂಸ್ಥಾನದಲ್ಲಿ ಮಲ್ಲಮ್ಮನ ಹೆಸರಲ್ಲಿ ಕಟ್ಟಿಸಲಾಯಿತು. ತರಾತುರಿ ಪಂಚಮರ ಇತಿಹಾಸ ಪುಸ್ತಕ 1929 ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು. 2. ಮಲ್ಲಮ್ಮನ ಗುರುಗಳಾಗಿದ್ದ ಶಂಕರ ಭಟ್ಟರು ಬರೆದ ಸಂಸ್ಕೃತ ಪುಸ್ತಕ ಶಿವವಂಶ ಸುಧರ್ನವದಲ್ಲಿ ಶಿವಾಜಿಯನ್ನು ಬೆಳವಡಿ ಮಲ್ಲಮ್ಮ ಸೋಲಿಸಿದರು ಎಂದು ದಾಖಲಾಗಿದೆ. ಶಿವಾಜಿಯ ಎರಡನೇ ಸೊಸೆಯಾಗಿದ್ದ ತಾರಾಬಾಯ್ ಅವರು ಈ ಪುಸ್ತಕಕ್ಕೆ ಪ್ರಥಮ ಬಹುಮಾನ ನೀಡಿದ್ದರು ಮತ್ತು ಈ ಪುಸ್ತಕದಲ್ಲಿ ಶಿವಾಜಿ ಮತ್ತು ಮಲ್ಲಮ್ಮರ ನಿಖರವಾದ ವಿಷಯವಿದೆ ಎಂದು ಹೇಳಿದ್ದಾರೆ. 3. . ಜಾದುನಾಥ್ ಸರ್ಕಾರ್ ಶಿವಾಜಿಯ ಜೀವನಚರಿತ್ರೆಯನ್ನು ಮರಾಠಿ ಭಾಷೆಯಲ್ಲಿ ಬರೆದಿದ್ದು ಈ ಪು...

ಓಂ ಶ್ರೀ ಗುರು ಬಸವಲಿಂಗಾಯ ನಮಃ

Image
 ಓಂ ಶ್ರೀ ಗುರು ಬಸವಲಿಂಗಾಯ ನಮಃ ವಚನ ಸಾಹಿತ್ಯದಲ್ಲಿ ಓಂ ಎಂಬ ಒಂದಕ್ಷರದ ಪದಕ್ಕೆ ಪ್ರಾಮುಖ್ಯತೆಯನ್ನು ನಿಡಲಾಗಿದೆ ಹಾಗು ಸಕರಾತ್ಮಕವಾಗಿ ಬಳಸಿಕೊಳ್ಳಲಾಗಿದೆ. ಕೆಲವರು ಲೆಖನದಲ್ಲಿ ಅಥವಾ ಆಮಂತ್ರಣ ಪತ್ರದಲ್ಲಿ ಬರಿ "ಶ್ರೀ ಗುರು ಬಸವಲಿಂಗಾಯ ನಮಃ" ವೆಂದು ಬಳಸುತ್ತಾರೆ, ಓಂ ಅನ್ನು ಬಿಟ್ಟು ಬಿಡುತ್ತಾರೆ, ದಯವಿಟ್ಟು ಕಮೆಂಟನಲ್ಲಿ ಕಾರಣ ತಿಳಿಸಿ ಅದು ವಯಕ್ತಿಕ ಅನಿಸಿಕೆ ಇರಬಾರದು ವಚನ ಸಾಹಿತ್ಯ‌ ಆಧಾರವಾಗಿರಬೆಕು. ಒಂದು ಪ್ರಗತಿಪರ ಚಿಂತಕರಿಂದ ಇದೆ ವಿಷಯದ ಬಗ್ಗೆ ಮತ ಕೈಗೊಂಡಾಗ , ಅವರ ಆಯ್ಕೆ ಯನ್ನು ಕೆಳಗಿನ ಚಿತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ** ‌🙏 **