🔯 ನೆನಹು 🔯 ಸಾಮೂಹಿಕ ಪ್ರಾರ್ಥನೆ
ಓಂ ಶ್ರೀ ಗುರು ಬಸವಲಿಂಗಾಯ ನಮಃ. 🔯🏵️*೮೬೬೬೬೬*🏵️🔯 🔯 ನೆನಹು 🔯 ಸಾಮೂಹಿಕ ಪ್ರಾರ್ಥನೆ ಪ್ರತಿ ದಿನ ಸಂಜೆ 07: ೦೦ ಗಂಟೆಗೆ 🔯🔯🔯🔯🔯🔯🔯🔯 ಮಂತ್ರ ಪುರುಷ ಗುರು ಬಸವಣ್ಣನವರ ಪೂಜೆ ಮುಕ್ತಿದಾಯಕ ,ಶರಣರಕ್ಷಕ, ನಿತ್ಯ ಮೂರುತಿ ಬಸವನೆ, ಭಕ್ತಿಯಿಂದಲಿ ಚರಣಕಮಲಕೆ, ನಿತ್ಯವಂದಿಪೆ ತಂದೆಯೆ. ॥ಪ॥ ಅರಿವು ಇಲ್ಲದ ಮನುಜ ಜನ್ಮವು, ಶಾಪವೆನ್ನುತ ನೊಂದೆನು, ಮರೆವ ಹರಿಯುವ, ಗುರುವೆ ಎನುತಲಿ ನಿಮ್ಮ ಚರಣವ ಪಿಡಿದೆನು. ನಿಮ್ಮ ಕರುಣೆಯು, ಎನ್ನ ಬಾಳಿನ ರಕ್ಷೆ ಎನುತಲಿ ನಂಬಿಹೆ. ಬನ್ನ ತೊಡೆಯುವ ಬೆಳಗ ಬೀರುವ ಶಕ್ತಿ ಎನ್ನುತ ಕಾದಿಹೆ. ॥೧॥ ಮೋಹರಹಿತನೆ ಜ್ಞಾನಭರಿತನೇ,ಪರಮಶಾಂತಿಯ ಧಾಮವೆ, ಕಾವುದೆಮ್ಮನು ಕೈಯಬಿಡದೆ, ಹರನ ಕರುಣೆಯ ಕಂದನೆ, ಕಾಮಕ್ರೋಧದ ಕೊಳೆಯ ಕಳೆದು, ಭಕ್ತಿ ಜಲದಲಿ ಮೀಯಿಸು .ಜ್ಞಾನ ದುಡುಗೆಯ ಮನಕೆ ಉಡಿಸಿ ಮೃಡನ ಪಾದಕ್ಕೆ ಏರಿಸು.॥೨॥ ನಿಮ್ಮ ಚಿನ್ಮಯ ಜ್ಞಾನವೆನಗೆ, ಮಾರ್ಗದರ್ಶಕ ದೀಪ್ತಿಯು. ನಿಮ್ಮ ಮಮತೆಯ ಹೃದಯ ಮಂದಿರ, ನನಗೆ ಶಾಂತಿಯ ಹಂದರ. ನಿಮ್ಮ ಪಾವನ ಚರಣಯುಗ್ಮವು, ಭವವ ದಾಂಟಿಪ ದೋಣಿಯು. ಸನ್ನುತಾಂಗನೆ ನಿಮ್ಮ ನೆನಹಿದು, ಬಾಳಿಗಮೃತ ಸೋನೆಯು. ॥ ೩॥ ನೀನು ಆಡಿಪ ಬೊಂಬೆನಾನು ಮಿಡಿಸೇ ನುಡಿಯುವ ವೀಣೆಯು. ನೀನು ಉಡಿಸಿ ಉಣಿಸಿ ಸಲಹಲು, ಎನ್ನ ಬಾಳೋಳು ಝೇಂಕೃತಿ. ಮಂತ್ರ ಪುರುಷನೇ ಶಾಂತಿ ಚಂದ್ರನೆ, ದುರಿತ ...