Posts

Showing posts from September, 2024

ಸುಪ್ರೀಂ ಕೋರ್ಟ್ ತೀರ್ಪು - ಒಂದು ಚಿಂತನೆ

Image
ಸುಪ್ರೀಂ ಕೋರ್ಟ್ ತೀರ್ಪು - ಒಂದು ಚಿಂತನೆ (~ ಮಾತಾಜಿ)           ವಿಶ್ವಗುರು ಬಸವಣ್ಣನವರ 800ನೆಯ ಬಸವ ಲಿಂಗೈಕ್ಯ ಸಂಸ್ಮರಣೆಯ ನಿಮಿತ್ತ ಶುದ್ಧೀಕರಿಸಿದ ಗುರು ಬಸವಣ್ಣನವರ ವಚನಗಳ ಕೃತಿ 'ಬಸವ ವಚನ ದೀಪ್ತಿ'ಯನ್ನು 1996 ರಲ್ಲಿ ಪ್ರಕಟಿಸಿದೆ. ಗುರು ಬಸವಣ್ಣನವರ ಜೀವನದಲ್ಲಿ ಮೊಟ್ಟಮೊದಲ ಬಾರಿಗೆ 3 ಹಂತಗಳನ್ನು ಗುರುತಿಸಿದೆ. 1.  ಮನೆಯ ಸಂಪ್ರದಾಯದಂತೆ ಬಹುದೇವತೋಪಾಸನೆ. 2. ಬಾಲ್ಯದಿಂದ ತಾರುಣ್ಯದವರಿಗೆ ಏಕ ದೇವೋತುಪಾಸನೆ ಏಕದೇವತೋಪಾಸನೆ 3. ಸಾಕ್ಷಾತ್ಕಾರದ ನಂತರ ಏಕದೇವೋಪಾಸನೆ.  ಏಕದೇವತೆ - ಶಿವ ಉಪಾಸಕರಾಗಿದ್ದಾಗ ಬರೆದ ವಚನಗಳಲ್ಲಿ ಕೂಡಲಸಂಗಮದೇವ ಎಂಬ ವಚನಾಂಕಿತ ಹಾಗೆ ಇಟ್ಟು, ಸಾಕ್ಷಾತ್ಕಾರದ ನಂತರ ಏಕದೇವೋಪಾಸಕರಾದಾಗ ಬರೆದ ವಚನಗಳಲ್ಲಿ 'ಶಿವ' ಸೂಚಕವಾದ ಕೂಡಲಸಂಗಮದೇವದ ಬದಲಿಗೆ ಪರಮಾತ್ಮ ಸೂಚಕವಾದ 'ಲಿಂಗದೇವ' ಎಂಬ ವಚನಾಂಕಿತ ಇಟ್ಟು ಪುಸ್ತಕವನ್ನು ಹೊರ ತಂದೆ.  ಪರಮಪೂಜ್ಯ ಶ್ರೀ ಮಹಾ ಜಗದ್ಗುರು ಲಿಂಗಾನಂದ ಅಪ್ಪಾಜಿ ಇರುವಾಗಲೇ ನಾನು ಈ ವಿಷಯ ಪ್ರಸ್ತಾಪಿಸಿದೆ. 'ಬಸವ ಧರ್ಮದ ಸಂಸ್ಕಾರಗಳು' ಎಂಬ ಪುಸ್ತಕವನ್ನು 1995ರ ಜನವರಿಯಲ್ಲಿ ಶರಣ ಮೇಳದಲ್ಲಿ ಬಿಡುಗಡೆ ಮಾಡಿದೆವು. ಆ ಪುಸ್ತಕದಲ್ಲಿ ಒಂದು ವಚನ ಹೀಗೆ ಮುದ್ರಿಸಿದ್ದೆ. ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗವು  ಆದಿ ಮಧ್ಯ ಅವಸಾನಗಳಿಲ್ಲದ ಸ್ವತಂತ್ರ ಲಿಂಗವು  ನಿತ್ಯ ನಿರ್ಮಲ ಲಿಂಗವು ಅಯೋನಿ ಸಂಭವನಯ್ಯ ನಮ್ಮ ಲಿಂಗದೇ...

ಹೂವ ಸೂರ‍್ಯಾಡೋಣ ಗುರು ಬಸವನ ಮೇಲೆ

Image
ಹೂವ ಸೂರ‍್ಯಾಡೋಣ ಗುರು ಬಸವನ ಮೇಲೆ ಧರ್ಮಕರ್ತನ ಮೇಲೆ ಹೂವ ಸೂಾಡೋಣ ||ಪಲ್ಲವಿ|| ಇಷ್ಟಲಿಂಗವ ನೀಡಿ ಶ್ರೇಷ್ಠ ಮಾರ್ಗವ ತೋರಿ ಲಿಂಗಾಯತ ಧರ್ಮವ ಕೊಟ್ಟ ಮಹಿಮನ ಮೇಲೆ || 1|| ಒಬ್ಬ ದೇವನ ನಂಬಿ ಶ್ರದ್ದೆಯಿಂ ಸಾಗುತ ಅರಿವಿನ ನಿಲುವನ್ನು ಪಡೆದ ಸದ್ಭಕ್ತನ ಮೇಲೆ || 2|| ಕರ್ತನಿಗಲ್ಲದೆ ಕುಶ್ಚಿತಗೆರಗೆನು ಎಂದು ಛಲವ ತೊಟ್ಟ ವೀರ ಮಹೇಶನ ಮೇಲೆ || 3 || ನಾನು ಎನ್ನುವ ಹಮ್ಮನು ಹರಿಯುತ ದೇವನಿಗೊಲಿದಿಹ ಪರಮ ಪ್ರಸಾದಿಯ ಮೇಲೆ || 4 || ಅಂಗದ ಗುಣವಳಿದು ಲಿಂಗ ಭಾವವು ಬಲಿದು ಲಿಂಗದೇಹಿಯಾಗಿಹ ಪ್ರಾಣಲಿಂಗಿಯ ಮೇಲೆ || 5|| ಸತಿಸುತ ಬಳಗದ ಮೋಹವ ಛೇದಿಸಿ ದೇವಗೆ ಸತಿಯಾದ ದಿವ್ಯ ಶರಣನ ಮೇಲೆ || 6 || ಅಂಗ ಲಿಂಗ ಸಮರಸ ಶೃಂಗ ಭಾವವು ಒಲಿದು ತ್ರಿಪುಟಿಯ ಭಾವವಳಿದ ಭಾವಲಿಂಗೈಕ್ಯನ ಮೇಲೆ || 7|| ಆರು ಸ್ಥಲಗಳ ದಾಂಟಿ ಧರೆಯ ಉದ್ದಾರಕ್ಕೆ ಮಹಾಭಕ್ತ ಸ್ಥಲದಲಿ ನಿಂತ ಕರುಣಿಯ ಮೇಲೆ || 8 || ಮುಕ್ತಿದಾತನ ತೋರಿ ಮುಕ್ತಿದಾಯಕನಾದ ಸಚ್ಚಿದಾನಂದನ ಮುದ್ದು ಕಂದನ ಮೇಲೆ || 9 || -✍ ಪೂಜ್ಯ ಶ್ರೀ ಮಹಾಜಗದ್ಗುರು ಡಾ|| ಮಾತೆ ಮಹಾದೇವಿಯವರು.

ಬಸವಧರ್ಮ ಪೀಠಕ್ಕೆ ಮುಜುಗರ ತರುವಂತಹ ಘಟನೆ

Image
  ಬಸವಧರ್ಮ ಪೀಠಕ್ಕೆ ಮುಜುಗರ ತರುವಂತಹ ಘಟನೆ ಬೀದರನಲ್ಲಿ "ಬಸವೇಶ್ವರ ದರ್ಶನ ಮಹಾನಾಟ್ಯ" ನಾಟಕದ ಸಮಾಲೋಚನೆ ಸಭೆ ಕರೆಯಲಾಗಿತ್ತು.   ವೇದಿಕೆ ಮೇಲೆ ಮಾತೆ ಗಂಗಾದೇವಿಯವರು, ಭಾಲ್ಕಿ ಶ್ರೀ ಗಳು, ಬೇಳ್ದಾಲೆ ಶರಣರು, ಮಾತೆ ಸತ್ಯಾದೇವೀ ಯವರು ಹಾಗು ಇತರರು ಇದ್ದರು. ಕಾರ್ಯಕ್ರಮದ ಆಯೋಜಕರು ಎಲ್ಲಾ ಪೂಜ್ಯರಿಗೆ ಆಮಂತ್ರಣವನ್ನು ನೀಡಿದ್ದರು. ಯಾವಾಗ ಚನ್ನಬಸವಾನಂದ ಸ್ವಾಮೀಜಿ ಅವರು ಸ್ವಲ್ಪ ತಡವಾಗಿ ಬಂದು ಸಭೆಗೆ ಆಗಮಿಸಿ ವೇದಿಕೆ ಮೇಲೆ ಬಂದು ಕುರ್ಚಿ ಮೇಲೆ ಕೂತ ತಕ್ಷಣ ಗಂಗಾ ಮಾತಾಜಿ ಅವರು ತನ್ನ ಸ್ಥಾನದಿಂದ ಎದ್ದು ಸರಸರನೆ ಹೊರಗೆ ಹೋದರು.  ನಂತರ ಕೆಲವರು ಅವರ ಹಿಂದೆ ಹೋಗಿ ವಿನಂತಿಸಿದಾಗ  ಸಭಾ ಮಂಟಪದ ಹಿಂದಿನ ಕೊನೆಯ ಸಾಲಿನಲ್ಲಿ ಜನರ ಜೊತೆ ಕೆಳಗಡೆಯೆ ಕುಳಿತರು. "ದಯವಿಟ್ಟು ವೇದಿಕೆ ಮೇಲೆ ಬನ್ನಿ" ಎಂದು ಕಾರ್ಯಕ್ರಮದ ಆಯೋಜಕರು ಗಂಗಾಮಾತಾಜಿ ಅವರಿಗೆ ಬಹಳಷ್ಟು ವಿನಂತಿ ಮಾಡಿಕೊಂಡರು. ಆದರೂ ಕೂಡ ಅವರು ಮೇಲೆ ಬರಲಿಲ್ಲ. ಇದನ್ನು ನೋಡಿ, ಸ್ವಲ್ಪ ಸಮಯದ ನಂತರ  ಚನ್ನಬಸವಾನಂದ ಸ್ವಾಮೀಜಿ ಅವರು ದೊಡ್ಡ ಮನಸ್ಸು ಮಾಡಿ ತಾವೇ ವೇದಿಕೆ ಯಿಂದ ಇಳಿದು ಸಭಾ ಮಂಟಪದ ಹೊರಗಡೆ ಹೋಗಿ ಕುಳಿತರು. ಆವಾಗ ಕೆಳಗಡೆ ಕೂತಿದ್ದ ಗಂಗಾ ಮಾತಾಜಿ ಅವರು ಮತ್ತೆ ವೇದಿಕೆ ಮೇಲೆ ಬಂದು ತಮ್ಮ ಸ್ಥಾನ ದಲ್ಲಿ ಕುಳಿತರು.  ಇದನ್ನೆಲ್ಲ ನೋಡಿ ಸಭೆಯಲ್ಲಿ ಭಾಗವಹಿಸಿದ ಜನರೆಲ್ಲಾ  ಅಚ್ಚರಿ ಪಡಬೇಕಾಯಿತು. ಒಂದು ಪೀಠಾಧ್ಯಕ್ಷ ಸ್ಥಾನದಲ...