Posts

Showing posts from August, 2024

ಧರ್ಮ ಮತ್ತು ಸಂಸ್ಕಾರ

Image
  ~: ಧರ್ಮ ಮತ್ತು ಸಂಸ್ಕಾರ :~ ಹಲವಾರು ಸಂಸ್ಕಾರಗಳಲ್ಲಿ ದೀಕ್ಷಾಸಂಸ್ಕಾರವು ಅತಿ ಪ್ರಾಮುಖ್ಯವಾದ ಪ್ರಸಂಗ. ಕೇವಲ ಮಾನವನಿಗಲ್ಲದೆ ಇತರ ವಸ್ತುಗಳಿಗೂ ಸಂಸ್ಕಾರ ಬೇಕೆಂಬುದನ್ನು ನೋಡುವಾ. ಮಣ್ಣಿಗೆ ಸಂಸ್ಕಾರ ಕೊಟ್ಟರೆ ಮಡಿಕೆಯಾಗುವದು. ಗೋವಿನ ಸಗಣಿಗೆ ಸಂಸ್ಕಾರ ಕೊಟ್ಟರೆ ಭಸಿತವಾಗುವದು. ಕಬ್ಬಿನ ಸಿಪ್ಪೆಗೆ ಸಂಸ್ಕಾರ ಕೊಟ್ಟರೆ ಕಾಗದವಾಗುವದು, ಹಾಲಿಗೆ ಸಂಸ್ಕಾರ ಕೊಟ್ಟರೆ ತುಪ್ಪವಾಗುವದು. ಗೋಧಿಗೆ ಸಂಸ್ಕಾರ ಕೊಟ್ಟರೆ ಪಾಯಸವಾಗುವದು, ಭತ್ತಕ್ಕೆ ಸಂಸ್ಕಾರ ಕೊಟ್ಟರೆ ಅನ್ನವಾಗುವದು, ಜಲಕ್ಕೆ ಸಂಸ್ಕಾರ ಕೊಟ್ಟರೆ ಪಾದೋದಕವಾಗುವದು, ತಿನ್ನುವ ಪದಾರ್ಥಕ್ಕೆ ಸಂಸ್ಕಾರ ಕೊಟ್ಟರೆ ಪ್ರಸಾದವಾಗುವದು, ಶಬ್ದಕ್ಕೆ ಸಂಸ್ಕಾರ ಕೊಟ್ಟರೆ ಮಂತ್ರವಾಗುವದು, ಕಲ್ಲಿಗೆ ಸಂಸ್ಕಾರ ಕೊಟ್ಟರೆ ವಿಗ್ರಹವಾಗುವದು, ಶಿಲೆಗೆ ಸಂಸ್ಕಾರ ಕೊಟ್ಟರೆ ಲಿಂಗವಾಗುವುದು. ಅದರಂತೆ, ಭವಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಭಕ್ತನಾಗುವನು. ಜೀವನಿಗೆ ಲಿಂಗದೀಕ್ಷಾ ಸಂಸ್ಕಾರ  ಕೊಟ್ಟರೆ ಶಿವರೂಪನಾಗುವನು. ನರನಿಗೆ ಲಿಂಗದೀಕ್ಷಾ ಸಂಸ್ಕಾರ ಕೊಟ್ಟರೆ ಹರರೂಪನಾಗುವನು. ~: ಸದ್ಗುರು ಸ್ವಾಮಿ ಲಿಂಗಾನಂದರು :~ Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಶಿವಾನಂದ ಸ್ವಾಮೀಯವರ ಸ್ವಾನುಭಾವಕ್ಕೆ ನಿಲುಕದ ವಚನಗಳು

Image
  ಶಿವಾನಂದ ಸ್ವಾಮೀಯವರ ಸ್ವಾನುಭಾವಕ್ಕೆ ನಿಲುಕದ  ವಚನಗಳು ವಚನ: " ಮರೆಯಲಾಗದು ಹರಿಯ ಮ ರೆಯಲಾಗದು ಬ್ರಹ್ಮನ ! ಮರೆಯಲಾಗದು ತೆತ್ತೀಸಕೋಟಿ ದೇವರ್ಕಳ ! ನಮ್ಮ ಕೂಡಲಸಂಗಮದೇವರ ಮರೆಯಲಹುದು " (ಪದಗಳ ಅರ್ಥ: ಮರೆ=ಆಶ್ರಯ; ತೆತ್ತೀಸ ಕೋಟಿ = ಮೂವತ್ತಾರು ಕೋಟಿ; ದೇವರ್ಕಳ = ದೇವತೆಗಳ; ಕೂಡಲಸಂಗಮದೇವಾ=ಲಿಂಗದೇವಾ) ಪರಮ ಪೂಜ್ಯ ಲಿಂಗೈಕ್ಯ ಮಾತೆ ಮಹಾದೇವಿ ಮಾತಾಜಿಯವರು ಅನೇಕಬಾರಿ ಹೀಗೆ ಹೇಳುತ್ತಿದ್ದರು *“ವಚನ ಸಾಹಿತ್ಯವೆನ್ನುವುದು  ಮೂರು ಬೀಗಗಳನ್ನು ಹಾಕಿದ ಭದ್ರವಾದ ಬೀರುವಿನೊಳಗೆ ಇಟ್ಟಿರುವ ನಿಧಿ ಇದ್ದ ಹಾಗೆ ಇದೆ. ಈ ನಿಧಿಯನ್ನು ತೆಗೆಯಲು ಮೂರು ಕೀಲಿಕೈಗಳು ಬೇಕು. ಒಂದನೆಯದು ಸಾಹಿತ್ಯದ ಕೀಲಿಕೈ, ಎರಡನೆಯದು ತತ್ವಜ್ಞಾನದ ಕೀಲಿಕೈ, ಮೂರನೆಯದು ಅನುಭಾವದ ಕೀಲಿಕೈ”* ಇದು ಅಕ್ಷರಶಃ ಸತ್ಯವಾದ ಮಾತು.  ಕೇವಲ ಸಾಹಿತ್ಯ ಜ್ಞಾನ, ಕೇವಲ ತತ್ವಜ್ಞಾನ, ಕೇವಲ ಅನುಭಾವ ಹೊಂದಿದವರಿಗೆ ಗುರು ಬಸವಣ್ಣನವರ ಅಂತರಾಳ ಮತ್ತು ವಚನ ಸಾಹಿತ್ಯವನ್ನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯವಿಲ್ಲ. ಸಾಹಿತ್ಯ ಜ್ಞಾನ, ತತ್ವಜ್ಞಾನ ಮತ್ತು ಅನುಭಾವ ಹೊಂದಿದವರಿಂದ ಮಾತ್ರ ವಚನ ಸಾಹಿತ್ಯ ಅರಿತುಕೊಳ್ಳಲು ಸಾಧ್ಯವಿದೆ. ʼವಚನ ದರ್ಶನʼ ಪುಸ್ತಕ ಸಂಪಾದಿಸಿರುವ ಶಿವಾನಂದ ಸ್ವಾಮೀಯವರು ಟಿವಿಯ ಸಂದರ್ಶನವೊಂದರಲ್ಲಿ ಮೇಲಿನ ವಚನವನ್ನು ಉಲ್ಲೇಖಿಸಿ ಗುರು ಬಸವಣ್ಣನವರು ದೇವಾನುದೇವತೆಗಳನ್ನು ನಿರಾಕರಿಸಿಲ್ಲ ಎನ್ನುವ ಅಭಿಪ್ರಾಯವನ್ನು ಕೊಟ್ಟಿದ್ದಾ...

ದೀಕ್ಷೆಯಿಲ್ಲದೆ ಮೋಕ್ಷವಿಲ್ಲ

Image
ದೀಕ್ಷೆಯಿಲ್ಲದೆ ಮೋಕ್ಷವಿಲ್ಲ ೧೨ ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಕೊಟ್ಟ ಇಷ್ಟಲಿಂಗ ದೀಕ್ಷೆಯನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಪ್ರತಿದಿನ ಲಿಂಗಪೂಜೆಯನ್ನು ಮಾಡಿಕೊಳ್ಳಬೇಕು. ಲಿಂಗಪೂಜೆಯಿಂದ ಮನಸು ಹಗುರವಾಗಿ ಆನಂದಮಯವಾಗುತ್ತದೆ. ತ್ರಾಟಕ ಯೋಗದಿಂದ ಕಣ್ಣುಗಳಲ್ಲಿ ಕಾಂತಿ ಹೆಚ್ಚಾಗುತ್ತದೆ. ಮಕ್ಕಳು ಚಿಕ್ಕವರಿದ್ದಾಗಲೇ ಗುರುವಿನ ಹಸ್ತ ಮಸ್ತಕ ಸಂಯೋಗದಿಂದ ದೀಕ್ಷೆ ಕೊಡಿಸಬೇಕು. ಹಲವು ಕಡೆಗಳಲ್ಲಿ ಮಕ್ಕಳಿಗೆ ದೀಕ್ಷೆ ಕೊಡೋಣವೆಂದು ಗುರುಗಳು ಹೇಳಿದಾಗ ಪಾಲಕರು ಅದನ್ನು ತಿರಸ್ಕರಿಸುತ್ತಾರೆ. ಮಗು ಇನ್ನೂ ಚಿಕ್ಕವನು, ದೊಡ್ಡವನಾದ ಮೇಲೆ ದೀಕ್ಷೆ ಕೊಡಿಸೋಣವೆಂದು ಮಕ್ಕಳನ್ನು ದಾರಿ ತಪ್ಪಿಸುತ್ತಾರೆ. ಅದು ತಪ್ಪು. "ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಆಧ್ಯಾತ್ಮದ ಜ್ಞಾನ ನೀಡಬೇಕು. ಸಂಸ್ಕಾರ ಕೊಡಿಸಬೇಕು. ಇಲ್ಲದಿದ್ದರೆ ಮಕ್ಕಳು ದಾರಿ ತಪ್ಪುತ್ತಾರೆ. ಒಮ್ಮೆ ದೀಕ್ಷೆ ಇಲ್ಲದೆ ಮೋಕ್ಷವಿಲ್ಲ' ಎಂಬ ನಮ್ಮ ಲೇಖನ ಪತ್ರಿಕೆಯಲ್ಲಿ ಓದಿ ಒಬ್ಬ ತಾಯಿ ಬಂದು ದೀಕ್ಷೆ ಪಡೆದುಕೊಂಡರು. ಇದು ಇತರರಿಗೂ ಸ್ಫೂರ್ತಿಯಾಗಬೇಕು. ಹುಟ್ಟಿದಾಗಲೂ ಲಿಂಗ ಕಟ್ಟುತ್ತಾರೆ. ಕೊನೆಗೆ ಲಿಂಗೈಕ್ಯರಾಗಿ ಅಂತೀಮ ಸಂಸ್ಕಾರ ನೆರವೇರಿಸುವಾಗಲೂ ಎಲ್ಲಾ ಒಡವೆ ತೆಗೆದು ಕೇವಲ ಲಿಂಗ ಮಾತ್ರ ಕಟ್ಟುತ್ತಾರೆ. ಒಡವೆ ತೆಗೆಯುವಾಗ ಅವು ಬರದಿದ್ದರೆ ಶರೀರದ ಅಂಗಾಂಗಳನ್ನು ಕತ್ತರಿಸಿ ಒಡವೆ ತೆಗೆಯುತ್ತಾರೆ. ಕೊನೆಯ ಕ್ಷಣದಲ್ಲಿ ನಮ...

ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ

Image
ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ Guru Basava was only ever married once, and his wife's name is Nilambike ಗುರು ಬಸವಣ್ಣನವರು ಮದುವೆಯಾದದ್ದು ಒಬ್ಬಳನ್ನೆ ಕ್ರಾಂತಿಕಾರಿ ವಿಚಾರಶೀಲರೂ, ಸ್ತ್ರೀ ವಿಮೋಚನಾವಾದಿಯೂ, ಸ್ತ್ರೀ ಸಮತಾವಾದಿಯೂ ಆದ ಬಸವಣ್ಣನವರು ಇಬ್ಬರು ಹೆಂಡತಿಯರನ್ನು ಹೊಂದಿದ್ದರೆ ? ಮೊದಲ ಹೆಂಡತಿಗೆ ಮಕ್ಕಳಾಗಲಿಲ್ಲವೆಂದೆ ? ಅಥವಾ ನೀಲಾಂಬಿಕೆ ತನ್ನ ಚೆಲುವು-ನಡೆನುಡಿಗಳಿಂದ ಮನಸೆಳೆದಳೆ ? ಅಥವಾ ಬಿಜ್ಜಳ ಮಹಾರಾಜನು ತನ್ನ ವಚನ ರಕ್ಷಣೆಗಾಗಿ ಬಸವಣ್ಣನವರನ್ನು ತಮ್ಮ ತತ್ಯದಿಂದ ದೂರಸರಿಯುವಂತೆ ಮಾಡಿದನೆ ? ಹೀಗೆಲ್ಲ ಸಂಶಯಗಳು ಉಳಿದವರಂತೆ ನಮಗೂ ಕಾಡುತ್ತಿದ್ದವು. ಕ್ರಾಂತಿಯೋಗಿ ಬಸವಣ್ಣ ಚಲನ ಚಿತ್ರದಲ್ಲಿ ಹೀಗೇ ಚಿತ್ರಿಸಿರುವೆವಲ್ಲದೆ ತೀರಾ ಇತ್ತೀಚಿನವರೆಗೆ ಹಾಗೆಯೇ ತಿಳಿದಿದ್ದೆವು ಮತ್ತು ಇನ್ನಿತರ ಪುಸ್ತಕಗಳಲ್ಲೂ ಹಾಗೆಯೇ ಬರೆದಿದ್ದೆವು. ದಿವಂಗತ ಹೆಚ್.ದೇವೀರಪ್ಪನವರ ಒಂದು ಲೇಖನ “ಬಸವರಾಜನರಸಿಯರು'' (ಧರ್ಮದುಂದುಭಿ-ಕಲ್ಯಾಣ ಕಿರಣ ವಿಶೇಷಾಂಕ ೧೯೮೭ ಸೆಪ್ಟಂಬರ- ಅಕ್ಟೋಬರ್) ಓದಿದಾಗ ನಮ್ಮ ಚಿಂತನೆಗೆ ಹೊಸ ದಿಕ್ಕು ದೊರಕಿತು. ಶ್ರೀ ದೇವೀರಪ್ಪನವರ ಹೆಸರನ್ನು ಈ ವಿಷಯವಾಗಿ ಖಂಡಿತವಾಗಿಯೂ ಹೇಳುವೆವು. ಕೆಲವು ದೊಡ್ಡ ದೊಡ್ಡ ಸಾಹಿತಿಗಳು ನಮ್ಮ ಅನೇಕ ಹೊಸ ಸಂಶೋಧನಾತ್ಮಕ ವಿಚಾರಗಳನ್ನು ಫಕ್ಕನೆ ಎತ್ತಿಕೊಂಡು ತಮ್ಮ ಪುಸ್ತಕದಲ್ಲಿ ಬರೆದು, ಆ ಬಗ್ಗೆ ನಮ್ಮ ಗ್ರಂಥಗಳನ್ನು ಮಾತ್ರ ಉಲ್ಲೇಖಿಸದ...

"ಉಪನಿಷತ್ತಿನಲ್ಲಿರುವುದೆಲ್ಲಾ ವಚನ ಸಾಹಿತ್ಯದಲ್ಲಿ ಇದೆ ಆದರೆ ವಚನ ಸಾಹಿತ್ಯದಲ್ಲಿರುದೆಲ್ಲಾ ಉಪನಿಷತ್ತಿನಲ್ಲಿ ಇಲ್ಲ | "

Image
 " ಉಪನಿಷತ್ತಿನಲ್ಲಿರುವುದೆಲ್ಲಾ ವಚನ ಸಾಹಿತ್ಯದಲ್ಲಿ ಇದೆ ಆದರೆ ವಚನ ಸಾಹಿತ್ಯದಲ್ಲಿರುದೆಲ್ಲಾ ಉಪನಿಷತ್ತಿನಲ್ಲಿ ಇಲ್ಲ " -  ರಂಗನಾಥ ದೀವಾಕರ ಉನ್ನತ ಸಂಸ್ಕೃತ ವಿದ್ವಾಂಸರು (ವೈದಿಕ ಸಾಹಿತ್ಯ ಪಂಡಿತರು) ಹಾಗೂ ಪ್ರಖ್ಯಾತ ಲೇಖಕರು " Everything that is in the Upanishads is in the Vachana Sahitya, but everything that is in the Vachana Sahitya is not in the Upanishads" -  Ranganatha Diwakara Eminent Sanskrit Scholars (Vedic Literature Scholars) and eminent authors. Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

Snake Does not drink Milk | ಹಾವು ಹಾಲು ಕೊಡಿಯುವುದಿಲ್ಲಾ

  ವಚನ ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯಾ ಉಂಬ ಜಂಗಮ ಬಂದಡೆ ನಡೆಯೆಂಬರು  ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯಾ. ನಮ್ಮ ಕೂಡಲಸಂಗನ ಶರಣರ ಕಂಡು ಉದಾಸೀನವ ಮಾಡಿದಡೆ  ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯಾ - ವಿಶ್ವಗುರು ಬಸವಣ್ಣನವರು

Hindhu ಹಿಂದು (ಲಿಂಗಾಯತರಯ ಹಿಂದುಗಳಲ್ಲಾ/ Lingayat are not Hindhu)

Image
  Hindhu ಹಿಂದು (ಲಿಂಗಾಯತರಯ ಹಿಂದುಗಳಲ್ಲಾ/ Lingayat are not Hindhu) ಹಿಂದು ವ್ಯಾಖ್ಯಾನ ನೊಡಿ , ಹಾಗಾಗಿ ನಾವು (ಲಿಂಗಾಯತರು) ಹಿಂದುಗಳಲ್ಲಾ Please Comment Your Thought on this article ದಯವಿಟ್ಟು ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ

ಪರಮ ದಾಸೋಹಿ ಲಿಂಗಾಂಗ ಯೋಗಿ ನೀಲಗಂಗಾಂಬಿಕಾ ತಾಯಿಯವರ ಲಿಂಗೈಕ್ಯ ಸಂಸ್ಮರಣೆ

Image
ಪರಮ ದಾಸೋಹಿ ಲಿಂಗಾಂಗ ಯೋಗಿ ನೀಲಗಂಗಾಂಬಿಕಾ ತಾಯಿಯವರ ಲಿಂಗೈಕ್ಯ ಸಂಸ್ಮರಣೆ  *ನೀಲಾಂಬಿಕಾ ಷಷ್ಠಿ* (10.08.2024) ವಚನ: ಪರಮ ದಾಸೋಹವನು ನೆರೆಮಾಡಿ ಜಂಗಮದ ಪರಮ ಪ್ರಸಾದವನು ಸವಿದು ಸುಖದಿ ಕರದಿಷ್ಟಲಿಂಗದೊಳೂ ಶರೀರವನಿಂಬಿಟ್ಟ ಕರುಣಿ ನೀಲಮ್ಮ ಶರಣು ಯೋಗಿನಾಥ -ಬಸವಯೋಗಿ ಸಿದ್ಧರಾಮೇಶ್ವರರು. ವಿಶ್ವ ವಿಭೂತಿ, ಜ್ಞಾನಜೋತಿ, ಭಕ್ತಿ  ಭಂಡಾರಿ ವಿಶ್ವಗುರು ಬಸವಣ್ಣನವರು ತಮ್ಮ ಸುತ್ತಲಿನ ಸಮಾಜದಲ್ಲಿರುವ ವೈಷಮ್ಯ ಮತ್ತು ಅಸಮಾನತೆಯನ್ನು ತೊಡೆದುಹಾಕಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಹೊಸ ಲಿಂಗಾಯತ ಧರ್ಮವನ್ನು ನೀಡಿ ಹೊಸ ಸಮಾಜವನ್ನು ರಚಿಸುವ ಕಾರ್ಯದಲ್ಲಿ ತೊಡಗಿದಾಗ, ಅಕ್ಕನಾಗಮ್ಮನವರಿಂದ ಲಿಂಗಾಯತ ಧರ್ಮ ದೀಕ್ಷೆಯನ್ನು ಪಡೆದು ಆತ್ಮೋನ್ನತಿಯ ಮಾರ್ಗವನ್ನು ತುಳಿದು ಗುರು ಬಸವಣ್ಣನವರ ವಿಚಾರಪತ್ನಿ (Intellectual companion)ಯಾಗಿ ಬಾಳಿದವರು ಪರಮ ದಾಸೋಹಿ ಲಿಂಗಾಂಗ ಯೋಗಿ ನೀಲಾಂಬಿಕಾ ತಾಯಿ. ನೀಲಲೋಚನೆ, ಗಂಗಾಂಬಿಕೆ, ನೀಲಗಂಗಾ, ನೀಲಗಂಗಾಬಿಕೆ ನೀಲವ್ವ ಎಂದೂ ಇವರನ್ನು ಕರೆಯುತ್ತಿದ್ದರು. ಬಾಲ್ಯ: ಕಲಚೂರ್ಯ ಬಿಜ್ಜಳನ ಮಹಾಮಂತ್ರಿ ಬಲದೇವರಸರ ಏಕೈಕ ಪುತ್ರಿ ನೀಲಾಂಬಿಕೆ ಇವರ ತಾಯಿಯ ಹೆಸರು ಮುಕ್ತಾಂಬೆ ಎಂದು ಸಾಹಿತ್ಯದಲ್ಲಿ ಹೇಳಲಾಗಿದೆ. ರಾಜಕೀಯ ಮನೆತನದಲ್ಲಿ ಬೆಳೆದುದರಿಂದ ಧೈರ್ಯ ಸ್ಥೈರ್ಯಗಳು ಸ್ವಭಾವಿಕವಾಗಿ ಬೆಳೆದು ಬಂದಿದ್ದವು. ಸಾಹಿತ್ಯ, ಸಂಗೀತ, ಕತ್ತಿವರಸೆಗಳಲ್ಲೂ ಬಲ್ಲಿದವರಾಗಿದ್ದರು. ತಂದೆಯ ಪ್ರತಿಯೊಂದು ಕಾರ್ಯದಲ್...