Posts

Showing posts from October, 2024

ಲಿಂಗಾಯತ ಧರ್ಮ ವಿರೋಧೀ ಹೇಳಿಕೆಗಳ ಹಿಂತೆಗೆಸಲು ಆಗ್ರಹ

Image
    ಲಿಂಗಾಯತ ಧರ್ಮ ವಿರೋಧೀ ಹೇಳಿಕೆಗಳ ಹಿಂತೆಗೆಸಲು ಆಗ್ರಹ  ನಿಜಗುಣಾನಂದ್,ಜಾಮದಾರ್,ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ  ,ಮೀನಾಕ್ಷಿಬಾಳಿ ಇನ್ನೂ ಮುಂತಾದ ಕೆಲವರು  ಬಸವಣ್ಣನವರನ್ನು ಹೊಗಳುತ್ತಲೇ  ಲಿಂಗಾಯತ ಧರ್ಮದ ತತ್ವಗಳ ಮಹತ್ವವನ್ನು ಗೌಣ ಮಾಡಿ, ತತ್ವಗಳನ್ನು ಸಡಿಲಗೊಳಿಸಿ, ಲಿಂಗಾಯತರನ್ನು ಅಂತರ್ಜಾತಿ ವಿವಾಹ ಮತ್ತು ಮಾಂಸಾಹಾರಕ್ಕೆ ಒಗ್ಗಿಸಲು ನೀಡಿರುವ ಲಿಂಗಾಯತ ಧರ್ಮ ವಿರೋಧೀ ಹೇಳಿಕೆಗಳನ್ನು ಕೂಡಲೇ ಹಿಂತಿರುಗಿಸದಿದ್ದರೆ ಲಿಂಗಾಯತ ಸಮಾಜದ ಅಸ್ತಿತ್ವ ಉಳಿಯದು! ಒಂದು ವೇಳೆ ಅಲ್ಪಸ್ವಲ್ಪ ಸಮಾಜ ಉಳಿದರೂ ಅದು ಅರೆಜೀವವಾದಂತೆ ಅಥವಾ ಸತ್ತಂತೆ ಇರುತ್ತದೆ! ಅವರಿಗೆ ಬುದ್ಧಿ, ವಿವೇಕ, ತಿಳುವಳಿಕೆ ನೀಡಬೇಕು. ಹಾಗೂ ಹಿಂತೆಗೆದುಕೊಳ್ಳದಿದ್ದರೆ ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಅಥವಾ ಅನ್ವಯವಾಗುವ ಅಂತಹ ಯಾವುದೇ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ!                        ಇಲ್ಲದಿದ್ದರೆ ಅವರುಗಳ ಹೇಳಿಕೆಗಳು ದಾಖಲೆಗಳಾಗಿ ಉಳಿದು, ಅವೇ ಲಿಂಗಾಯತ ಧರ್ಮದ ತತ್ವಗಳೆಂದು ಮೂಢ, ಮುಗ್ಧ, ಅಜ್ಞಾನಿ, ಎಡವಟ್ಟು ಲಿಂಗಾಯತರು ತಪ್ಪಾಗಿ ತಿಳಿದು ಅನುಸರಿಸಿ ಪಾಲಿಸಿದರೆ ಲಿಂಗಾಯತ ಸಮಾಜದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ! ಗುರು ಬಸವದಿ ಪ್ರಮಥ ಪ್ರಣೀತ  ಲಿಂಗಾಯತ ಧರ್ಮ ಮತ್ತು ಸಮಾಜ ಮಹಾಸೌಧದ ಭದ್ರ ...

ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಿರು ಲೇಖನ

 *ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಿರು ಲೇಖನ.* *लोकशाही दिनानिमित्त एक छोटासा लेख.* ವಿಶ್ವಗುರು ಬಸವಣ್ಣನವರು 12ನೇ ಶತಮಾನ ಕಂಡ ಶ್ರೇಷ್ಠ ದಾರ್ಶನಿಕ ಪ್ರವಾದಿಗಳು. ಲಿಂಗಾಯತ ಧರ್ಮ ಸ್ಥಾಪನೆ ಮಾಡುವುದರ ಮೂಲಕ ಇಡೀ ವಿಶ್ವಕ್ಕೆ ಸಮಾನತೆಯನ್ನು ಸಾರಿದರು. ಅವರು ಬೋಧಿಸಿದ ವಚನಗಳಲ್ಲಿ ಮಾನವೀಯತೆ ದಯಾಶೀಲತೆ ವಿನಯತೆ ಸಾಮಾಜಿಕ ಸಮಾನತೆ ಧಾರ್ಮಿಕತೆ, ಆಧ್ಯಾತ್ಮಿಕತೆ ವಿಚಾರಗಳು ಇವೆ. ಬಸವಣ್ಣನವರ ಸಮಕಾಲಿನದಲ್ಲಿ 770 ಅವರ ಗಣಗಳು ಆಗಿ ಹೋಗಿದ್ದಾರೆ. ಬಸವಾದಿ ಶರಣರ ವಚನಗಳು ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ ಅವು ಕಾಲ ದೇಶ ಭಾಷೆ ಜಾತಿ ಮತ ಪಂಥ ಪಂಗಡಗಳ ಮೀರಿ ಸರ್ವರ ಹೃದಯವನ್ನು ಬೆಸೆಯುತ್ತವೆ. ಶರಣರು ಬೋಧಿಸಿದ ಮುಖ್ಯವಾದ ವಿಚಾರವೆಂದರೆ ಕಾಯಕ ದಾಸೋಹ. ಪ್ರತಿಯೊಬ್ಬ ವ್ಯಕ್ತಿ ದುಡಿದು ಉಣ್ಣಬೇಕು ತನ್ನ ಕುಟುಂಬವನ್ನು ಸ್ವಾಭಿಮಾನದಿಂದ ಮುನ್ನೆಡೆಸಬೇಕು ಮತ್ತು ಗಳಿಸಿದ ಹಣದಲ್ಲಿ ಒಂದು ಪಾಲಾದರೂ ಸಮಾಜ ದೇಶ ವಿಶ್ವದ ಜನತೆಗೆ ದಾಸೋಹದ ಮೂಲಕ ವಿನಿಯೋಗ ಮಾಡಬೇಕು ಎಂಬುದು ಅವರ ಆಶಯವಾಗಿತ್ತು. ಇಂದು ಪ್ರಜಾಪ್ರಭುತ್ವದ ದಿನ ಪ್ರಜಾಪ್ರಭುತ್ವಕ್ಕೆ ಧ್ವನಿಯಾದ ಹಾಗೂ ಪ್ರಜಾಪ್ರಭುತ್ವವನ್ನು ಹುಟ್ಟು ಹಾಕಿದ ಬಸವಾದಿ ಶರಣರನ್ನು ಇಂದು ನಾವು ಸ್ಮರಿಸಿಕೊಳ್ಳೋಣ. ಶರಣರ ಪ್ರಜಾಪ್ರಭುತ್ವವನ್ನು 21ನೇ ಶತಮಾನದಲ್ಲಿ ಯಶಸ್ವಿಗೊಳಿಸುತ್ತಿರುವ ಭಾರತದ ಆದಿಯಾಗಿ ವಿಶ್ವದ ಪ್ರಜಾಪ್ರಭುತ್ವ ಅಳವಡಿಸಿಕೊಂಡ ರಾಷ್ಟ್ರಗಳನ್ನು ಗೌರವಿಸ...

20/25 ಲಕ್ಷ ಬೆಲೆಯ ಒಂದು ಕಾರು ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನೇ ಬದಲಿಸುತ್ತದೆ ಎಂಬುದು ಖಂಡಿತ ವಾಸ್ತವಿಕ ಸತ್ಯ.

 ಮತ್ತೆ ಮತ್ತೆ ನಮ್ಮನ್ನು ಪ್ರಶ್ನಿಸಿಕೊಳ್ಳಲೇಬೇಕಿದೆ, ಮತ್ತೆ ಮತ್ತೆ ನಮ್ಮ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಿದೆ, ಏಕೆಂದರೆ ಕೇವಲ 20/25 ಲಕ್ಷ ಬೆಲೆಯ ಒಂದು ಕಾರು ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನೇ ಬದಲಿಸುತ್ತದೆ ಎಂಬುದು ಖಂಡಿತ ವಾಸ್ತವಿಕ ಸತ್ಯ.  ಕಾರು ಹೊಂದಿದ ವ್ಯಕ್ತಿ ಇದ್ದಕ್ಕಿದ್ದಂತೆ ಕಾರಿನ ಮಹಿಮೆಯಿಂದಲೇ ಬುದ್ದಿವಂತನೆಂತಲೋ, ಶ್ರಮಜೀವಿಯೆಂತಲೋ, ಯಾವುದೋ ಪಕ್ಷ ಅಥವಾ ಸಂಘಟನೆಯ ನಾಯಕನೆಂತಲೋ, ಶ್ರೀಮಂತನೆಂತಲೋ, ಬಹುತೇಕರಿಂದ ಹುಸಿ ಗೌರವ ಪಡೆಯಲಾರಂಭಿಸುತ್ತಾನೆ.  ಆತನ ಹಿನ್ನಲೆ, ಹಣದ ಮೂಲ,ವರ್ತನೆ ಯಾವುದೂ ಮುಖ್ಯವಾಗುವುದಿಲ್ಲ.                            ಅದೇ ಒಬ್ಬ ಸರಳ, ಸಜ್ಜನ, ವಿದ್ಯಾವಂತ, ನಿಜವಾದ ಶ್ರಮಜೀವಿ ಸಾರ್ವಜನಿಕ ಸಾರಿಗೆ ಬಸ್ಸಿನಲ್ಲೋ, ಸೈಕಲ್ ನಲ್ಲೋ ಓಡಾಡುತ್ತಾ ಸಾಧಾರಣ ಬಟ್ಟೆ ಧರಿಸಿದ್ದರೆ ನಿಜವಾಗಿ ಆತನಿಗೆ ಸಿಗುವ ಮರ್ಯಾದೆ ಅಷ್ಟಕಷ್ಟೇ. ಅದರಲ್ಲೂ ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಆತ ಅವಮರ್ಯಾದೆಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು. ಬಂಧು ಬಳಗದವರಲ್ಲಿ ಸರಳ ವ್ಯಕ್ತಿಯ ಬಗ್ಗೆ ಆತ ಏನೋ ಒಬ್ಬ ಮಾನಸಿಕ ಅಸ್ವಸ್ಥ ಅಥವಾ ಕೆಲಸಕ್ಕೆ ಬಾರದವನು ಎಂಬಂತೆ ಸಹಾನುಭೂತಿ ವ್ಯಕ್ತವಾಗುತ್ತದೆ.                      ...

ಊರಿಗೆ ದಾರಿಯನ್ನು ತೋರುವವನು ಇಂಥವನೇ ಇರಬೇಕೆಂದಿಲ್ಲ

 *🌷ಶ್ರೀವಾಣಿ 21-7-2024🌷* *ಊರಿಂಗೆ ದಾರಿಯನು ಯಾರು ತೋರಿದರೇನು ?* *ಸಾರಾಯದ ನಿಜವನರುಹುವ ಗುರುವು,* *ಯಾರಾದರೇನು ಸರ್ವಜ್ಞ!* ಊರಿಗೆ ದಾರಿಯನ್ನು ತೋರುವವನು ಇಂಥವನೇ ಇರಬೇಕೆಂದಿಲ್ಲ. ಹಾಗೆಯೇ ಮುಕ್ತಿಯ ಮಾರ್ಗವನ್ನು ತೋರುವ ಗುರುವಾದರೂ ಹೀಗೇ ಇರಬೇಕು. ಇಂಥವನೇ ಇರಬೇಕು ಎಂದಿಲ್ಲ. ಆದುದರಿಂದ ಸತ್ಯವನ್ನರಿಯುವ ತೀವ್ರವಾದ ಹಂಬಲವುಳ್ಳವರಾಗಿ ಜಾಗ್ರತೆಯಿಂದ ನಡೆದರೆ ಜಗವಿದೆಲ್ಲವೂ ಗುರುವಾಗಿ ಕೈ ಹಿಡಿದು ಮುನ್ನಡೆಸುತ್ತದೆ. *'ಕರಣಾಳು ಬಾ ಬೆಳಕೇ ಕೈ ಹಿಡಿದು ಮುನ್ನಡೆಸು'* ಎಂದು ಮನದುಂಬಿ ಪ್ರಾರ್ಥಿಸಿದರೆ ಸಾಕು ನಿಸರ್ಗವೆ ನಮಗೆ ನಿಜವಾದ ಗುರುವಾಗಿ ನಿಲ್ಲುತ್ತದೆ. ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ *ಪೂರ್ಣಯೋಗ* ಪುಸ್ತಕದಿಂದ ಪುಟ 36. *ನಿಮಗೆ ನಿಮ್ಮವರೆಲ್ಲರಿಗೆ ಒಳ್ಳೆಯದಾಗಲಿ ಶುಭ ಮುಂಜಾನೆ ಶುಭದಿನ ಶರಣು* ಹಣವಂತ ನಾಗುವ ಬದಲು ಗುಣವಂತನಾಗು ಏಕೆಂದರೆ ನಿಸರ್ಗ ಮತ್ತು ಜನರು ಹಣವಂತ ನನ್ನು ಪೂಜಿಸಿಲ್ಲ ಸ್ಮರಿಸಿಲ್ಲ ಗುಣವಂತನನ್ನು ಪ್ರತಿದಿನವೂ ಸ್ಮರಿಸುವರು ಪೂಜಿಸುವರು🙏🙏🙏🙏🙏🙏 ಸಮಯ ನೀಡಿ ಓದಿದ ತಮಗೆ ಧನ್ಯವಾದಗಳು

ಮಕ್ಕಳನ್ನು ನೈತಿಕ ಮಾರ್ಗದಲ್ಲಿ ಬೆಳೆಸುವುದು ತಂದೆ ತಾಯಿ ಮತ್ತು ಸಮಾಜದ ಕರ್ತವ್ಯವಾಗಿದೆ: ಶರಣಾನಂದ ಸ್ವಾಮೀಜಿ

 ಓಂ ಶ್ರೀ ಗುರು ಬಸವ ಲಿಂಗಾಯ ನಮಃ *ಪತ್ರಿಕಾ ಪ್ರಕಟಣೆ ಕೃಪೆಗಾಗಿ* *ಮಕ್ಕಳನ್ನು ನೈತಿಕ ಮಾರ್ಗದಲ್ಲಿ ಬೆಳೆಸುವುದು ತಂದೆ ತಾಯಿ ಮತ್ತು ಸಮಾಜದ ಕರ್ತವ್ಯವಾಗಿದೆ: ಶರಣಾನಂದ ಸ್ವಾಮೀಜಿ.* ಇಂದಿನ ಮೊಬೈಲ್ ಜಗತ್ತಿನಲ್ಲಿ ಮಕ್ಕಳು ಸಂಕೋಚಿತ ಮನಸ್ಥಿತಿಯನ್ನು ಹೊಂದಿ ಕುಟುಂಬ ಪ್ರೇಮ ಸಮಾಜ ಪ್ರೇಮ, ರಾಷ್ಟ್ರ ಪ್ರೇಮ, ವ್ಯಕ್ತಿತ್ವ ವಿಕಾಸದಿಂದ ದೂರ ಉಳಿಯುತ್ತಿದ್ದಾರೆ ಇಂತಹ ಪ್ರಕ್ಷಬ್ಧ ಸಮಯದಲ್ಲಿ ತಂದೆ-ತಾಯಿಗಳು, ಸಮಾಜದ ಬಂಧುಗಳು ಮಕ್ಕಳನ್ನು ಸತ್ಸಂಗದಲ್ಲಿ ಭಾಗಿಯಾಗಿಸಿ ಅವರನ್ನು ನೈತಿಕ ಮಾರ್ಗದಲ್ಲಿ ಮುಂದುವರೆಸಬೇಕು ಎಂದು ಹುಬ್ಬಳ್ಳಿ ಪಾರ್ಥ ಹಳ್ಳಿ ಶಾಂತಾಶ್ರಮ ಸಿದ್ಧಾರೂಢ ಮಠದ ಪೂಜ್ಯಶ್ರೀ ಸದ್ಗುರು ಶರಣಾನಂದ ಸ್ವಾಮೀಜಿ ಹೇಳಿದರು. ಅವರು ಅರಿವು ಆಚಾರ ಅನುಭವ ಕೇಂದ್ರದಲ್ಲಿ ಹಮ್ಮಿಕೊಂಡ ತರಂಗಿಣಿ ಓದು ಸಮಾರೋಪ ಸಮಾರಂಭದ ಕಾರ್ಯಕ್ರಮದ ದಿವ್ಯ ನೇತೃತ್ವವನ್ನು ವಹಿಸಿಕೊಂಡು ಮಾತನಾಡಿದವರು ತಾಲೂಕಿನ ಮಾಧುರಿ ಎಂಬ ಪುಟ್ಟ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ಏಳು ತಿಂಗಳಗಳ ಕಾಲ ನಿರಂತರವಾಗಿ ಜಗದ್ಗುರು ಮಾತೆ ಮಹಾದೇವಿಯವರು ಬರೆದ ತರಂಗಣಿ ಗ್ರಂಥವನ್ನು ಓದಿ ಹೇಳಿರುವುದು ಶ್ಲಾಘನೀಯ. ಅತ್ಯಂತ ಕಡುಬಡತನಲ್ಲಿ ಬೆಳೆದು ಬಂದ ಚಿಕ್ಕ ಮಗು ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯಬೇಕೆಂಬ ಹಂಬಲ ಹೊಂದಿದವಳಾಗಿದ್ದಾಳೆ, ಏಳು ತಿಂಗಳ ಪ್ರವಚನ ಮಾಲಿಕೆಯಲ್ಲಿ ಸಾಕ್ಷಾತ್ ಅಕ್ಕಮಹಾದೇವಿ ಸ್ವರೂಪದಲ್ಲಿ ನಿಂತು ತರಂಗಣಿ ಗ್ರಂಥವನ್ನು ವಾಚಿಸಿ ನಮ್ಮೆಲ್ಲರಿಗೆ ಕೇ...

ಕಲ್ಯಾಣ ಮಹಾಮನೆ ಧ್ಯೇಯ

Image
 *ಓಂ ಶ್ರೀ ಗುರು ಬಸವ ಲಿಂಗಾಯ ನಮಃ*                 *866666* *ಗುರು ಬಸವಣ್ಣನವರ ಸಂಸ್ಥಾಪಿಸಿದ*        *ಕಲ್ಯಾಣ ಮಹಾಮನೆ ಧ್ಯೇಯ* 1) *ಲಿಂಗಧ್ಯಾನ ಜಗತ್ತು* 2) *ಶರಣ ಜ್ಞಾನ ಜಗತ್ತು* 3) *ವಚನ ಜೀವನ ಜಗತ್ತು* 4) *ಅರಿವು ಆಚಾರ ಅನುಭಾವ ಜಗತ್ತು* 5) *ಸಸ್ಯಾಹಾರ ಜಗತ್ತು* *1)*ಲಿಂಗಧ್ಯಾನ ಜಗತ್ತು:* ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ ಕೂಡಲಸಂಗಮದೇವಯ್ಯಾ ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ. ಜಗತ್ತನ್ನು ಆವರಿಸುವ ವಿಶ್ವ ಚೈತನ್ಯ ಶಕ್ತಿಯೇ(cosmic energy) ದೇವರು. ದೇಹ, ವರ್ಣ, ರೂಪವನ್ನು ತನ್ನಲ್ಲಿ ಗರ್ಭೀಕರಿಸಿಕೊಂಡು ಸೃಷ್ಟಿ, ಸ್ಥಿತಿ, ಲಯ, ತಿರೋದಾನ, ಅನುಗ್ರಹ ಶಕ್ತಿಗೆ ಕಾರಣವಾದ ಶಕ್ತಿಯೇ ದೇವರು. ಅಂತಹ ದೇವ ತತ್ವವನ್ನು, ಆ ದಿವ್ಯ ಶಕ್ತಿಯನ್ನು ಅರಿಯಲು ಆಯಸ್ಕಾಂತೀಯ ಗುಣಗಳಿಂದ ಆವೃತವಾದ ವಿಶ್ವಾಕಾರ ಸ್ವರೂಪ ಚುಳುಕಾದ ಇಷ್ಟಲಿಂಗವನ್ನು ಕರಕಮಲದಲ್ಲಿರಿಸಿಕೊಂಡು ಲಿಂಗ ನಿರೀಕ್ಷೆಣೆಯೊಂದಿಗೆ ಮನಸ್ಸನ್ನು ಏಕಾಗ್ರಗೊಳಿಸಿ ತನ್ನರಿವನ್ನು ಜಾಗೃತಿ ಮಾಡಿಕೊಂಡು ದಿವ್ಯಾನಂದ ಅನುಭವಿಸಿ, ಸದಾ ಅರಿವಿನ ಚೈತನ್ಯದಿಂದ ಕ್ರಿಯಾಶೀಲವಾಗಿರುವುದು. ಈ ಆನಂದವನ್ನು ಎಲ್ಲರಿಗೂ ಹಂಚುವುದು. *2)*ಶರಣ ಜ್ಞಾನ ಜಗತ್ತು:* ಗು...

ಪ್ರವಚನ ಮಾಡುವಾಗ, ಅದರಲ್ಲಿ ಸೇರಿಸಿದ್ದ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಹೊರತು ಪಡಿಸಿ ಉಪಯೋಗಿಸಿ, ಸಂಸ್ಕೃತ ಪದಗಳು ಮತ್ತು ಶ್ಲೋಕಗಳಿಂದ ವಚನಗಳ ಪಾವಿತ್ರ್ಯ ಹಾಳಾಗುತ್ತಿವೆ

Image
ಪ್ರವಚನ ಮಾಡುವಾಗ, ಅದರಲ್ಲಿ ಸೇರಿಸಿದ್ದ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಹೊರತು ಪಡಿಸಿ ಉಪಯೋಗಿಸಿ, ಸಂಸ್ಕೃತ ಪದಗಳು ಮತ್ತು ಶ್ಲೋಕಗಳಿಂದ ವಚನಗಳ ಪಾವಿತ್ರ್ಯ ಹಾಳಾಗುತ್ತಿವೆ  *ಬಸವಾದಿ ಶರಣರ ವಚನಗಳನ್ನು ತತ್ವ ಸಿದ್ದಾಂತಗಳನ್ನು 12ನೇ ಶತಮಾನದಿಂದ 2024 ರ ವರೆಗೆ ಹಾಳು ಮಾಡಲು ವೈದಿಕರು ಪ್ರಯತ್ನ ಮಾಡುತ್ತಿದ್ದಾರೆ:* *ವಚನಗಳಲ್ಲಿ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಸೇರಿಸಿದ್ದ ವಚನಗಳು ಹಾಗು ಆವಗಳನ್ನು ತೆಗೆದು ಹಾಕಿದ್ದ ವಚನಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ, ಸಂಸ್ಕೃತ ಸಹಿತ ಮತ್ತು ರಹಿತ ವಚನಗಳು ಓದಿ ಭೇದ ಮತ್ತು ಅನುಭವ ವ್ಯಕ್ತಪಡಿಸಿ:* *ಮುಖ್ಯವಾದುದು: ಬಸವಾದಿ ಶರಣರ ವಚನ ಸಾಹಿತ್ಯ ಓದುವಾಗ, ಬರೆಯುವಾಗ, ಭಾಷಣ ಮಾಡುವಾಗ ಮತ್ತು ಪ್ರವಚನ ಮಾಡುವಾಗ, ಅದರಲ್ಲಿ ಸೇರಿಸಿದ್ದ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಹೊರತು ಪಡಿಸಿ ಉಪಯೋಗಿಸಿ, ಸಂಸ್ಕೃತ ಪದಗಳು ಮತ್ತು ಶ್ಲೋಕಗಳಿಂದ ವಚನಗಳ ಪಾವಿತ್ರ್ಯ ಹಾಳಾಗುತ್ತಿವೆ.* ಮೊದಲು ಬಸವಣ್ಣನವರನ್ನು ಗಡಿ ಪಾರು ಮಾಡಿದರು, ಅಂತರ್ಜಾತಿ ವಿವಾಹ ನೆಪ ಒಡ್ಡಿ ಸಮಗಾರ ಹರಳಯ್ಯ ಬ್ರಾಹ್ಮಣ್ಯ ಮಧುವರಸರನ್ನು ಆನೆ ಕಾಲಿಗೆ ಕಟ್ಟಿ ಎಳೆ ಹೊಟ್ಟಿ ಶಿಕ್ಷೆ ಕೊಟ್ಟರು, ವಚನ ಸಾಹಿತ್ಯ ಸುಟ್ಟರು, ವಚನ ಸಾಹಿತ್ಯ ರಕ್ಷಣೆ ಮಾಡಲು ಹೋರಾಟ ಮಾಡಿದ್ದ ಶರಣರ ಕೊಲೆ ಮಾಡಿ ರಕ್ತದ ಓಕಳಿ ಹರಿಸಿದರು,ಅಂದಿನ ವೈದಿಕರು ಬಿಜ್ಜಳ ಮಹಾರಾಜರ ಮಂತ್ರಿಗಳಾದ ಕೊಂಡಿ ಮಂಚಣ್ಣ, ಶೆಟ್ಟಿ ಮತ್ತು ಭಟ್ಟರು. *ವಚನಗಳು ನೂರಾರು ವ...