Posts

Showing posts from June, 2020

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

Image
ಹಿಂದು - ವೀರಶೈವ - ಲಿಂಗಾಯತ  Hindu Veerashaiva Lingayath "ನಾನು ಹಿಂದು ನಾವು ವೀರಶೈವರು" ಅನ್ನುವ ಲಿಂಗಾಯತರು  ದಯಮಾಡಿ ಇದನ್ನು ತಪ್ಪದೆ ಓದಿ. ಧರ್ಮದ ಬಗ್ಗೆ ಅಭಿಮಾನ ಇದ್ದವರು ಕಡ್ಡಾಯವಾಗಿ ಓದಿರಿ, ಪ್ರತಿ ಹತ್ತು ವರ್ಷಕೊಮ್ಮೆ ಭಾರತ ಸರಕಾರ ನಡೆಸುವ ಧರ್ಮ ಜನಗಣತಿಯಲ್ಲಿ ನಾವು ಲಿಂಗಾಯತರು "ಹಿಂದು-ಲಿಂಗಾಯತ",    "ವೀರಶೈವ-ಲಿಂಗಾಯತ", ಎಂದು ಬರೆಸುತ್ತೇವೆ ದಯಮಾಡಿ ಮೇಲಿನ ಎರಡನ್ನೂ ಬರೆಸದೆ ಕೇವಲ ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿರಿ ಜಾತಿಯ ಕಾಲಂನಲ್ಲಿ ನಿಮ್ಮ ನಿಮ್ಮ ಜಾತಿಯನ್ನು ಬರೆಸಿರಿ, ನಾವು ಲಿಂಗಾಯತರು, ವೀರಶೈವರಲ್ಲ ಹಿಂದುಧರ್ಮದವರಲ್ಲ ಏಕೆಂದರೆ ನಾವು  ವೀರಶೈವ ಅನ್ನುತ್ತೇವೆ, ನಾನು ವೀರಶೈವ ಅನ್ನುವವರು ದಯಮಾಡಿ ನಿಮ್ಮ ಸ್ಕೂಲ್ ದಾಖಲಾತಿಯಲ್ಲಿ ಹಿಂದು-ಲಿಂಗಾಯತ ಇದೆ( ಭಾರತ ಸ್ವತಂತ್ರ ಸಿಕ್ಕ ನಂತರ 1951ನೇ ಜನಗಣತಿಯಲ್ಲಿ ಅಂದು ಹಿಂದು ಅಂದರೆ ಧರ್ಮ, ಮುಸ್ಲಿಮ್ ಅಂದರೆ ಜಾತಿ, ಸುನ್ನಿ ಅಂದರೆ ಉಪಜಾತಿ,ಹೀಗೆ ಹಿಂದು-ಜೈನ, ಹಿಂದು-ಕ್ರಿಶ್ಚಿಯನ್ನ, ಹಿಂದು-ಮುಸ್ಲಿಮ್, ಹಿಂದು-ಸಿಖ್ ಹಿಂದು-ಬೌದ್ಧ, ಹಿಂದು-ಪಾರ್ಸಿ, ಮತ್ತು ಹಿಂದು-ಲಿಂಗಾಯತ ಹೀಗೆ ಇತ್ತು ಮುಸ್ಲಿಮ್ ಕ್ರಿಶ್ಚಿಯನ್ ಜೈನ ಬೌದ್ಧ ಪಾರ್ಸಿ ಸಿಖ್ ಇವೆಲ್ಲವೂ ಧರ್ಮಗಳು ತಮ್ಮ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಕ್ಕ ನಂತರ ಹಿಂದು ಪದವನ್ನು ತೆಗೆದುಹಾಕಿದವು ನಾವು ಲಿಂಗಾಯತರು ಇನ್ನೂ ಅದಕ್ಕೆ ಹಿಂದು ಪದವನ್ನು ಹಿಡಿದ...

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು

Image
ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ -  ಕುವೆಂಪು ಕಾರ್ತೀಕದ ಕತ್ತಲಲಿ ಆಕಾಶದೀಪವಾಗಿ ನೀ ಬಂದೆ, ಬಟ್ಟೆಗೆಟ್ಟವರಿಗೊಂದು ದೊಂದಿ ದಿಕ್ಕಾಗಿ, ಎಂಟು ಶತಮಾನಗಳ ಹಿಂದೆ, ಅಗ್ನಿ ಖಡ್ಗವನಾಂತ ಓ ಆಧ್ಯಾತ್ಮ ಕ್ರಾಂತಿವೀರ, ದೇವದಯೆಯೊಂದು ಹೇ ಧೀರಾವತಾರ, ಶ್ರೀ ಬಸವೇಶ್ವರಾ! ಜಾತಿ ಪದ್ಧತಿಯ ಹೋಮ ಕೂಪಕ್ಕೆ ಬಿದ್ದು, ವೈದಿಕರ ಯಜ್ಞತಾಪಕ್ಕೆ ಬಲಿವೋದ ದಲಿತ ಜೀವರನೆತ್ತಿ ಮತಿ ವಿಚಾರಕ್ಕೆ, ಕಾಯಕದ ದಿವ್ಯತತ್ವದ ಸುಕ್ಷೇಮ ಧರ್ಮನಾಕಕ್ಕೆ ನಡೆಸಿದ ಮಹಾತ್ಮನೆ, ನಿನಗೆ ನಮೋ ನಮ:! ಇಂದಿಗೂ ನಾವು ನಿನ್ನೆತ್ತರಕೆ ಏಳಲಾರದೆ ಅಯ್ಯೊ ಮತದ ಉಸುಬಿಗೆ ಸಿಲುಕಿ ತತ್ತರಿಸುತಿಹೆವಯ್ಯ! ಬಾರಯ್ಯ, ಕೈ ಹಿಡಿದೆತ್ತಿ ಬದುಕಿಸು ನಮ್ಮನೆಳೆದು ವರ್ಣಾಶ್ರಮದ ಹೆಸರ ಹೊಲೆಗೆಸರ ವಂಚನೆಯ ಕುಂಡದಿಂದೆ; ಭಕ್ತಿಗಂಗೆಯನೆರೆದು ಭಾಗವತ ಶಕ್ತಿಯಂ ಕರೆದು ಮತ ಮೌಢ್ಯದಜ್ಞಾನ ಪಂಕವನು ತೊಳೆದು ಶುಚಿಗೊಳಿಸು ವಿಜ್ಞಾನ ವೇದಾಂತ ತೀರ್ಥದಿಂದೆ! ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ ಬಸವಣ್ಣನವರು ಕಂಡ ಆಧ್ಯಾತ್ಮಿಕ ಸತ್ಯಗಳ, ಜೀವನಾನುಭವ ಹಾಗೂ ತಾತ್ವಿಕ ವಿಚಾರಗಳ ಅಭಿವ್ಯಕ್ತಿಗೆ ವಚನಗಳು ಮಾಧ್ಯಮವಾದುವೇ ಹೊರತು, ವಚನರಚನೆಯೇ ಅವರ ಜೀವನದ ಪ್ರಧಾನೋದ್ದೇಶವಾಗಿರಲಿಲ್ಲ. ಅವರು ಸೂಕ್ಷ್ಮ ಸಂವೇದನಾಶೀಲರಾದ್ದರಿಂದ, ಅವರ ಅಂತರ್ದೃಷ್ಟಿ ಬಹಿರ್ದೃಷ್ಟಿಗಳೆರಡೂ ಪ್ರಖರವಾಗಿದ್ದುದರಿಂದ ಅವರ ವಚನಗಳಲ್ಲಿ ಸಾಹಿತ್ಯಾಂಶಗಳು ಮೇಲಿಂದ ಮೇಲೆ ಮೈದೋರುತ್ತವೆ. ಹೃದಯದಿಂದ ನೇರವಾಗಿ ಹೊ...

ಗುರು ಬಸವಣ್ಣನವರಿಗೆ ಗುರು ಇಲ್ಲಾ | Guru Basavanna does not have Guru (Physically)

Image
ಗುರು ಬಸವಣ್ಣ ವರಿಗೆ ಗುರು ಇಲ್ಲಾ | Guru Basavanna does not have Guru (Physically) ಮುನ್ನಿನ ಜನ್ಮದಲ್ಲಿ ಗುರುಲಿಂಗಜಂಗಮವ ಪೂಜಿಸಲರಿಯದ ಕಾರಣ ಬಹು ಜನ್ಮಕ್ಕೆ ತಂದು ಇಕ್ಕಿದೆಯಯ್ಯಾ ಎನ್ನನು ಎನಗೆ ಗುರು ಪಥವ ತೋರಿದವರಾರು? ಲಿಂಗ ಪಥವ ತೋರಿದವರಾರು? ಜಂಗಮ ಪಥವ ತೋರಿದವರಾರು? ಪಾದೋದಕ ಪ್ರಸಾದ ಪಥವ ತೋರಿದವರಾರು? ತೋರುವ ಮನವೆ ನೀವೆಂದರಿತೆ, ಎನ್ನಗಿನ್ನಾವ ಭವವಿಲ್ಲ, ಕೂಡಲಸಂಗಮದೇವ.  - ಸ. ವ. ಸಂ.-೧ ವಚನ ಸಂಖ್ಯೆ: ೮೩೩ ಈ ವಚನದಲ್ಲಿ ಬಸವಣ್ಣ ವರು ಸ್ಪಷ್ಟವಾಗಿ "ತೋರುವ ಮನವೆ" ಎಂದು ಹೇಳಿದ್ದಾರೆ, ಇದನ್ನು ಗಮನಿಸಿದರೆ, ಬಸವಣ್ಣ ವರಿಗೆ, ಬೇರೆ ಯಾವುದೆ ಗುರುಗಳು, ಋಷಿಗಳು ಅಥವಾ ಇನ್ಯಾರೂ ಕೊಟ್ಟಿಲ್ಲವಂದು ಸ್ಪಷ್ಟವಾಗುತ್ತದೆ. ಒಂದು ವೇಳೆ ಬೇರೆ ಯಾರಾದರು ಕೊಟ್ಟಿದ್ದರೆ ಬಸವಣ್ಣ ನವರು ಅವರ ಹೆಸರನ್ನು ಇಲ್ಲಿ ಬಳಸುತ್ತಿದ್ದರು. ತೋರುವ ಮನವೇ ಎಂದು ಬಳಸುತ್ತಿರಲಿಲ್ಲ. ಬ ಸವಣ್ಣ ನವರಲ್ಲದೆ ಈಗ ನಾವು ಬೇರೆ ಶರಣರ ವಚನಗಳನ್ನು ಗಮನಿಸೋಣ ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು ಬಸವಣ್ಣ ಮಾಡಲಿಕ್ಕೆ ಪ್ರಸಾದವಾಯಿತ್ತು ಇರೇಳು ಲೋಕವಾಯಿತ್ತು ಬಸವಣ್ಣ ನಿಂದ ಕಲಿದೇವಯ್ಯಾ . - ಮಡಿವಾಳ ಮಾಚಿದೇವ ಸವಸ ೮/೬೮೨ ವ. ಸಂ. ೨೪೫ ಮಡಿವಾಳ ಮಾಚಿದೇವ ಶರಣರು ಈ ವಚನದಲ್ಲಿ ಗುರು, ಲಿಂಗ, ಜಂಗಮ, ಪ್ರಸಾದ ಬಸವಣ್ಣ ನವರಿಂದಲೆ ಅಯುತು ಅಂತ ಸ್ಪಷ್ಟವಾಗಿ ತಿ...

ಗುರು ಬಸವಣ್ಣನವರು ಅಂಚೆ ಚೀಟಿ | Gurubasavanna Stamp and Coins

Image
ಓಂ ಶ್ರೀ ಗುರು ಬಸವಲಿಂಗಾಯನಮಃ          866666  ಗುರು ಬಸವಣ್ಣನವರು ಅಂಚೆ ಚೀಟಿ ಮತ್ತು ನಾಣ್ಯದ ಮೇಲೆ. ಗುರು ಬಸವಣ್ಣವರ 800ನೇಯ ಲಿಂಗೈಕ್ಯ ದಿನಾಚರಣೆ ನಿಮಿತ್ಯ ಭಾರತ ಸರಕಾರದ ಅಂಚೆ ಇಲಾಖೆಯು 11ನೇ ಮೇ 1967 ರಲ್ಲಿ 15 ಪೈಸೆ ಮುಖ ಬೆಲೆಯುಳ್ಳ ಅಂಚೆ ಚೀಟಿಯನ್ನು ಮುದ್ರಿಸಿತು.  ಮತ್ತೋಮ್ಮೆ 1997 ರಲ್ಲಿ 2 ರೂಪಾಯಿ ಮುಖ ಬೆಲೆಯುಳ್ಳ ಅಂಚೆ ಚೀಟಿಯನ್ನು ಮುದ್ರಿಸಿತು. ಗುರು ಬಸವಣ್ಣವರ ಭಾವಚಿತ್ರವುಳ್ಳ 5 ರೂಪಾಯಿ ಮತ್ತು 100 ರೂಪಾಯಿ ನಾಣ್ಯಗಳನ್ನು ಡಾ. ಮನಮೋಹನ ಸಿಂಗ್ ಅವರು ದಿನಾಂಕ 23ನೇ ಜೂನ 2006 ರಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಬಸವಣ್ಣನವರು ನಾಣ್ಯದ ಮೇಲೆ ಪ್ರಕಟಿಸಲ್ಪಟ್ಟ ಪ್ರಥಮ ಕನ್ನಡಿಗರಾಗಿದ್ದಾರೆ.     ಗುರು ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ದೆಹಲಿಯಲ್ಲಿರುವ ಪಾರ್ಲಿಮೆಂಟ ನಲ್ಲಿ ೨೮ನೇ ಎಪ್ರಿಲ್ ೨೦೦೩ರಲ್ಲಿ ಅನಾವರಣಗೊಳಿಸಲಾಯತು.