🔯 ನೆನಹು 🔯 ಸಾಮೂಹಿಕ ಪ್ರಾರ್ಥನೆ
ಓಂ ಶ್ರೀ ಗುರು ಬಸವಲಿಂಗಾಯ ನಮಃ.
🔯🏵️*೮೬೬೬೬೬*🏵️🔯
🔯 ನೆನಹು 🔯
ಸಾಮೂಹಿಕ ಪ್ರಾರ್ಥನೆ
ಪ್ರತಿ ದಿನ ಸಂಜೆ 07: ೦೦ ಗಂಟೆಗೆ
🔯🔯🔯🔯🔯🔯🔯🔯
ಮಂತ್ರ ಪುರುಷ ಗುರು ಬಸವಣ್ಣನವರ ಪೂಜೆ
ಮುಕ್ತಿದಾಯಕ ,ಶರಣರಕ್ಷಕ, ನಿತ್ಯ ಮೂರುತಿ ಬಸವನೆ,
ಭಕ್ತಿಯಿಂದಲಿ ಚರಣಕಮಲಕೆ, ನಿತ್ಯವಂದಿಪೆ ತಂದೆಯೆ. ॥ಪ॥
ಅರಿವು ಇಲ್ಲದ ಮನುಜ ಜನ್ಮವು, ಶಾಪವೆನ್ನುತ ನೊಂದೆನು, ಮರೆವ ಹರಿಯುವ, ಗುರುವೆ ಎನುತಲಿ ನಿಮ್ಮ ಚರಣವ ಪಿಡಿದೆನು. ನಿಮ್ಮ ಕರುಣೆಯು, ಎನ್ನ ಬಾಳಿನ ರಕ್ಷೆ ಎನುತಲಿ ನಂಬಿಹೆ. ಬನ್ನ ತೊಡೆಯುವ ಬೆಳಗ ಬೀರುವ ಶಕ್ತಿ ಎನ್ನುತ ಕಾದಿಹೆ. ॥೧॥
ಮೋಹರಹಿತನೆ ಜ್ಞಾನಭರಿತನೇ,ಪರಮಶಾಂತಿಯ ಧಾಮವೆ, ಕಾವುದೆಮ್ಮನು ಕೈಯಬಿಡದೆ, ಹರನ ಕರುಣೆಯ ಕಂದನೆ, ಕಾಮಕ್ರೋಧದ ಕೊಳೆಯ ಕಳೆದು, ಭಕ್ತಿ ಜಲದಲಿ ಮೀಯಿಸು .ಜ್ಞಾನ ದುಡುಗೆಯ ಮನಕೆ ಉಡಿಸಿ ಮೃಡನ ಪಾದಕ್ಕೆ ಏರಿಸು.॥೨॥
ನಿಮ್ಮ ಚಿನ್ಮಯ ಜ್ಞಾನವೆನಗೆ, ಮಾರ್ಗದರ್ಶಕ ದೀಪ್ತಿಯು. ನಿಮ್ಮ ಮಮತೆಯ ಹೃದಯ ಮಂದಿರ, ನನಗೆ ಶಾಂತಿಯ ಹಂದರ. ನಿಮ್ಮ ಪಾವನ ಚರಣಯುಗ್ಮವು, ಭವವ ದಾಂಟಿಪ ದೋಣಿಯು. ಸನ್ನುತಾಂಗನೆ ನಿಮ್ಮ ನೆನಹಿದು, ಬಾಳಿಗಮೃತ ಸೋನೆಯು. ॥ ೩॥
ನೀನು ಆಡಿಪ ಬೊಂಬೆನಾನು ಮಿಡಿಸೇ ನುಡಿಯುವ ವೀಣೆಯು. ನೀನು ಉಡಿಸಿ ಉಣಿಸಿ ಸಲಹಲು, ಎನ್ನ ಬಾಳೋಳು ಝೇಂಕೃತಿ. ಮಂತ್ರ ಪುರುಷನೇ ಶಾಂತಿ ಚಂದ್ರನೆ, ದುರಿತ ತಿಮಿರಕೆ ಭಾನುವೆ. ಕೀರ್ತಿಸುವೆ ನನವರತ ನಿನ್ನನು, ಸಚ್ಚಿದಾನಂದ ಕಂದನೆ. ॥೪॥
ಮುಕ್ತಿದಾಯಕ ಶರಣರಕ್ಷಕ, ನಿತ್ಯ ಮೂರುತಿ ಬಸವನೆ.ಭಕ್ತಿಯಿಂದಲಿ ಚರಣ ಕಮಲಕೆ, ನಿತ್ಯವಂದಿಪೆ ತಂದೆಯೆ. ನಿತ್ಯ ವಂದಿಪೆ ತಂದೆಯ.
ಜೈ ಗುರು ಬಸವೇಶ ಹರ ಹರ ಮಹಾದೇವ
🫐🫐 ನೆನಹು 🫐🫐
*ಸಾಮೂಹಿಕ ಪ್ರಾರ್ಥನೆ ಪ್ರತಿ ದಿನ ಸಂಜೆ* 7 *ಗಂಟೆಗೆ
✡️✡️✡️✡️✡️✡️✡️✡️
ಬಸವಂ ಪ್ರಣವಾಕಾರಂ ಬಸವಂ ಶರಣಾಗತ ರಕ್ಷಕ ವರಲೋಲಂ
ಬಸವಂ ಜನ್ಮಕುಠಾರಂ
ಬಸವಂ ನಮಾಮಿ
ಶ್ರೀ ಗುರು ಬಸವೇಶಂ
ಪ್ರಣವಾ ರೂಢನೂ,
ಪ್ರಣವ ಸ್ವರೂಪನು,
ಪ್ರಣವ ಪ್ರಕೃತಿ ಸೌಂಜ್ಞನು
ಪ್ರಣವ ಷಡಂಗ ಸಮರಸ
ನಮ್ಮ ಲಿಂಗದೇವರು.
ಇವನಾರವ ಇವನಾರವ , ಇವನಾರವ ನೆಂದೇನಿಸದಿರಯ್ಯಾ,
ಇವನಮ್ಮವ ಇವನಮ್ಮವ , ಇವನಮ್ಮವ ನೆಂದನಿಸಯ್ಯಾ
ಲಿಂಗದೇವಾ,ನಿಮ್ಮ ಮಹಾಮನೆಯ ಮಗನೆಂದೇನಿಸಯ್ಯಾ.
ಬಸವ ಗುರುವಿನ ತತ್ವ
ಲೋಕದಿ ಹಬ್ಬಲಿ,
ಮನುಜ ಕಲ್ಪಿತ ಜಾತಿ,
ಹೆರೆ ತೊಲಗಿ ಹೋಗಲಿ ,
ವಿಶ್ವಮಾನವ ಪ್ರೀತಿ, ಹೊನಲಾಗಿ ಹರಿಯಲಿ, ಸೃಷ್ಟಿಕರ್ತನ ಕರುಣೆ ,
ಎಮ್ಮ ಕಾಪಾಡಲಿ, ಲಿಂಗದೇವನ ಕರುಣೆ ,
ಎಮ್ಮ ಕಾಪಾಡಲಿ.
ಶ್ರೀ ಗುರು ಬಸವಂಗೆ ಶರಣಾಗಿಹೆ ,ಲಿಂಗದೇವನಿಗೆ ಶರಣಾಗಿಹೆ, ಶರಣ ಗಣಕ್ಕೆ ಶರಣಾಗಿ ಹೆ , ಕರುಣ ಪ್ರಸಾದ ಸ್ವೀಕರಿಸಿಹೆ , ಗಣಪ ದವಿಯನ್ನು ನಾ ಹೊ
*ಲೋಕದ ಮಿತ್ರ. ಪರಮಾತ್ಮ*
●●●●●○○○○●●●●●
ಹೇ ಪರಮಾತ್ಮ ಲೋಕದ ಮಿತ್ರ ನೀನೇ ಸರ್ವಕು ಕಾರಣ ಕರ್ತ. ॥ಪ॥
ಜಗವನು ರಚಿಸಿದ ತಂದೆಯು ನೀನು, ಸೊಗದಿಂ ಪಾಲಿಪ ತಾಯಿಯ ನೀನು, ದುರಿತ ಸಂಕುಲ ಮುಸುಕುತ ಬರಲು ಪಾರು ಮಾಡುವ ಕರುಣಿಯು ನೀನು. ॥೧॥
ವಿಘ್ನ ನಿವಾರಕ ಶಕ್ತಿಯು ನೀನೆ, ಬುದ್ಧಿಪ್ರದಾಯಕ ದೇವನು ನೀನೆ, ವಿದ್ಯಾ ಸಂಪದ ಶಾಂತಿ ಸೌಖ್ಯಗಳ, ಮಹಾದಾತನು ನೀನೇ, ॥೨॥
ವೇದಾಂತಿಗಳು
ಪರಬ್ರಹ್ಮನೆಂಬರು, ಆಗಮಿಕರು ಪರಶಿನೆಂಬರು,
ಅಲ್ಲಹ ಯಹೋವ ಸುಪ್ರೀಮ ಗಾಡ್ ಲಿಂಗದೇವ ನಿನ್ನಯ ಹೆಸರು. ॥೩॥
ಮರೆವಿನ ತಿಮೀರದಿ ಮನವು ಮುಲಗುತ, ಮುಂದಡಿ ಇಡದೆಯೆ ಬಳಲುತಿರೆ, ಅರಿವಿನ ಬೆಳಕನು ಪಥದಲಿ ಚೆಲ್ಲುತ , ಮುಂದಡಿ ಇಡಿಸುವ ಗುರು ನೀನು.॥೪॥
ಅಂದಿನ ಅನ್ನವ ನೀಡುವ ನೀನು, ಬಂಧನ ಹರಿಸುವ ಭವಹರ ಭಾನು, ಬಾಳಲಿ ನಡೆಯಲು ಆತ್ಮಬಲವ, ನೀಡುವ ಮಂಗಲ ಶಕ್ತಿಯು ನೀನು. ॥೫॥
ನಿನ್ನನ್ನಲ್ಲದೆ ಯಾರನು ಬೇಡೆನು, ಬನ್ನವ ಕಳೆಯುವ ಚಿನ್ನಮಯನೆ, ಎಮ್ಮಯ ಜೀವನ ಸರ್ವ ಸಂಪದದಿ, ಬೆಳಗಲು ಕರುಣಿಸು ಸಚ್ಚಿದಾನಂದ . ॥೬॥
ಹೇ ಪರಮಾತ್ಮ ಲೋಕದ ಮಿತ್ರ ನೀನೇ ಸರ್ವಕು ಕಾರಣಕರ್ತ.
*ಲಿಂಗದೇವ ಅಷ್ಟಕ*
●●●●●○○○○○●●●●●
ಶರಣ ಜನ ಪೂಜಿತ ಶ್ರೀ ಲಿಂಗದೇವ , ಮರಣ ಭಯ ದೂರಕ ಶ್ರೀ ಲಿಂಗದೇವ, ಸೃಷ್ಟಿಕರ್ತ ಶ್ರೀ ಲಿಂಗದೇವ, ವಂದಿಪೆನಾ ಘನ ಲಿಂಗದೇವ ಓಂ ಲಿಂಗಾಯ ನಮಃ ॥ಪ॥
ಸರ್ವಕಾರಣ ಶ್ರೀ ಲಿಂಗದೇವ
ಸರ್ವಶಕ್ತ ಶ್ರೀ ಲಿಂಗದೇವ
ಸರ್ವವ್ಯಾಪಿ ಶ್ರೀ ಲಿಂಗದೇವ ವಂದಿಪೆ ನಾ ಘನಲಿಂಗದೇವ
ಓ೦ ಲಿಂಗಾಯ ನಮಃ ॥ ೧॥
ನಿರಾಕಾರ ನಿರ್ಗುಣ ಶ್ರೀ ಲಿಂಗದೇವ, ನಿರ್ಮಲ ಚೇತನ ಶ್ರೀ ಲಿಂಗದೇವ, ಪ್ರಣವ ಸ್ವರೂಪ
ಶ್ರೀ ಲಿಂಗದೇವ,
ವಂದಿಪೆ ನಾ ಘನಲಿಂಗದೇವ
ಓಂ ಲಿಂಗಾಯ ನಮಃ ॥೨॥
ವಿಶ್ವತಃ ಚಕ್ಷು ಶ್ರೀ ಲಿಂಗದೇವ,
ವಿಶ್ವತೋಬಾಹು
ಶ್ರೀ ಲಿಂಗದೇವ,
ವಿಶ್ವತಃಪಾದ ಶ್ರೀ ಲಿಂಗದೇವ, ವಂದಿಪೆ ನಾ ಘನಲಿಂಗದೇವ
ಓಂ ಲಿಂಗಾಯ ನಮಃ ॥೩॥
ಮಾತಾಪಿತ
ರಹಿತ ಶ್ರೀ ಲಿಂಗದೇವ ,
ಜಗದಾರಾಧ್ಯ ಶ್ರೀಲಿಂಗದೇವ,
ಲೋಕ ರಕ್ಷಕ ಶ್ರೀ ಲಿಂಗದೇವ,
ವಂದಿಪೆ ನಾ ಘನಲಿಂಗದೇವ
ಓಂ ಲಿಂಗಾಯ ನಮಃ॥೪॥
ಜ್ಯೋತಿ ಸ್ವರೂಪ ಶ್ರೀ
ಲಿಂಗದೇವ, ಕಾರುಣ್ಯ ನಿಧಿ ಶ್ರೀ ಲಿಂಗದೇವ, ಮಂಗಳ ರೂಪಿ ಶ್ರೀ ಲಿಂಗದೇವ, ವಂದಿಪೆನಾ ಘನಲಿಂಗದೇವ.
ಓಂ ಲಿಂಗಾಯ ನಮಃ॥೫॥
ಜನನ ಮರಣ ರಹಿತ ಶ್ರೀ ಲಿಂಗದೇವ , ಭವತಾಪ ಹಾರಕ ಶ್ರೀ ಲಿಂಗ ದೇವ, ಮುಕ್ತಿದಾತ ಶ್ರೀ ಲಿಂಗದೇವ
ವಂದಿಪೆ ನಾ ಘನಲಿಂಗದೇವ
ಓಂ ಲಿಂಗಾಯ ನಮಃ ॥೬॥
ಹೃತ್ಕಮಲವಾಸಿ ಶ್ರೀ ಲಿಂಗದೇವ, ಗುರುಬಸವ ರೂಪಿತ ಶ್ರೀ ಲಿಂಗದೇವ. ಇಷ್ಟಲಿಂಗರೂಪಿ ಶ್ರೀ ಲಿಂಗದೇವ, ಪೂಜಿಪೆ
ನಾ ಘನ ಲಿಂಗದೇವ .
ಓಂ ಲಿಂಗಾಯ ನಮಃ ॥೭॥
ಶರಣ ಜನ ಪೂಜಿತ ಶ್ರೀ ಲಿಂಗದೇವ ಮರಣ ಭಯ ದೂರಕ ಶ್ರೀ ಲಿಂಗದೇವ, ಸೃಷ್ಟಿಕರ್ತ ಶ್ರೀ ಲಿಂಗದೇವ ವಂದಪೆ ನಾ ಘನಲಿಂಗದೇವ .
ಓಂ ಲಿಂಗಾಯ ನಮಃ
ಬಸವ ನಾಮಾಮೃತವು ನಿತ್ಯದಿ ವೊಸೆದು ನಾಲಿಗೆ ಮೇಲೆ ನೆಲೆಸಿರೆ ಯಶದಿ ಹರಿವವು ಕರ್ಮ ಬಂಧನ ಭೀತಿ ಮೃತ್ಯುಗಳು ನಾಶವಪ್ಪನು ಭವದ ಶತ್ರುವು
ಈಶನೊಲುಮೆಯು ಹರಿದು ಬಪ್ಪದು ಶಾಶ್ವತದ ಸುಖ ಸಿದ್ಧಿಯಹುದೈ ಬಸವನೆಂದೆನಲು ಬಸವನೆಂದೆನಲು ಬಸವಾ ಎಂದೆನಲು.
ಜಯ ಗುರುಬಸವೇಶ ಹರ ಹರ ಮಹಾದೇವ.
*ಲಿಂಗಾಯಿತ ಧರ್ಮದ ಷಟ್ ಸೂತ್ರ ಘೋಷಣೆ*
*ನಮ್ಮ ಧರ್ಮಗುರು :* ವಿಶ್ವಗುರು ಬಸವಣ್ಣನವರು
*ನಮ್ಮ ಧರ್ಮ ಸಂಹಿತೆ:* ಸಮಾನತೆ ಸಾರುವ ವಚನ ಸಾಹಿತ್ಯ.
*ನಮ್ಮ ಧರ್ಮ ಲಾಂಛನ:*
ಸೃಷ್ಟಿಕರ್ತ ಲಿಂಗದೇವನ ಕರುಹಾದ: ಇಷ್ಟಲಿಂಗ
*ನಮ್ಮ ಧರ್ಮ ಕ್ಷೇತ್ರ :*
ಗುರು ಬಸವ ಣ್ಣನವರ ಐಕ್ಯಕ್ಷೇತ್ರ .
*ಕೂಡಲಸಂಗಮ*
ಶರಣ ಭೂಮಿ:
*ಬಸವಕಲ್ಯಾಣ*
ತ್ಯಾಗ ಭೂಮಿ:
*ಸುಕ್ಷೇತ್ರಉಳವಿ*
*ನಮ್ಮ ಧರ್ಮ ಧ್ವಜ :* ಷಟ್ಕೋನ ಇಷ್ಟಲಿಂಗ ಸಹಿತ ಗುರು ಬಸವ ಧ್ವಜ
*ನಮ್ಮಧರ್ಮದ ಧ್ಯೇಯ:* ಜಾತಿ ವರ್ಣ, ವರ್ಗ ರಹಿತ, ಧರ್ಮ ಸಹಿತ, ಶರಣ ಸಮಾಜ ನಿರ್ಮಾಣ ,
ಕಲ್ಯಾಣ ರಾಜ್ಯ ನಿರ್ಮಾಣ.
🔯🔯🔯🔯🔯🔯🔯🔯
*ಬಸವ ಮಂಗಲ*
*ಓಂ ಗುರು ಬಸವ ಪ್ರಭು*
🏵️🏵️🏵️🏵️🏵️🏵️🏵️🏵️
ಓಂ ಗುರು ಬಸವ ಪ್ರಭು
ವರಗುರು ಶರಣವಿಭು
ಆಶ್ರಿತ ಜನ ಸಂರಕ್ಷಕ ಸದ್ಗುರು ಬಸವ ಪ್ರಭು !
ವರ ಗುರು ಶರಣ ವಿಭು॥ಪ॥
ಶರಣಲೋಲನು ನೀ ಪರಮಪುರುಷನು ನೀ
ಕರುಣಾಸಿಂಧೂ ನೀ
ದೀನರ ಬಂಧುವು ನೀ ॥
ಸುಭಗಗಾತ್ರನು ನೀ
ಪ್ರೇಮ ನೇತ್ರನು ನೀ
ಪರಮಚರಿತನು ನೀ
ಜ್ಞಾನಭರಿತನು ನೀ ॥೧॥
ಭವ ಭಯ ತಾರಕನೇ
ನವ ಪಥದಾಯಕನೇ ಹರಗಣ ತಾರೆಗಳ ನಡುವಿನ ಚಂದಿರನೇ॥
ಮಾತಾಪಿತನು ನೀ
ಬಂಧು ಬಳಗವು ನೀ
ಭಕ್ತ ಜನ ಮನೋರಾರ್ಜಿತ
ಮಂತ್ರ ಪುರುಷನು ನೀ ॥೨॥
ಮೊಹರಹಿತನು ನೀ ಮಮತಾ ಸಹಿತನು ನೀ ಮಾಯಾ ದೂರಕ ನೀ ಮುಕುತಿಯ ದಾಯಕ ನೀ ॥
ಮನುಕುಲ ಜ್ಯೋತಿಯ ನೀ ಕ್ರಾಂತಿಯ ವೀರನು ನೀ
ಶಾಂತಿಯ ಹೊನಲನು ಹರಿಸಲು ಬಂದ ಸಚ್ಚಿದಾನಂದ ಸುತ ನೀ ॥೩॥
ರಚನೆ :: ಮಹಾ ಜಗದ್ಗುರು ಮಾತೆ ಮಹಾದೇವಿಯವರು
🏵️🏵️🏵️🏵️🏵️🏵️🏵️🏵️
ಮಂಗಲ
ಜಯ ಬಸವರಾಜ, ಭಕ್ತಜನ ಸುರಭುಜ, ಜಯತು ಮಹಾಕಾರಣಿಕ ,
ಲಿಂಗದೇವನ ಘನತೆಜ, ಜಯತು ಕರುಣಾಸಿಂಧು, ಭಜಕ ಜನ ಬಂಧು,
ಜಯ ಇಷ್ಟದಾಯಕ ,
ರಕ್ಷಿಸು ಶ್ರೀ ಗುರು ಬಸವಾ,
ರಕ್ಷಿಸು ಶ್ರೀ ಗುರುಬಸವಾ, ರಕ್ಷಿಸು ಶ್ರೀ ಗುರುಬಸವಾ,
ಜೈ ಗುರು ಬಸವೇಶ ಹರ ಹರ ಮಹಾದೇವ
ವಿಶ್ವ ಗುರು ಬಸವೇಶ್ವರ ಮಹಾತ್ಮ ಕಿ ಜೈ
ಜಗನ್ಮಾತಾ ಅಕ್ಕಮಹಾದೇವಿ ಮಾತಾ ಕಿ ಜೈ
ಪೂಜ್ಯ ಶ್ರೀ ಮಹಾ ಜಗದ್ಗುರು ಲಿಂಗಾನಂದ ಸ್ವಾಮೀಜಿ ಕಿ ಜೈ
ಪೂಜ್ಯಶ್ರೀ ಮಹಾ ಜಗದ್ಗುರು ಡಾಕ್ಟರ್ ಮಾತೆ ಮಹದೇವಿ ಮಾತಾ ಕಿ ಜೈ
ಸಕಲ ಶರಣ ಸಂತೋಂಕಿ ಜೈ
🙏ಶರಣು ಶರಣಾರ್ಥಿ🙏
🙏ಸರ್ವರಿಗೂ ಶರಣು ಶರಣಾರ್ಥಿಗಳು 🙏
Comments
Post a Comment