ಜಾಗತಿಕ ಲಿಂಗಾಯತ ಮಹಾಸಭಾ" ಇದು ಲಿಂಗಾಯತ ಧರ್ಮಕ್ಕ್ ಮಾನ್ಯತೆ ಕೊಡಿಸಲು ಹುಟ್ಟಿದ ಸಂಸ್ಥೆ ಎಂದು ಹೇಳಲಾಗಿತ್ತು. ಇದರ ಮೂಲ ಉದ್ದೇಶದ ಕಡೆ ಗಮನ ಕೊಡಿ.

 ಜಾಗತಿಕ ಲಿಂಗಾಯತ ಮಹಾಸಭಾ" ಇದು ಲಿಂಗಾಯತ ಧರ್ಮಕ್ಕ್ ಮಾನ್ಯತೆ ಕೊಡಿಸಲು ಹುಟ್ಟಿದ ಸಂಸ್ಥೆ ಎಂದು ಹೇಳಲಾಗಿತ್ತು. ಇದರ ಮೂಲ ಉದ್ದೇಶದ ಕಡೆ ಗಮನ ಕೊಡಿ.


👉 ಕಲಬುರ್ಗಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಶರಣ ಪ್ರಭುಲಿಂಗ ಮಹಾಗಾಂವಕರ್ ಅವರೇ,.... 

       ತಾವು ಪೂಜ್ಯ ಮಾತಾಜಿ ಸಂಸ್ಮರಣೆ ಕಾರ್ಯಕ್ರಮ ನಿಮಿತ್ಯ ಬರೆದ *ಪತ್ರ* ದಲ್ಲಿ ಈ ರೀತಿ ಬರೆದಿದ್ದೀರಿ. "ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಮಾಡಿದರೆ ಸೂಕ್ತ *ಕಾನೂನು ಕ್ರಮ* ತೆಗೆದುಕೊಳ್ಳಲಾಗುವುದು" ಎಂದು ಬರೆಯಲಾಗಿದೆ. 

     ತಾವು ಈ ಪತ್ರವನ್ನು ಬರೆದಿರುವ ದಾಟಿಯನ್ನು ನೋಡಿದರೆ ತಾವು ತಮ್ಮನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರೆಂದು ಅಥವಾ ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ ಎಂದು ತಿಳಿದುಕೊಂಡು ಬರೆದಿರುವ ಪತ್ರದ ಹಾಗೆ ಇದೆ.

        ಮೊದಲು ಸುಪ್ರೀಂ ಕೋರ್ಟ್ ತೀರ್ಪಿನ *ದಾಖಲೆ* ಯನ್ನು (ಕಾಪಿ) ತೆಗೆದುಕೊಂಡು ಬನ್ನಿ.  ಅದನ್ನು ತೋರಿಸಿ ಹೇಳಿ. ನಿಮಗೆ ಚಾಲೆಂಜ್ ಮಾಡುತ್ತೇನೆ. ಸುಪ್ರೀಂ ಕೋರ್ಟ್ ಲಿಂಗದೇವ ವಚನಾಂಕಿತವನ್ನು ಬಳಸಬಾರದು ಎಂದು ಎಲ್ಲಿಯೂ ಹೇಳಿಲ್ಲ. ಸುಮ್ಮನೆ ತಮಗೆ ಬೇಕಾದ ಹಾಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಚೇಂಜ್ ಮಾಡಿ *ಸುಳ್ಳು* ಹೇಳುವುದು ಸರಿಯಲ್ಲ. 

       ಪೂಜ್ಯ ಮಾತಾಜಿ ಅವರಿಗೆ ತಮ್ಮ ಜೀವಿತಾವಧಿಯಲ್ಲಿ ಇಂತಹ ನೂರಾರು *ಬೆದರಿಕೆ* ಗಳು ಬಂದಿದ್ದವು. "ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ, ನಿಮ್ಮನ್ನು ಜೈಲಿಗೆ ಕಳಿಸುತ್ತೇವೆ, ನಿಮ್ಮ ಕೊಲೆ ಮಾಡುತ್ತೇವೆ" ಇಂಥ ಅನೇಕ ಬೆದರಿಕೆಗಳು ಬಂದಿದ್ದವು. 

           ಆದರೆ ಪೂಜ್ಯ ಮಾತಾಜಿಯವರು ಇಂತಹ ಯಾವುದೇ ಬೆದರಿಕೆಗಳಿಗೆ ಬಗ್ಗದೆ ಹೆದರದೆ ತನ್ನ ಸಂಶೋಧನೆಯನ್ನ ಹಾಗೂ ಗುರು ಬಸವಣ್ಣನವರ ಆದೇಶವನ್ನು ಕೈಬಿಡದೆ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದರು..

       ನಾವು ಆ *ಸಿಂಹ* ದಂತಹ ತಾಯಿಯ ಮಕ್ಕಳು. ನಾವು ಈ ರೀತಿಯ ಬೆದರಿಕೆಗಳಿಗೆ, ಒತ್ತಡಕ್ಕೆ ಹೆದರಿ "ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ" ತೆಗೆದುಕೊಂಡು ಬಣ್ಣ ಬದಲಾಯಿಸುವ ಜಾಯಮಾನದವರಲ್ಲ... ಎಷ್ಟೇ ಅಡೆತಡೆಗಳು ಬರಲಿ, ವಿರೋಧ ಬರಲಿ ನಮ್ಮ ಗುರುಗಳ ಸಂಶೋಧನೆಯನ್ನು ಉಳಿಸಿಕೊಂಡು ಹೋಗುತ್ತೇವೆ...

     ಇನ್ನು ಪತ್ರದಲ್ಲಿ ಬಸವ ಧರ್ಮ ಪೀಠದ ಆದೇಶವನ್ನು ಉಲ್ಲಂಘನೆ ಮಾಡಬೇಡಿ ಎಂದು ಹೇಳಿದ್ದೀರಿ. ನಿಮಗೆ ಯಾವಾಗನಿಂದ ಬಸವ ಧರ್ಮಪೀಠದ ಮೇಲೆ ಇಷ್ಟೊಂದು *ಪ್ರೀತಿ* ಅಭಿಮಾನ ಉಕ್ಕಿ ಹರಿಯುತ್ತಿದೆ???

       ಹಾಗಾದರೆ,, ಬಸವ ಧರ್ಮ ಪೀಠದ ಆದೇಶದ ಪ್ರಕಾರ ಜೆಎಲ್ಎಂ ನವರಿಗೆ ಪ್ರತಿಯೊಬ್ಬರು ಇಷ್ಟಲಿಂಗವನ್ನು ಧರಿಸಲು ಹೇಳಿ... ಬಸವಧರ್ಮ ಪೀಠದ ಆದೇಶದ ಪ್ರಕಾರ ಏಕದೇವೋಪಾಸನೆಯನ್ನು ಪಾಲಿಸಲು ಹೇಳಿ...  ಬಸವ ಧರ್ಮಪೀಠದ ಆದೇಶದ ಪ್ರಕಾರ ಸಸ್ಯಹಾರವನ್ನು ಪಾಲಿಸಲು ಹೇಳಿ... 

       ತಾವು ಈ ರೀತಿಯ ಬೆದರಿಕೆಗಳನ್ನು ಹಾಕಿಯೇ ಈಗಿನ ಪೀಠಾಧ್ಯಕ್ಷರ ಮೇಲೆ *ಒತ್ತಡ* ಹೇರಿ, ತಮ್ಮ ಗುರುಗಳ ಸಂಶೋಧನೆಯನ್ನು *ಕೈಬಿಡಲು* ನಿರ್ಣಯ ತೆಗೆದುಕೊಳ್ಳುವಂತೆ ಮಾಡಿರಬಹುದು.. ಆದರೆ ನಮ್ಮಂತಹ ಸಾವಿರಾರು ಲಕ್ಷಾಂತರ ಶರಣರಿಗೆ ಪೂಜ್ಯ ಮಾತೆಮಹಾದೇವಿಯವರ ಆದೇಶವೇ ಅಂತಿಮ ಆದೇಶ.. 

       'ಜಾಗತಿಕ ಲಿಂಗಾಯತ ಮಹಾಸಭಾ" ಇದು ಲಿಂಗಾಯತ ಧರ್ಮಕ್ಕ್ ಮಾನ್ಯತೆ ಕೊಡಿಸಲು ಹುಟ್ಟಿದ ಸಂಸ್ಥೆ ಎಂದು ಹೇಳಲಾಗಿತ್ತು. ಇದರ ಮೂಲ ಉದ್ದೇಶದ ಕಡೆ ಗಮನ ಕೊಡಿ. ರ್ಯಾಲಿಗಳನ್ನು ಆಯೋಜಿಸಿ ಹೋರಾಟ ಮಾಡಿ. ಸುಮ್ಮನೆ ಕುಳಿತಿರುವ ಮಠಾಧೀಶರನ್ನು ಹೋಗಿ ಪ್ರಶ್ನಿಸಿ.. ಅದನ್ನು ಬಿಟ್ಟು ಈ ರೀತಿ ಬೇರೆ ಸಂಸ್ಥೆಗಳನ್ನು ಸಂಘಟನೆಗಳನ್ನು ಒಡೆದು ಬೆಳೆಯುವ ಕೆಲಸಕ್ಕೆ ಕೈ ಹಾಕಬೇಡಿ ಎಂದು ವಿನಂತಿಸಿಕೊಳ್ಳುತ್ತೇವೆ...


ಶರಣು ಶರಣಾರ್ಥಿ

🙏🙏🙏

~ ಸಿದ್ಧವೀರ ಸಂಗಮದ


Comments

Popular posts from this blog

ಅರುಹಿನ ಮರಹು ಅಹಂಕಾರದ ಕುರುಹು

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು