Posts

Showing posts from December, 2023

ಗುರು ಬಸವಣ್ಣನವರು ಇಷ್ಟಲಿಂಗವನ್ನು ಆವಿಷ್ಕರಿಸಿದರು ಹಾಗು ಅವರಿಗೆ ದೀಕ್ಷಾಗುರು ಇಲ್ಲ

Image
  ಗುರು ಬಸವಣ್ಣನವರು ಇಷ್ಟಲಿಂಗವನ್ನು ಆವಿಷ್ಕರಿಸಿದರು ಹಾಗು ಅವರಿಗೆ ದೀಕ್ಷಾಗುರು ಇಲ್ಲ ಬಸವಣ್ಣ ತನಗೆ ತಾನೇ ಗುರು 1. ‘ಲಿಂಗವೂ ಬಸವಣ್ಣನ ಉದರದಲ್ಲಿ ಹುಟ್ಟಿತ್ತು’ - ಚೆನ್ನಬಸವಣ್ಣ 2. ‘ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು’ - ಮಡಿವಾಳ ಮಾಚಿದೇವರು 3. ‘ಆದಿಯಲ್ಲಿ ನೀನೆ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ’ - ಅಲ್ಲಮಪ್ರಭುದೇವರು 4. ‘ವೃಷಭರಾಜಂ ಪತಿಯನುಜ್ಞೆಯೊಡನೆ ಬಸವಣ್ಣನ ಹಸ್ತದೊಳು ಸಂಗಮೇಶ್ವರ ಲಿಂಗಮಂ ಭೋಂಕನೆ ಬಿಜಯಂಗೈಸಿ’ - ಬಸವರಾಜದೇವರ ರಗಳೆ, ಹರಿಹರ (ಹರಿಹರ ಬಸವಣ್ಣನವರನ್ನು ವೃಷಭನ ಅವತಾರ ಎಂದು ಚಿತ್ರಿಸಿರುವುದನ್ನು ಈ ಸಂದರ್ಭದಲ್ಲಿ ಗಮನಿಸಿ, ವೃಷಭನ ಬಾಯಿಂದ ಬಸವಣ್ಣನವರ ಕರಸ್ಥಲಕ್ಕೆ ಲಿಂಗ ಬಂದಿತು ಎಂಬುದರ ಅರ್ಥ ಸ್ಪಷ್ಟವಾಗುತ್ತದೆ.) 5. ‘ಆ ತನಯನೊಳಗಿಹ ಶಿವಂ ಗುರ್ವಾಕಾರಮಂ ತಾಳ್ದಾತನಂಗದ ಮೇಲೆ ಲಿಂಗಸಂಗವಂ ಮಾಡಿ’ - ಬಸವ ಪುರಾಣ, ಭೀಮಕವಿ. (ಮಗುವಿನ ಒಳಗಿರುವ ಶಿವನೇ ಗುರುರೂಪ ಧರಿಸಿ ಬಸವಣ್ಣನವರಿಗೆ ಲಿಂಗವನ್ನು ನೀಡಿದನೆಂದು ಚಿತ್ರಿಸಿರುವ ಈ ಸಂಗತಿಯೂ ಕೂಡಾ ಬಸವಣ್ಣನವರಿಗೆ ಲಿಂಗದೀಕ್ಷೆ ನೀಡಿದ ಗುರುವಿಲ್ಲ. ಬಸವಣ್ಣ ತನಗೆ ತಾನೇ ಗುರು ಎಂದು ಅರಿವಿಗೆ ಬರುತ್ತದೆ.) ಮೇಲಿನ ಐದು ಉಲ್ಲೇಖಗಳನ್ನು ಗಮನಿಸಿದರೆ, ಬಸವಣ್ಣನವರು ಇಷ್ಟಲಿಂಗವನ್ನು ಆವಿಷ್ಕರಿಸಿದರು ಹಾಗು ಅವರಿಗೆ ದೀಕ್ಷಾಗುರು ಇಲ್ಲ ಎಂಬ ಸಂಗತಿ ನಮಗೆ ಅರಿವಿಗೆ ಬರ...