ಗುರು ಬಸವಣ್ಣನವರಿಗೆ ಗುರು ಇಲ್ಲಾ | Guru Basavanna does not have Guru (Physically)


ಗುರು ಬಸವಣ್ಣ ವರಿಗೆ ಗುರು ಇಲ್ಲಾ | Guru Basavanna does not have Guru (Physically)




ಮುನ್ನಿನ ಜನ್ಮದಲ್ಲಿ ಗುರುಲಿಂಗಜಂಗಮವ ಪೂಜಿಸಲರಿಯದ ಕಾರಣ
ಬಹು ಜನ್ಮಕ್ಕೆ ತಂದು ಇಕ್ಕಿದೆಯಯ್ಯಾ ಎನ್ನನು
ಎನಗೆ ಗುರು ಪಥವ ತೋರಿದವರಾರು?
ಲಿಂಗ ಪಥವ ತೋರಿದವರಾರು?
ಜಂಗಮ ಪಥವ ತೋರಿದವರಾರು?
ಪಾದೋದಕ ಪ್ರಸಾದ ಪಥವ ತೋರಿದವರಾರು?
ತೋರುವ ಮನವೆ ನೀವೆಂದರಿತೆ,
ಎನ್ನಗಿನ್ನಾವ ಭವವಿಲ್ಲ,
ಕೂಡಲಸಂಗಮದೇವ. 
- ಸ. ವ. ಸಂ.-೧ ವಚನ ಸಂಖ್ಯೆ: ೮೩೩

ಈ ವಚನದಲ್ಲಿ ಬಸವಣ್ಣ ವರು ಸ್ಪಷ್ಟವಾಗಿ "ತೋರುವ ಮನವೆ" ಎಂದು ಹೇಳಿದ್ದಾರೆ, ಇದನ್ನು ಗಮನಿಸಿದರೆ, ಬಸವಣ್ಣ ವರಿಗೆ, ಬೇರೆ ಯಾವುದೆ ಗುರುಗಳು, ಋಷಿಗಳು ಅಥವಾ ಇನ್ಯಾರೂ ಕೊಟ್ಟಿಲ್ಲವಂದು ಸ್ಪಷ್ಟವಾಗುತ್ತದೆ. ಒಂದು ವೇಳೆ ಬೇರೆ ಯಾರಾದರು ಕೊಟ್ಟಿದ್ದರೆ ಬಸವಣ್ಣ ನವರು ಅವರ ಹೆಸರನ್ನು ಇಲ್ಲಿ ಬಳಸುತ್ತಿದ್ದರು. ತೋರುವ ಮನವೇ ಎಂದು ಬಳಸುತ್ತಿರಲಿಲ್ಲ.

ಸವಣ್ಣ ನವರಲ್ಲದೆ ಈಗ ನಾವು ಬೇರೆ ಶರಣರ ವಚನಗಳನ್ನು ಗಮನಿಸೋಣ

ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು
ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು
ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು
ಬಸವಣ್ಣ ಮಾಡಲಿಕ್ಕೆ ಪ್ರಸಾದವಾಯಿತ್ತು
ಇರೇಳು ಲೋಕವಾಯಿತ್ತು ಬಸವಣ್ಣ ನಿಂದ ಕಲಿದೇವಯ್ಯಾ
. - ಮಡಿವಾಳ ಮಾಚಿದೇವ ಸವಸ ೮/೬೮೨ ವ. ಸಂ. ೨೪೫

ಮಡಿವಾಳ ಮಾಚಿದೇವ ಶರಣರು ಈ ವಚನದಲ್ಲಿ ಗುರು, ಲಿಂಗ, ಜಂಗಮ, ಪ್ರಸಾದ ಬಸವಣ್ಣ ನವರಿಂದಲೆ ಅಯುತು ಅಂತ ಸ್ಪಷ್ಟವಾಗಿ ತಿಳಿಸಿದ್ದಾರೆ. ಒಂದು ವೇಳೆ ಬೇರೆ ಯಾರಾದರು ಕೊಟ್ಟಿದ್ದರೆ ಅವರ ಹೆಸರನ್ನು ಉಲ್ಲೇಖಿಸುತ್ತಿದ್ದರು. ಬೇರೆ ಎಲ್ಲಾ ಶರಣರು ಇದ್ದರೂ ಸಹ ಬಸವಣ್ಣ ಮಾಡಲಿಕ್ಕೆ ಗುರು, ಲಿಂಗ, ಜಂಗಮ, ಪ್ರಸಾದ ಆಯಿತ್ತು ಅಂತ ಹೇಳಿ ಬೇರೆ ಯಾರಿಂದಲೋ ಲಿಂಗ ಅಯಿತ್ತು ಅನ್ನುವದನ್ನು ಅಲ್ಲಗಳೆದಂತಾಯುತು.

ಎತ್ತೆತ್ತ ನೋಡಿದಡತ್ತತ್ತ ಬಸವನೆಂಬ ಬಳ್ಳಿ,
ಎತ್ತಿ ನೋಡಿದಡೆ ಲಿಂಗ ವೆಂಬ ಗೊಂಚಲು,
ಒತ್ತಿ ಹಿಂಡಿದಡೆ ಭಕ್ತಿಯೆಂಬ ರಸವಯ್ಯಾ,
ಆಯತವು ಬಸವಣ್ಣ ನಿಂದ, ಸ್ವಾಯತವು ಬಸವಣ್ಣ ನಿಂದ ಸನ್ನಿಹಿತವು ಬಸವಣ್ಣ ನಿಂದ,
ಗುರು ಬಸವಣ್ಣ ನಿಂದ, ಲಿಂಗ ಬಸವಣ್ಣ ನಿಂದ, ಜಂಗಮ ಬಸವಣ್ಣ ನಿಂದ,
ಪಾದೋದಕ ಬಸವಣ್ಣ ನಿಂದ, ಪ್ರಸಾದ ಬಸವಣ್ಣ ನಿಂದ
ಅತ್ತ ಬಲ್ಲಡೆ ನೀವು ಕೇಳಿರೇ, ಇತ್ತ ಬಲ್ಲಡೆ ನೀವು ಕೇಳಿರೇ,
ಬಸವ ಬಸವ ಬಸವಾ ಎಂದು ಮಜ್ಜನಕ್ಕೆರೆಯದವನ ಭಕ್ತಿ ಶೂನ್ಯ ಕಾಣಾ ಕಲಿದೇವರದೇವಾ.
 
- ಮಡಿವಾಳ ಮಾಚಿದೇವ ಸವಸ ೮/೫೨೬


- ವಿಶ್ವನಾಥ ಕೋರೆ

Comments

Popular posts from this blog

ಅರುಹಿನ ಮರಹು ಅಹಂಕಾರದ ಕುರುಹು

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು