ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಿರು ಲೇಖನ

 *ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಕಿರು ಲೇಖನ.*

*लोकशाही दिनानिमित्त एक छोटासा लेख.*


ವಿಶ್ವಗುರು ಬಸವಣ್ಣನವರು 12ನೇ ಶತಮಾನ ಕಂಡ ಶ್ರೇಷ್ಠ ದಾರ್ಶನಿಕ ಪ್ರವಾದಿಗಳು. ಲಿಂಗಾಯತ ಧರ್ಮ ಸ್ಥಾಪನೆ ಮಾಡುವುದರ ಮೂಲಕ ಇಡೀ ವಿಶ್ವಕ್ಕೆ ಸಮಾನತೆಯನ್ನು ಸಾರಿದರು. ಅವರು ಬೋಧಿಸಿದ ವಚನಗಳಲ್ಲಿ ಮಾನವೀಯತೆ ದಯಾಶೀಲತೆ ವಿನಯತೆ ಸಾಮಾಜಿಕ ಸಮಾನತೆ ಧಾರ್ಮಿಕತೆ, ಆಧ್ಯಾತ್ಮಿಕತೆ ವಿಚಾರಗಳು ಇವೆ. ಬಸವಣ್ಣನವರ ಸಮಕಾಲಿನದಲ್ಲಿ 770 ಅವರ ಗಣಗಳು ಆಗಿ ಹೋಗಿದ್ದಾರೆ. ಬಸವಾದಿ ಶರಣರ ವಚನಗಳು ಪ್ರಜಾಪ್ರಭುತ್ವ ಮೌಲ್ಯಗಳನ್ನು ಪ್ರತಿಪಾದಿಸುತ್ತವೆ ಅವು ಕಾಲ ದೇಶ ಭಾಷೆ ಜಾತಿ ಮತ ಪಂಥ ಪಂಗಡಗಳ ಮೀರಿ ಸರ್ವರ ಹೃದಯವನ್ನು ಬೆಸೆಯುತ್ತವೆ. ಶರಣರು ಬೋಧಿಸಿದ ಮುಖ್ಯವಾದ ವಿಚಾರವೆಂದರೆ ಕಾಯಕ ದಾಸೋಹ. ಪ್ರತಿಯೊಬ್ಬ ವ್ಯಕ್ತಿ ದುಡಿದು ಉಣ್ಣಬೇಕು ತನ್ನ ಕುಟುಂಬವನ್ನು ಸ್ವಾಭಿಮಾನದಿಂದ ಮುನ್ನೆಡೆಸಬೇಕು ಮತ್ತು ಗಳಿಸಿದ ಹಣದಲ್ಲಿ ಒಂದು ಪಾಲಾದರೂ ಸಮಾಜ ದೇಶ ವಿಶ್ವದ ಜನತೆಗೆ ದಾಸೋಹದ ಮೂಲಕ ವಿನಿಯೋಗ ಮಾಡಬೇಕು ಎಂಬುದು ಅವರ ಆಶಯವಾಗಿತ್ತು. ಇಂದು ಪ್ರಜಾಪ್ರಭುತ್ವದ ದಿನ ಪ್ರಜಾಪ್ರಭುತ್ವಕ್ಕೆ ಧ್ವನಿಯಾದ ಹಾಗೂ ಪ್ರಜಾಪ್ರಭುತ್ವವನ್ನು ಹುಟ್ಟು ಹಾಕಿದ ಬಸವಾದಿ ಶರಣರನ್ನು ಇಂದು ನಾವು ಸ್ಮರಿಸಿಕೊಳ್ಳೋಣ. ಶರಣರ ಪ್ರಜಾಪ್ರಭುತ್ವವನ್ನು 21ನೇ ಶತಮಾನದಲ್ಲಿ ಯಶಸ್ವಿಗೊಳಿಸುತ್ತಿರುವ ಭಾರತದ ಆದಿಯಾಗಿ ವಿಶ್ವದ ಪ್ರಜಾಪ್ರಭುತ್ವ ಅಳವಡಿಸಿಕೊಂಡ ರಾಷ್ಟ್ರಗಳನ್ನು ಗೌರವಿಸೋಣ. ಭಾರತದ ಪ್ರಜಾಪ್ರಭುತ್ವ ಇನ್ನಷ್ಟು ಗಟ್ಟಿಗೊಳಿಸಿದ ಭಾರತದ ಗಣ್ಯರನ್ನು ಹಾಗೂ ಜನತೆಯನ್ನು ಅಭಿನಂದಿಸೋಣ


विश्वगुरु बसवण्णा हे १२व्या शतकातील महान द्रष्टे आणि पैगंबर होते.  त्यांनी लिंगायत धर्माची स्थापना करून सर्व जगाला समतेचा संदेश दिला.  त्यांनी उपदेश केलेल्या श्लोकांमध्ये मानवता, दया, नम्रता, सामाजिक समता, धर्म आणि अध्यात्म या कल्पना आहेत.  बसवण्णांच्या समकालीन काळात, 770 गण बनले आहेत.  बसवादी शरणांच्या वचनांनी लोकशाही मूल्यांचा पुरस्कार केला आहे, जे काळ, देश, भाषा, जात, पंथ, पंथ यांचा विचार न करता सर्वांच्या हृदयाला जोडतात.  कायका दसोहा ही सराना शिकवलेली मुख्य थीम आहे.  प्रत्येक व्यक्तीने कठोर परिश्रम करून स्वाभिमानाने आपल्या कुटुंबाचा उदरनिर्वाह करावा आणि कमावलेल्या पैशातील किमान एक वाटा दसोहाच्या माध्यमातून जगभरातील लोकांना द्यावा, अशी त्यांची इच्छा होती.  आज लोकशाही दिनी लोकशाहीला आवाज देणाऱ्या आणि लोकशाहीला जन्म देणाऱ्या बसवादी शरणांचे स्मरण करूया.  21 व्या शतकात शरण लोकशाही यशस्वी करणाऱ्या भारतासारख्या जगातील लोकशाही राष्ट्रांचा आदर करूया.  भारतातील लोकशाही बळकट केल्याबद्दल अभिजात वर्ग आणि भारतातील जनतेचे अभिनंदन करूया.

🙏💐🙏💐🙏💐🙏💐

*ಪೂಜ್ಯಶ್ರೀ ಸದ್ಗುರು ಬಸವ ಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.*पूज्यश्री सद्गुरु बसव प्रभू स्वामीजी कल्याण महामने गुणतीर्थ-बसवकल्याण.*

Comments

Popular posts from this blog

ಅರುಹಿನ ಮರಹು ಅಹಂಕಾರದ ಕುರುಹು

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು