ಲಿಂಗಾಯತ ಧರ್ಮ ವಿರೋಧೀ ಹೇಳಿಕೆಗಳ ಹಿಂತೆಗೆಸಲು ಆಗ್ರಹ

 

 ಲಿಂಗಾಯತ ಧರ್ಮ ವಿರೋಧೀ ಹೇಳಿಕೆಗಳ ಹಿಂತೆಗೆಸಲು ಆಗ್ರಹ

 ನಿಜಗುಣಾನಂದ್,ಜಾಮದಾರ್,ಪಂಡಿತಾರಾಧ್ಯ ಶಿವಾಚಾರ್ಯಸ್ವಾಮೀಜಿ  ,ಮೀನಾಕ್ಷಿಬಾಳಿ ಇನ್ನೂ ಮುಂತಾದ ಕೆಲವರು  ಬಸವಣ್ಣನವರನ್ನು ಹೊಗಳುತ್ತಲೇ  ಲಿಂಗಾಯತ ಧರ್ಮದ ತತ್ವಗಳ ಮಹತ್ವವನ್ನು ಗೌಣ ಮಾಡಿ, ತತ್ವಗಳನ್ನು ಸಡಿಲಗೊಳಿಸಿ, ಲಿಂಗಾಯತರನ್ನು ಅಂತರ್ಜಾತಿ ವಿವಾಹ ಮತ್ತು ಮಾಂಸಾಹಾರಕ್ಕೆ ಒಗ್ಗಿಸಲು ನೀಡಿರುವ ಲಿಂಗಾಯತ ಧರ್ಮ ವಿರೋಧೀ ಹೇಳಿಕೆಗಳನ್ನು ಕೂಡಲೇ ಹಿಂತಿರುಗಿಸದಿದ್ದರೆ ಲಿಂಗಾಯತ ಸಮಾಜದ ಅಸ್ತಿತ್ವ ಉಳಿಯದು! ಒಂದು ವೇಳೆ ಅಲ್ಪಸ್ವಲ್ಪ ಸಮಾಜ ಉಳಿದರೂ ಅದು ಅರೆಜೀವವಾದಂತೆ ಅಥವಾ ಸತ್ತಂತೆ ಇರುತ್ತದೆ! ಅವರಿಗೆ ಬುದ್ಧಿ, ವಿವೇಕ, ತಿಳುವಳಿಕೆ ನೀಡಬೇಕು. ಹಾಗೂ ಹಿಂತೆಗೆದುಕೊಳ್ಳದಿದ್ದರೆ ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ ಅಥವಾ ಅನ್ವಯವಾಗುವ ಅಂತಹ ಯಾವುದೇ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ!                        ಇಲ್ಲದಿದ್ದರೆ ಅವರುಗಳ ಹೇಳಿಕೆಗಳು ದಾಖಲೆಗಳಾಗಿ ಉಳಿದು, ಅವೇ ಲಿಂಗಾಯತ ಧರ್ಮದ ತತ್ವಗಳೆಂದು ಮೂಢ, ಮುಗ್ಧ, ಅಜ್ಞಾನಿ, ಎಡವಟ್ಟು ಲಿಂಗಾಯತರು ತಪ್ಪಾಗಿ ತಿಳಿದು ಅನುಸರಿಸಿ ಪಾಲಿಸಿದರೆ ಲಿಂಗಾಯತ ಸಮಾಜದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ! ಗುರು ಬಸವದಿ ಪ್ರಮಥ ಪ್ರಣೀತ  ಲಿಂಗಾಯತ ಧರ್ಮ ಮತ್ತು ಸಮಾಜ ಮಹಾಸೌಧದ ಭದ್ರ ಕೋಟೆಯ ಕಲ್ಲುಗಳು ಸಡಿಲವಾಗಬಾರದೆಂದು ಸದ್ಭಾವನೆಯಿಂದ ಬರೆದಿದ್ದೇನೆ.


ಸು. ಮಲ್ಲಿಕಾರ್ಜುನಪ್ಪ, ಮತ್ತೀಪುರ, ೭-೧0-೨೦೨೪  

Comments

Popular posts from this blog

ಅರುಹಿನ ಮರಹು ಅಹಂಕಾರದ ಕುರುಹು

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು