ಕಲ್ಯಾಣ ಮಹಾಮನೆ ಧ್ಯೇಯ
*ಓಂ ಶ್ರೀ ಗುರು ಬಸವ ಲಿಂಗಾಯ ನಮಃ*
*866666*
*ಗುರು ಬಸವಣ್ಣನವರ ಸಂಸ್ಥಾಪಿಸಿದ*
*ಕಲ್ಯಾಣ ಮಹಾಮನೆ ಧ್ಯೇಯ*
1) *ಲಿಂಗಧ್ಯಾನ ಜಗತ್ತು*
2) *ಶರಣ ಜ್ಞಾನ ಜಗತ್ತು*
3) *ವಚನ ಜೀವನ ಜಗತ್ತು*
4) *ಅರಿವು ಆಚಾರ ಅನುಭಾವ ಜಗತ್ತು*
5) *ಸಸ್ಯಾಹಾರ ಜಗತ್ತು*
*1)*ಲಿಂಗಧ್ಯಾನ ಜಗತ್ತು:*
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.
ಜಗತ್ತನ್ನು ಆವರಿಸುವ ವಿಶ್ವ ಚೈತನ್ಯ ಶಕ್ತಿಯೇ(cosmic energy) ದೇವರು. ದೇಹ, ವರ್ಣ, ರೂಪವನ್ನು ತನ್ನಲ್ಲಿ ಗರ್ಭೀಕರಿಸಿಕೊಂಡು ಸೃಷ್ಟಿ, ಸ್ಥಿತಿ, ಲಯ, ತಿರೋದಾನ, ಅನುಗ್ರಹ ಶಕ್ತಿಗೆ ಕಾರಣವಾದ ಶಕ್ತಿಯೇ ದೇವರು. ಅಂತಹ ದೇವ ತತ್ವವನ್ನು, ಆ ದಿವ್ಯ ಶಕ್ತಿಯನ್ನು ಅರಿಯಲು ಆಯಸ್ಕಾಂತೀಯ ಗುಣಗಳಿಂದ ಆವೃತವಾದ ವಿಶ್ವಾಕಾರ ಸ್ವರೂಪ ಚುಳುಕಾದ ಇಷ್ಟಲಿಂಗವನ್ನು ಕರಕಮಲದಲ್ಲಿರಿಸಿಕೊಂಡು ಲಿಂಗ ನಿರೀಕ್ಷೆಣೆಯೊಂದಿಗೆ ಮನಸ್ಸನ್ನು ಏಕಾಗ್ರಗೊಳಿಸಿ ತನ್ನರಿವನ್ನು ಜಾಗೃತಿ ಮಾಡಿಕೊಂಡು ದಿವ್ಯಾನಂದ ಅನುಭವಿಸಿ, ಸದಾ ಅರಿವಿನ ಚೈತನ್ಯದಿಂದ ಕ್ರಿಯಾಶೀಲವಾಗಿರುವುದು. ಈ ಆನಂದವನ್ನು ಎಲ್ಲರಿಗೂ ಹಂಚುವುದು.
*2)*ಶರಣ ಜ್ಞಾನ ಜಗತ್ತು:*
ಗುರು ಬಸವಣ್ಣನವರು ನೀಡಿದ ಅಷ್ಟಾವರಣಗಳು ಮತ್ತು ಅವುಗಳ ಅರಿವಿನ ಮಾರ್ಗ. ಪಂಚಾಚಾರಗಳು ಮತ್ತು ಅವುಗಳ ಆಚಾರ ಮಾರ್ಗ. ಷಟಸ್ಥಲಗಳು ಮತ್ತು ಅವುಗಳ ಸಾಧನಾ ಮಾರ್ಗ. ಈ ಶರಣ ಜ್ಞಾನವನ್ನು ಸರಿಯಾಗಿ ಅರ್ಥೈಸಿಕೊಂಡು ಇಂತಹ ಶರಣ ಜ್ಞಾನ ಜಗತ್ತನ್ನು ನೋಡಿ ಆನಂದ ಪಡಬೇಕಾಗಿದೆ.
*3)*ವಚನ ಜೀವನ ಜಗತ್ತು:*
ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ಕೀರುತಿ ತುಂಬಿ. ಕೂಡಲಸಂಗಮದೇವಾ ನಿಮ್ಮ ಚರಣಕಮಲದೊಳಗಾನು ತುಂಬಿ.
ಎಮ್ಮ ವಚನದೊಂದು ಪಾರಾಯಣಕ್ಕೆ
ವ್ಯಾಸನದೊಂದು ಪುರಾಣ ಸಮ ಬಾರದಯ್ಯಾ ಎಮ್ಮ ವಚನದ ನೂರೆಂಟರಧ್ಯಯನಕ್ಕೆ
ಶತರುದ್ರೀ[ಯ ಯಾಗ] ಸಮ ಬಾರದಯ್ಯಾ.
ಎಮ್ಮ ವಚನದ ಸಾಸಿರ ಪಾರಾಯಣಕ್ಕೆ
ಗಾಯತ್ರಿ ಲಕ್ಷ ಜಪ ಸಮ ಬಾರದಯ್ಯಾ
ಕಪಿಲಸಿದ್ಧ ಮಲ್ಲಿಕಾರ್ಜುನಾ.
ಗುರು ಬಸವಾದಿ ಪ್ರಮಥರು ಲಿಂಗಯೋಗ ಸಾಧನೆಯ ಪರಿಣಾಮ, ಅನುಭವ ಮಂಟಪದಲ್ಲಿ ಲಿಂಗಾನುಭಾವದಿಂದ, ಕಾಯಕ ಪ್ರಜ್ಞೆಯಿಂದ ಅನುಭವಿಸಿ ಬರೆದಿರುವ ವಚನಗಳು ನೈತಿಕ, ಧಾರ್ಮಿಕ, ಶರಣಜ್ಞಾನದ ಮೌಲ್ಯಗಳಾಗಿವೆ. ಇಂತಹ ವಚನಗಳನ್ನು ಓದಿ, ಅರ್ಥೈಸಿಕೊಂಡು, ಅನುಷ್ಟಾನಕ್ಕೆ ತರುವುದಲ್ಲದೆ ವಚನ ಜ್ಞಾನ ಜಗತ್ತನ್ನು ಮತ್ತೊಮ್ಮೆ ನೋಡಬೇಕಾಗಿದೆ.
*4)*ಅರಿವು ಆಚಾರ ಅನುಭಾವ ಜಗತ್ತು:*
ಅರಿವೇ ಗುರು, ಆಚಾರವೇ ಶಿಷ್ಯ, ಅನುಭಾವವೇ ಜಂಗಮ, ಪರಿಣಾಮವೇ ತಪ ಸಮತೆ ಎಂಬುದೇ ಯೋಗ ಈಸುನರಿಯದೆ ಲೋಚ ಬೋಳಾದರೇನು ಮಹಾಲಿಂಗ ಕಲ್ಲೇಶ್ವರ ನಗುವನಯ್ಯ.
ಯಾವುದೇ ಬೇಧವಿಲ್ಲದೆ ಬೇಧವಿಲ್ಲದೆ ಸಮಾನ ಮನಸ್ಕರಾಗಿ ಅಷ್ಟಾವರಣಗಳ ಲಾಂಛನಗಳಿಂದ ಅರಿವು ಪಡೆದು ಆ ಅರಿವು ಆಚರಣೆಯಲ್ಲಿ ತಂದು ಅನುಭಾವಿಗಳಾಗಬೇಕು ಇಂತಹ ಸಮೃದ್ಧವಾದ ಜಗತ್ತನ್ನು ನಾವಿಂದು ನೋಡಬೇಕಾಗಿದೆ.
*5)*ಸಸ್ಯಾಹಾರ ಜಗತ್ತು:*
ಕೊಲ್ಲೆನಯ್ಯ ಪ್ರಾಣಿಗಳ, ಮೆಲ್ಲೆನಯ್ಯ ಬಾಯಿಚ್ಚೆಗೆ, ಹೊಲ್ಲೆನಯ್ಯ ಪರಸತಿಯರ ಸಂಗವ ಬಲ್ಲೆನಯ್ಯ ಮುಂದೆ ತೊಡಕುಂಟೆಂಬುದ ಬಳ್ಳದ ಬಾಯಂತೆ ಒಂದೇ ಮನವ ಮಾಡಿ ನಿಲ್ಲೆಂದು ನಿಲ್ಲಿಸಯ್ಯಾ ಕೂಡಲ ಸಂಗಮದೇವಾ.
ಮಾತಿನ ಮಾತಿಂಗೆ ನಿನ್ನ ಕೊಂದಹರೆಂದು
ಎಲೆ ಹೋತೆ ಅಳು ಕಂಡ್ಯಾ
ವೇದವನೋದಿದವರ ಮುಂದೆ ಅಳು ಕಂಡ್ಯಾ
ಶಾಸ್ತ್ರವನೋದಿದವರ ಮುಂದೆ ಅಳು ಕಂಡ್ಯಾ ನೀನತತ್ತದಕೆ ತಕ್ಕುದ ಮಾಡುವ ನಮ್ಮ ಕೂಡಲ ಸಂಗಮದೇವಾ.
ದಯವಿಲ್ಲದ ಧರ್ಮವದೇವುದಯ್ಯ
ದಯವಿರಬೇಕು ಸಕಲ ಪ್ರಾಣಿಗಳಲ್ಲಿ
ದಯವೇ ಧರ್ಮದ ಮೂಲವಯ್ಯ
ಕೂಡಲಸಂಗಮದೇವ ನಂತೊಲ್ಲದೊಲ್ಲನಯ್ಯಾ.
ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ
ಹಲವು ಪ್ರಾಣಿಯ ಕೊಂದು
ನಲಿನಲಿದಾಡುವ. ತನ್ನ ಮನೆಯಲೊಂದು ಶಿಶು ಸತ್ತಡೆ ಅದಕ್ಕೆ ಮರುಗುವಂತೆ ಅವಕೇಕೆ ಮರುಗ ? ಅದೆಂತೆಂದಡೆ 'ಸ್ವಾತ್ಮಾನಮಿತರಂ ಚೇತಿ ಭಿನ್ನತಾ ನೈವ ದೃಶ್ಯತಾಂ ಸರ್ವಂ ಚಿಜ್ಜ್ಯೋತಿರೇವೇತಿ ಯಃ ಪಶ್ಯತಿ ಸ ಪಶ್ಯತಿ' ಎಂದುದಾಗಿ ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ. ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು ಜೀವಹಿಂಸೆ ಮಾಡುವ ಮಾದಿಗರನೇನೆಂಬೆನಯ್ಯಾ ?
ಗುರು ಬಸವಾದಿ ಶರಣರು ತಮ್ಮ ನೈತಿಕ ವಚನಗಳ ಸಂದೇಶದಲ್ಲಿ ಸುಸ್ಪಷ್ಟವಾಗಿ ಮಾಂಸಹಾರವನ್ನು ನಿಷೇಧಿಸಿದ್ದಾರೆ ಅದು ತಾಮಸ ಆಹಾರವಾಗಿದೆ ಅಲ್ಲದೆ ಸಾತ್ವಿಕ ಜೀವನಕ್ಕೆ ಅತ್ಯಂತ ತೊಡಕನ್ನುಂಟು ಮಾಡುತ್ತದೆ. ಇನ್ನೊಂದು ಜೀವ ಸಂಕುಲ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಕಾಪಾಡುತ್ತವೆ ಹಾಗೂ ಜೀವಿಗಳನ್ನು ಕೊಲ್ಲುವುದು ಅಪರಾಧವಾಗಿದೆ. ಮನುಷ್ಯನ ದೇಹ ಸಸ್ಯಾಹಾರವನ್ನೇ ಸೇವನೆ ಮಾಡುವ ರಚನೆಯಾಗಿದೆ ಆದ್ದರಿಂದ ಸಸ್ಯಾಹಾರವನ್ನು ಸ್ವೀಕರಿಸಿ, ಶುದ್ಧ ಸಾತ್ವಿಕ ಜೀವನವನ್ನು ನಡೆಸುತ್ತಾ ಜೀವ ಸಂಕುಲಗಳ ಉಳಿವಿಗಾಗಿ ಸಸ್ಯಾಹಾರ ಜಗತ್ತನ್ನು ನಿರ್ಮಿಸಲು ನಾವು ನಿರಂತರ ತಿಳುವಳಿಕೆ ನೀಡಬೇಕಾಗಿದೆ.
ಒಟ್ಟಾರೆ ನಾವು ಇಂದು ಪ್ರತಿಷ್ಠೆಗಾಗಿಯೇ ಬಸವ ಧರ್ಮವನ್ನು ಆಶ್ರಯಿಸದೆ, ಬಸವ ಧರ್ಮದ ಉಳಿವು ಮತ್ತು ಬೆಳವಣಿಗಾಗಿ ನಮ್ಮೊಳಗಿನ ಅಹಂ ಎಂಬ ಅಡ್ಡಗೋಡೆಯನ್ನು ಒಡೆದು ಹಾಕಿ ಈ ಐದು ಜಗತ್ತನ್ನು ಮತ್ತೊಮ್ಮೆ ನೋಡಲು ಶ್ರಮಿಸೋಣ.
*ಶರಣು ಶರಣಾರ್ಥಿ*
🙏🙏🙏🙏🙏🙏🙏🙏🙏
🙏 *ಬಸವ ಧರ್ಮ ಚಿಂತಕರು* ✍️
*ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಗುಣತೀರ್ಥವಾಡಿ-ಬಸವಕಲ್ಯಾಣ.* 9663841019
.jpeg)
Comments
Post a Comment