ಊರಿಗೆ ದಾರಿಯನ್ನು ತೋರುವವನು ಇಂಥವನೇ ಇರಬೇಕೆಂದಿಲ್ಲ

 *🌷ಶ್ರೀವಾಣಿ 21-7-2024🌷*


*ಊರಿಂಗೆ ದಾರಿಯನು ಯಾರು ತೋರಿದರೇನು ?*

*ಸಾರಾಯದ ನಿಜವನರುಹುವ ಗುರುವು,*

*ಯಾರಾದರೇನು ಸರ್ವಜ್ಞ!*


ಊರಿಗೆ ದಾರಿಯನ್ನು ತೋರುವವನು ಇಂಥವನೇ ಇರಬೇಕೆಂದಿಲ್ಲ. ಹಾಗೆಯೇ ಮುಕ್ತಿಯ ಮಾರ್ಗವನ್ನು ತೋರುವ ಗುರುವಾದರೂ ಹೀಗೇ ಇರಬೇಕು. ಇಂಥವನೇ ಇರಬೇಕು ಎಂದಿಲ್ಲ. ಆದುದರಿಂದ ಸತ್ಯವನ್ನರಿಯುವ ತೀವ್ರವಾದ ಹಂಬಲವುಳ್ಳವರಾಗಿ ಜಾಗ್ರತೆಯಿಂದ ನಡೆದರೆ ಜಗವಿದೆಲ್ಲವೂ ಗುರುವಾಗಿ ಕೈ ಹಿಡಿದು ಮುನ್ನಡೆಸುತ್ತದೆ. *'ಕರಣಾಳು ಬಾ ಬೆಳಕೇ ಕೈ ಹಿಡಿದು ಮುನ್ನಡೆಸು'* ಎಂದು ಮನದುಂಬಿ ಪ್ರಾರ್ಥಿಸಿದರೆ ಸಾಕು ನಿಸರ್ಗವೆ ನಮಗೆ ನಿಜವಾದ ಗುರುವಾಗಿ ನಿಲ್ಲುತ್ತದೆ.


ಪರಮ ಪೂಜ್ಯ ಶ್ರೀ *ಸಿದ್ಧೇಶ್ವರ ಸ್ವಾಮೀಜಿ* ಅವರ *ಪೂರ್ಣಯೋಗ* ಪುಸ್ತಕದಿಂದ ಪುಟ 36. *ನಿಮಗೆ ನಿಮ್ಮವರೆಲ್ಲರಿಗೆ ಒಳ್ಳೆಯದಾಗಲಿ ಶುಭ ಮುಂಜಾನೆ ಶುಭದಿನ ಶರಣು* ಹಣವಂತ ನಾಗುವ ಬದಲು ಗುಣವಂತನಾಗು ಏಕೆಂದರೆ ನಿಸರ್ಗ ಮತ್ತು ಜನರು ಹಣವಂತ ನನ್ನು ಪೂಜಿಸಿಲ್ಲ ಸ್ಮರಿಸಿಲ್ಲ ಗುಣವಂತನನ್ನು ಪ್ರತಿದಿನವೂ ಸ್ಮರಿಸುವರು ಪೂಜಿಸುವರು🙏🙏🙏🙏🙏🙏 ಸಮಯ ನೀಡಿ ಓದಿದ ತಮಗೆ ಧನ್ಯವಾದಗಳು

Comments

Popular posts from this blog

ಅರುಹಿನ ಮರಹು ಅಹಂಕಾರದ ಕುರುಹು

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು