ಮಕ್ಕಳನ್ನು ನೈತಿಕ ಮಾರ್ಗದಲ್ಲಿ ಬೆಳೆಸುವುದು ತಂದೆ ತಾಯಿ ಮತ್ತು ಸಮಾಜದ ಕರ್ತವ್ಯವಾಗಿದೆ: ಶರಣಾನಂದ ಸ್ವಾಮೀಜಿ
ಓಂ ಶ್ರೀ ಗುರು ಬಸವ ಲಿಂಗಾಯ ನಮಃ
*ಪತ್ರಿಕಾ ಪ್ರಕಟಣೆ ಕೃಪೆಗಾಗಿ*
*ಮಕ್ಕಳನ್ನು ನೈತಿಕ ಮಾರ್ಗದಲ್ಲಿ ಬೆಳೆಸುವುದು ತಂದೆ ತಾಯಿ ಮತ್ತು ಸಮಾಜದ ಕರ್ತವ್ಯವಾಗಿದೆ: ಶರಣಾನಂದ ಸ್ವಾಮೀಜಿ.*
ಇಂದಿನ ಮೊಬೈಲ್ ಜಗತ್ತಿನಲ್ಲಿ ಮಕ್ಕಳು ಸಂಕೋಚಿತ ಮನಸ್ಥಿತಿಯನ್ನು ಹೊಂದಿ ಕುಟುಂಬ ಪ್ರೇಮ ಸಮಾಜ ಪ್ರೇಮ, ರಾಷ್ಟ್ರ ಪ್ರೇಮ, ವ್ಯಕ್ತಿತ್ವ ವಿಕಾಸದಿಂದ ದೂರ ಉಳಿಯುತ್ತಿದ್ದಾರೆ ಇಂತಹ ಪ್ರಕ್ಷಬ್ಧ ಸಮಯದಲ್ಲಿ ತಂದೆ-ತಾಯಿಗಳು, ಸಮಾಜದ ಬಂಧುಗಳು ಮಕ್ಕಳನ್ನು ಸತ್ಸಂಗದಲ್ಲಿ ಭಾಗಿಯಾಗಿಸಿ ಅವರನ್ನು ನೈತಿಕ ಮಾರ್ಗದಲ್ಲಿ ಮುಂದುವರೆಸಬೇಕು ಎಂದು ಹುಬ್ಬಳ್ಳಿ ಪಾರ್ಥ ಹಳ್ಳಿ ಶಾಂತಾಶ್ರಮ ಸಿದ್ಧಾರೂಢ ಮಠದ ಪೂಜ್ಯಶ್ರೀ ಸದ್ಗುರು ಶರಣಾನಂದ ಸ್ವಾಮೀಜಿ ಹೇಳಿದರು.
ಅವರು ಅರಿವು ಆಚಾರ ಅನುಭವ ಕೇಂದ್ರದಲ್ಲಿ ಹಮ್ಮಿಕೊಂಡ ತರಂಗಿಣಿ ಓದು ಸಮಾರೋಪ ಸಮಾರಂಭದ ಕಾರ್ಯಕ್ರಮದ ದಿವ್ಯ ನೇತೃತ್ವವನ್ನು ವಹಿಸಿಕೊಂಡು ಮಾತನಾಡಿದವರು ತಾಲೂಕಿನ ಮಾಧುರಿ ಎಂಬ ಪುಟ್ಟ ಬಾಲಕಿ ಸಾಮಾಜಿಕ ಜಾಲತಾಣದಲ್ಲಿ ಏಳು ತಿಂಗಳಗಳ ಕಾಲ ನಿರಂತರವಾಗಿ ಜಗದ್ಗುರು ಮಾತೆ ಮಹಾದೇವಿಯವರು ಬರೆದ ತರಂಗಣಿ ಗ್ರಂಥವನ್ನು ಓದಿ ಹೇಳಿರುವುದು ಶ್ಲಾಘನೀಯ. ಅತ್ಯಂತ ಕಡುಬಡತನಲ್ಲಿ ಬೆಳೆದು ಬಂದ ಚಿಕ್ಕ ಮಗು ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯಬೇಕೆಂಬ ಹಂಬಲ ಹೊಂದಿದವಳಾಗಿದ್ದಾಳೆ, ಏಳು ತಿಂಗಳ ಪ್ರವಚನ ಮಾಲಿಕೆಯಲ್ಲಿ ಸಾಕ್ಷಾತ್ ಅಕ್ಕಮಹಾದೇವಿ ಸ್ವರೂಪದಲ್ಲಿ ನಿಂತು ತರಂಗಣಿ ಗ್ರಂಥವನ್ನು ವಾಚಿಸಿ ನಮ್ಮೆಲ್ಲರಿಗೆ ಕೇಳಿಸಿ ಹರ್ಷವನ್ನುಂಟು ಮಾಡಿದ್ದಾಳೆ ಈ ಕಾರ್ಯಕ್ರಮದ ಮಂಗಲಾಚರಣೆಯನ್ನು ಆಚರಿಸಿರುವುದು ಬಸವಕಲ್ಯಾಣದ ಶರಣೆಯರ ಬಳಗ ಅತ್ಯಂತ ಸಂತಸದ ಸಂಗತಿ ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿದ ಅನುಭವ ಮಂಟಪದ ಪೂಜ್ಯಶ್ರೀ ಸದ್ಗುರು ಪೂರ್ಣ ಮಾತಾಜಿ ಅವರು ಮಾತನಾಡಿ ಮಾನವನ ಜನ್ಮ ಅತ್ಯಂತ ಪವಿತ್ರವಾಗಿದ್ದು ಪರಮಾತ್ಮನು ಒಂದು ಮಗುವನ್ನು ಈ ಜಗತ್ತಿಗೆ ಕಳಿಸಬೇಕಾದರೆ ವಿಶೇಷ ಆಶಯವನ್ನು ಹೊತ್ತು ಕಳಿಸುತ್ತಾನೆ ಆ ಪರಮಾತ್ಮನ ದಿವ್ಯದೃಷ್ಟಿಯಂತೆ ತಂದೆ ತಾಯಿ ಸಮಾಜ ಗುರುಹಿರಿಯರು ಕಾಳಜಿಯಿಂದ ಮಕ್ಕಳನ್ನು ಬೆಳೆಸಿ ಮಕ್ಕಳನ್ನು ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಪೂಜ್ಯ ಯೋಗಮಯಿ ಸತ್ಯಮೇಧಾವಿಯವರು ಮಾತನಾಡಿ 12ನೇ ಶತಮಾನದ ಈ ಕಲ್ಯಾಣ ಪವಿತ್ರ ನೆಲದಲ್ಲಿ ಗುರು ಬಸವಾದಿ ತಮ್ಮ ತರು ನಡೆದಾಡಿ ಶಿವನ ಬೆಳಕನ್ನು ಚೆಲ್ಲಿದ್ದಾರೆ ಅಂತಹ ಶಿವನ ಬೆಳಕನ್ನು ಅನುಭವಕ್ಕೆ ತಂದುಕೊಳ್ಳುವ ಯೋಗ ನಮಗೆ ಒದಗಬೇಕಾದರೆ ಸತ್ಸಂಗ ಮತ್ತು ಗುರುವಿನ ಅನುಗ್ರಹ ಬೇಕಾಗುತ್ತದೆ ಅಂಥಹ ಸತ್ಸಂಗ ಸಿಕ್ಕಿರುವುದರಿಂದ ಮಾಣಿಕನಾಳದ ಮಾಧುರಿ ಚಿಕ್ಕ ವಯಸ್ಸಿನಲ್ಲಿ ಪ್ರವಚನ ಮಾಡಲು ಸಾಧ್ಯವಾಗಿದೆ ಎಂದರಲ್ಲದೆ ಬಸವಕಲ್ಯಾಣ ಬಸವಣ್ಣನ ಆತ್ಮ ಕಲ್ಯಾಣವಾಗಿರುವುದರಿಂದ ನಾವೆಲ್ಲರೂ ಹಂಚಿಕೊಂಡು ತಿನ್ನುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕಾಗಿದೆ ಈ ಕಾರಣಕ್ಕಾಗಿ ಸಿರಿಧಾನ್ಯಗಳನ್ನ ತಮ್ಮ ತಮ್ಮ ಮನೆಯಲ್ಲಿ ಬೆಳೆದು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕೆಂದರು. ತಾವು ತಂದಿರುವ ಸಿರಿಧಾನ್ಯಗಳ ಬೀಜವನ್ನು ಹಂಚುವುದಲ್ಲದೆ ತಮ್ಮ ಮನೆಗಳಲ್ಲಿ ಬೆಳೆಸಬೇಕೆಂದು ಕಳಕಳಿಯಿಂದ ಮನವಿ ಮಾಡಿಕೊಂಡರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡು ಮಾತನಾಡಿದ ಗುಣ ತೀರ್ಥವಾಡಿ ಕಲ್ಯಾಣ ಮಹಾಮನೆಯ ಪೂಜ್ಯಶ್ರೀ ಸದ್ಗುರು ಬಸವ ಪ್ರಭು ಸ್ವಾಮೀಜಿಯವರು. ಸ್ವತಂತ್ರ ಮತ್ತು ಸ್ವಾಭಿಮಾನ ಹಾಗೂ ಆಧ್ಯಾತ್ಮಿಕ ಜೀವನ ಮಾಡಿ ಸತ್ಪಥದಲ್ಲಿ ಮುನ್ನಡೆಯಬೇಕೆಂಬುವವರು ಮೊದಲು ಗುರುವಿನ ಮಾರ್ಗದರ್ಶನ ಮಾಡಿಕೊಳ್ಳಬೇಕಾಗುತ್ತದೆ ಅದೇ ರೀತಿ ಮಾಣಿಕ್ಯನಾದ ಮಗು ಗುರುಹಿರಿಯರ, ತಂದೆ ತಾಯಿಯರ ಆಶೀರ್ವಾದದಿಂದ ಅಧ್ಯಯನ ಮಾಡಿ ಇಂದು ತನ್ನ ಜ್ಞಾನ ಪ್ರತಿಭೆಯನ್ನು ಹೊರ ಹಾಕಿದ್ದಾಳೆ ಹೀಗಾಗಿ ಮುಂದೊಂದು ದಿನ ಅದ್ಭುತ ಆಧ್ಯಾತ್ಮಿಕ ವೈಚಾರಿಕ ವೈಜ್ಞಾನಿಕ ಪ್ರವಚನಕಾರರಾಗಿ ಹೊರಹೊಮ್ಮಲೆಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದ ನಿವೃತ್ತ ಜಿಲ್ಲಾ ನ್ಯಾಯಾಧೀಶರಾದ ಎಸ್ಎಸ್ ನಾಗರಾಳೆಯವರು ಮಾಧುರಿ ಮಗುವಿಗೆ ಸತ್ಕರಿಸಿ, ಕಿರು ಕಾಣಿಕೆ ನೀಡಿ ಮಾತನಾಡಿದ ಅವರು ಇಂದು ನಮ್ಮ ಶ್ರೀಮಂತಿಕೆಯಲ್ಲಿ ಮಕ್ಕಳು ಕಳೆದು ಹೋಗಬಾರದು, ಮಕ್ಕಳ ಹೃದಯವನ್ನೇ ಶ್ರೀಮಂತಗೊಳಿಸುವಲ್ಲಿ ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಉತ್ತಮ ಮಕ್ಕಳನ್ನು ಈ ಸಮಾಜಕ್ಕೆ ನೀಡುವಲ್ಲಿ ಸಫಲರಾಗುತ್ತೇವೆ ಹಾಗಾಗಿ ಬಡ ಮಕ್ಕಳನ್ನು ನಿರ್ಗತಿಕ ಮಕ್ಕಳನ್ನು ಪ್ರತಿಭಾನ್ವಿತ ಮಕ್ಕಳನ್ನು ಗೌರವಿಸಬೇಕೆಂದರು.
ಕಾರ್ಯಕ್ರಮದಲ್ಲಿ ವೈದ್ಯ ಬಸವರಾಜ ಪಂಡಿತ್, ಮಾತೃಶ್ರೀ ಕಸ್ತೂರಿಮಾತೆ, ದಿಲೀಪ್ ಶಿಂದೆ, ಲಕ್ಷ್ಮಣರಾವ್ ಮೇತ್ರಿ, ಗಣಪತಿ ಖಾಸ್ತೆ ನಾಗಶೆಟ್ಟಿ ಗೋರ್ಟಾ, ಪಂಡಿತ್ ನಾಗರಾಳೆ, ಹನುಮಂತ್ ಬಗಲಿ, ರಾಜೇಶ್ವರಿ ಖೂಬಾ, ಜಯಶ್ರೀ ಪಾಟೀಲ್, ಗಿರಿಜಾ ಸಿದ್ದಣ್ಣ, ಸೋನಾಲಿ ಎಸ್ ನೀಲಕಂಠ, ರೇಣುಕ ಮಾಮ, ಸರಸ್ವತಿ ಹೋದಲೂರೆ, ಬಸವಕಲ್ಯಾಣದ ಶರಣ ಶರಣೀಯರ ಬಳಗ ಉಪಸ್ಥಿತರಿದ್ದರು.
ಸುಮಿತ್ರ ದಾವಣಗೆರೆ ಸ್ವಾಗತಿಸಿದರು, ಸಂಗಮೇಶ್ ತೊಗರಖೇಡೆ ನಿರೂಪಿಸಿದರು, ಚಂದ್ರಕಾಂತ ಗುಂಗೆ ವಂದಿಸಿದರು.
*ವರದಿ:* ಪೂಜ್ಯಶ್ರೀ ಸದ್ಗುರು ಬಸವ ಪ್ರಭು ಸ್ವಾಮೀಜಿ ಕಲ್ಯಾಣಿ ಮಹಾಮನೆ ಗಣತೀರ್ಥವಾಡಿ ಬಸವಕಲ್ಯಾಣ
Comments
Post a Comment