ದೀಕ್ಷೆಯಿಲ್ಲದೆ ಮೋಕ್ಷವಿಲ್ಲ

ದೀಕ್ಷೆಯಿಲ್ಲದೆ ಮೋಕ್ಷವಿಲ್ಲ



೧೨ ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಕೊಟ್ಟ ಇಷ್ಟಲಿಂಗ ದೀಕ್ಷೆಯನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಪ್ರತಿದಿನ ಲಿಂಗಪೂಜೆಯನ್ನು ಮಾಡಿಕೊಳ್ಳಬೇಕು. ಲಿಂಗಪೂಜೆಯಿಂದ ಮನಸು ಹಗುರವಾಗಿ ಆನಂದಮಯವಾಗುತ್ತದೆ. ತ್ರಾಟಕ ಯೋಗದಿಂದ ಕಣ್ಣುಗಳಲ್ಲಿ ಕಾಂತಿ ಹೆಚ್ಚಾಗುತ್ತದೆ. ಮಕ್ಕಳು ಚಿಕ್ಕವರಿದ್ದಾಗಲೇ ಗುರುವಿನ ಹಸ್ತ ಮಸ್ತಕ ಸಂಯೋಗದಿಂದ ದೀಕ್ಷೆ ಕೊಡಿಸಬೇಕು. ಹಲವು ಕಡೆಗಳಲ್ಲಿ ಮಕ್ಕಳಿಗೆ ದೀಕ್ಷೆ ಕೊಡೋಣವೆಂದು ಗುರುಗಳು ಹೇಳಿದಾಗ ಪಾಲಕರು ಅದನ್ನು ತಿರಸ್ಕರಿಸುತ್ತಾರೆ. ಮಗು ಇನ್ನೂ ಚಿಕ್ಕವನು, ದೊಡ್ಡವನಾದ ಮೇಲೆ ದೀಕ್ಷೆ ಕೊಡಿಸೋಣವೆಂದು ಮಕ್ಕಳನ್ನು ದಾರಿ ತಪ್ಪಿಸುತ್ತಾರೆ. ಅದು ತಪ್ಪು. "ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಕ್ಕಳಿಗೆ ಚಿಕ್ಕಂದಿನಿಂದಲೇ ಆಧ್ಯಾತ್ಮದ ಜ್ಞಾನ ನೀಡಬೇಕು. ಸಂಸ್ಕಾರ ಕೊಡಿಸಬೇಕು. ಇಲ್ಲದಿದ್ದರೆ ಮಕ್ಕಳು ದಾರಿ ತಪ್ಪುತ್ತಾರೆ. ಒಮ್ಮೆ ದೀಕ್ಷೆ ಇಲ್ಲದೆ ಮೋಕ್ಷವಿಲ್ಲ' ಎಂಬ ನಮ್ಮ ಲೇಖನ ಪತ್ರಿಕೆಯಲ್ಲಿ ಓದಿ ಒಬ್ಬ ತಾಯಿ ಬಂದು ದೀಕ್ಷೆ ಪಡೆದುಕೊಂಡರು. ಇದು ಇತರರಿಗೂ ಸ್ಫೂರ್ತಿಯಾಗಬೇಕು. ಹುಟ್ಟಿದಾಗಲೂ ಲಿಂಗ ಕಟ್ಟುತ್ತಾರೆ. ಕೊನೆಗೆ ಲಿಂಗೈಕ್ಯರಾಗಿ ಅಂತೀಮ ಸಂಸ್ಕಾರ ನೆರವೇರಿಸುವಾಗಲೂ ಎಲ್ಲಾ ಒಡವೆ ತೆಗೆದು ಕೇವಲ ಲಿಂಗ ಮಾತ್ರ ಕಟ್ಟುತ್ತಾರೆ. ಒಡವೆ ತೆಗೆಯುವಾಗ ಅವು ಬರದಿದ್ದರೆ ಶರೀರದ ಅಂಗಾಂಗಳನ್ನು ಕತ್ತರಿಸಿ ಒಡವೆ ತೆಗೆಯುತ್ತಾರೆ. ಕೊನೆಯ ಕ್ಷಣದಲ್ಲಿ ನಮ್ಮ ಜೊತೆಗೆ ಬರುವುದು

ಕೇವಲ ಇಷ್ಟಲಿಂಗ. ಆದ್ದರಿಂದ ದೀಕ್ಷೆ ಪಡೆದುಕೊಂಡರೆ ಮೋಕ್ಷ ಲಭಿಸುತ್ತದೆ. ''ಊರ ಕೋಳಿ ಕೂಗದ ಮುನ್ನ, ಕಾಡು ನವಿಲು ಒದರದ ಮುನ್ನ ಲಿಂಗವ ಪೂಜಿಸಬೇಕು". "ಸುಪ್ರಭಾತ ಸಮಯದಲ್ಲಿ ಅರ್ತಿಯಲ್ಲಿ ಲಿಂಗವ ನೆನೆದರೆ, ತಪ್ಪುವವು ಅಪಮೃತ್ಯು ಕಾಲ ಕಮರ್ಂಗಳಯ್ಯ" ಎಂದು ಬಸವಣ್ಣನವರು ಹೇಳುತ್ತಾರೆ. ಆದ್ದರಿಂದಲೇ ೧೨ ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ದಲಿತರ, ಅಸ್ಪೃಶ್ಯರ,ದು ರ್ಬಲರ, ನೊಂದವರ, ಕೆಳವರ್ಗದವರಕೇರಿಗೆ ತೆರಳಿ ದೀಕ್ಷೆ ನೀಡಿದರು. ದೀಕ್ಷೆಪಡೆದವರೆಲ್ಲರೂ ಪಾವನರಾದರು. 

-ಪೂಜ್ಯ ಚನ್ನಬಸವಾನಂದ ಸ್ವಾಮಿಜಿ

 ಮಹಾರಾಷ್ಟ್ರದ ಮಂಗಳವಾಡೆಯಲ್ಲಿ ನಡೆದ ಪ್ರವಚನ ಸಾರ

Comments

Popular posts from this blog

ಅರುಹಿನ ಮರಹು ಅಹಂಕಾರದ ಕುರುಹು

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು