ಧರ್ಮಪಿತ ಬಸವಣ್ಣನವರನ್ನು ಏಕವಚನದಲ್ಲಿ ಸಂಬೋಧಿಸುವುದು ಸಲ್ಲದು

 ಧರ್ಮಪಿತ ಬಸವಣ್ಣನವರನ್ನು

ಏಕವಚನದಲ್ಲಿ ಸಂಬೋಧಿಸುವುದು ಸಲ್ಲದು

ಅನೇಕರು ಧರ್ಮಗುರು ಬಸವಣ್ಣನವರಿಗೆ ಬಸವಣ್ಣ ಎಂದು ಏಕವಚನದಲ್ಲಿ "ಅವ"  "ಇವ" "ಅವನು" "ಇವನು" "ಆತ" "ಈತ" "ಹೇಳಿದನು" "ಮಾಡಿದನು" ಎಂದೆಲ್ಲ ತೀರ ಹಗುರವಾಗಿ ಸಂಭೋಧಿಸುವುದು ಯಾವ ಕಾರಣಕ್ಕೂ ಯಾವ ಕಾಲಕ್ಕೂ ಸಲ್ಲದು.

ಅಧಿಕಾರಿಗಳು, ಗಣ್ಯರು ಮೊದಲಾದವರನ್ನು ಬಹುವಚನದಲ್ಲಿಯೇ ಸಂಬೋಧಿಸಲಾಗುತ್ತದೆ. ಧರ್ಮಗುರು ಅದಕಿಂತ ಕಡಿಮೆಯೇ? ಅವರು ಧರ್ಮಗುರು ಅಷ್ಟೇ ಅಲ್ಲ ಧರ್ಮಪಿತ-ಅಪ್ಪ-ತಂದೆ. 'ಓಂ ಶ್ರೀ ಗುರು ಬಸವಲಿಂಗಾಯ ನಮಃ' ಮಂತ್ರದಲ್ಲಿಯೆ ಬಸವಣ್ಣನವರಿಗೆ 'ಶ್ರೀ ಗುರು' ಎಂದು ಪೂಜ್ಯಭಾವದ ವಿಶೇಷಣ ಇರುವುದು ತಿಳಿದ ವಿಚಾರ.

ಸಿಖ್ಖರು ತಮ್ಮ ಧರ್ಮ ಸ್ಥಾಪಕರಾದ 'ನಾನಕ' ಅವರನ್ನು 'ಗುರು ನಾನಕ್ ದೇವ್' ಎಂದು ಪೂಜ್ಯತೆಯಿಂದ ಸಂಬೋಧಿಸುವರು. 

ಆತ್ಮೀಯತೆ ಇದ್ದ ಮಾತ್ರಕ್ಕೆ ಎಕವಚನದಲ್ಲಿ ಸಂಬೋಧಿಸುವುದು ಸರಿಯಲ್ಲ. ಆತ್ಮಿಯತೆ ಇದ್ದರೂ ಮಕ್ಕಳು ತಂದೆಯವರು ಎಂದು ಹೇಳುತ್ತಾರೆ. ಅದ್ದರಿಂದ, ಧರ್ಮಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಚ್ಯುತಿ ಬರದಂತೆ "ಧರ್ಮಪಿತರು, ಧರ್ಮಗುರು ಬಸವಣ್ಣನವರು, ಗುರು ಬಸವಣ್ಣನವರು, ಬಸವಣ್ಣನವರು" ಎಂದು ಗೌರವಪೂರ್ವಕವಾಗಿ ಸಂಬೋಧಿಸಬೇಕು.

ನುಡಿದರೆ ಮುತ್ತಿನ ಹಾರದಂತಿರಬೇಕು.



Comments

  1. ಆತ್ಮೀಯತೆಯಿಂದ ಯಾರಾದರೂ ಬಸವಣ್ಣ ನವರನ್ನು ಏಕ ವಚನ ದಿಂದ ಕರೆಯುವುದು ಕೂಡ ಸರಿಯಲ್ಲ ಎಂಬ ತಮ್ಮ ಅಭಿಪ್ರಾಯ ಅಷ್ಟೊಂದು ಸರಿ ಅಲ್ಲ. ಮಾತನಾಡುವ ಸಂದರ್ಭ ಹಾಗೂ ವಿಷಯದಿಂದ ಆತ್ಮೀಯತೆ ಹೊರಹೊಮ್ಮುತ್ತಿದ್ದರೆ ತಪ್ಪೇನಿಲ್ಲ. ಇದು ನನ್ನ ಅಭಿಪ್ರಾಯ

    ReplyDelete

Post a Comment

Popular posts from this blog

ಅರುಹಿನ ಮರಹು ಅಹಂಕಾರದ ಕುರುಹು

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು