ಪ್ರವಚನ ಮಾಡುವಾಗ, ಅದರಲ್ಲಿ ಸೇರಿಸಿದ್ದ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಹೊರತು ಪಡಿಸಿ ಉಪಯೋಗಿಸಿ, ಸಂಸ್ಕೃತ ಪದಗಳು ಮತ್ತು ಶ್ಲೋಕಗಳಿಂದ ವಚನಗಳ ಪಾವಿತ್ರ್ಯ ಹಾಳಾಗುತ್ತಿವೆ
ಪ್ರವಚನ ಮಾಡುವಾಗ, ಅದರಲ್ಲಿ ಸೇರಿಸಿದ್ದ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಹೊರತು ಪಡಿಸಿ ಉಪಯೋಗಿಸಿ, ಸಂಸ್ಕೃತ ಪದಗಳು ಮತ್ತು ಶ್ಲೋಕಗಳಿಂದ ವಚನಗಳ ಪಾವಿತ್ರ್ಯ ಹಾಳಾಗುತ್ತಿವೆ
*ಬಸವಾದಿ ಶರಣರ ವಚನಗಳನ್ನು ತತ್ವ ಸಿದ್ದಾಂತಗಳನ್ನು 12ನೇ ಶತಮಾನದಿಂದ 2024 ರ ವರೆಗೆ ಹಾಳು ಮಾಡಲು ವೈದಿಕರು ಪ್ರಯತ್ನ ಮಾಡುತ್ತಿದ್ದಾರೆ:*
*ವಚನಗಳಲ್ಲಿ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಸೇರಿಸಿದ್ದ ವಚನಗಳು ಹಾಗು ಆವಗಳನ್ನು ತೆಗೆದು ಹಾಕಿದ್ದ ವಚನಗಳನ್ನು ಇಲ್ಲಿ ಉಲ್ಲೇಖಿಸಲಾಗಿದೆ, ಸಂಸ್ಕೃತ ಸಹಿತ ಮತ್ತು ರಹಿತ ವಚನಗಳು ಓದಿ ಭೇದ ಮತ್ತು ಅನುಭವ ವ್ಯಕ್ತಪಡಿಸಿ:*
*ಮುಖ್ಯವಾದುದು: ಬಸವಾದಿ ಶರಣರ ವಚನ ಸಾಹಿತ್ಯ ಓದುವಾಗ, ಬರೆಯುವಾಗ, ಭಾಷಣ ಮಾಡುವಾಗ ಮತ್ತು ಪ್ರವಚನ ಮಾಡುವಾಗ, ಅದರಲ್ಲಿ ಸೇರಿಸಿದ್ದ ಸಂಸ್ಕೃತ ಪದಗಳು ಮತ್ತು ಶ್ಲೋಕಗಳು ಹೊರತು ಪಡಿಸಿ ಉಪಯೋಗಿಸಿ, ಸಂಸ್ಕೃತ ಪದಗಳು ಮತ್ತು ಶ್ಲೋಕಗಳಿಂದ ವಚನಗಳ ಪಾವಿತ್ರ್ಯ ಹಾಳಾಗುತ್ತಿವೆ.*
ಮೊದಲು ಬಸವಣ್ಣನವರನ್ನು ಗಡಿ ಪಾರು ಮಾಡಿದರು, ಅಂತರ್ಜಾತಿ ವಿವಾಹ ನೆಪ ಒಡ್ಡಿ ಸಮಗಾರ ಹರಳಯ್ಯ ಬ್ರಾಹ್ಮಣ್ಯ ಮಧುವರಸರನ್ನು ಆನೆ ಕಾಲಿಗೆ ಕಟ್ಟಿ ಎಳೆ ಹೊಟ್ಟಿ ಶಿಕ್ಷೆ ಕೊಟ್ಟರು, ವಚನ ಸಾಹಿತ್ಯ ಸುಟ್ಟರು, ವಚನ ಸಾಹಿತ್ಯ ರಕ್ಷಣೆ ಮಾಡಲು ಹೋರಾಟ ಮಾಡಿದ್ದ ಶರಣರ ಕೊಲೆ ಮಾಡಿ ರಕ್ತದ ಓಕಳಿ ಹರಿಸಿದರು,ಅಂದಿನ ವೈದಿಕರು ಬಿಜ್ಜಳ ಮಹಾರಾಜರ ಮಂತ್ರಿಗಳಾದ ಕೊಂಡಿ ಮಂಚಣ್ಣ, ಶೆಟ್ಟಿ ಮತ್ತು ಭಟ್ಟರು.
*ವಚನಗಳು ನೂರಾರು ವರ್ಷಗಳ ವರೆಗೆ ಭೂಗತವಾದವು, ಅವಗಳನ್ನು ಲಿಂಗಾಯತರು ಬಸವ ಭಕ್ತರು ರಕ್ಷಣೆ ಮಾಡಿ ಮನೆಯಲ್ಲಿಯ ಇಟ್ಟುಕೊಂಡರು, ಕೆಲವರು ಗಂಟು ಕಟ್ಟಿ ಪೂಜೆ ಮಾಡಿದರು, ಕೆಲವು ಗೆದ್ದಲು ಹತ್ತಿ ಹಾಳು ಆದವು. ಆದರೆ ಜನ ಸಾಮಾನ್ಯರ ಬಾಯಿಯಿಂದ ಬಾಯಿಗೆ ವರ್ಗ ಆಗುತ್ತಾ ವಚನಗಳು ಜೀವಂತವು ಉಳಿದವು, ಬಸವ ತತ್ವ ಸಿದ್ದಾಂತ ಸಂಸ್ಕೃತಿ ಜೀವಂತ ಉಳಿಯಿತು. 15ನೆ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ್ಯರು ವಚನಗಳನ್ನು ತಾಡೋಲೆಗಳ ಮೇಲೆ ಮರು ಬರೆಯಸಿದ್ದರು, ವಚನ ಸಾಹಿತ್ಯ ರಕ್ಷಣೆ ಮಾಡಿದರು. ಮುಂದೆ 19ನೆ ಶತಮಾನದಲ್ಲಿ ಪೂಜ್ಯ ಶ್ರೀ ಫ ಗು ಹಳಕಟ್ಟಿ ಯವರು ಬಸವಾದಿ ಶರಣರ ವಚನ ತಾಡೋಲೆಗಳನ್ನು ಸಂಗ್ರಹಿಸಿ ಪ್ರಿಂಟ್ ಮಾಡಿಸಿದ್ದರು. 12ನೆ ಶತಮಾನದಿಂದ ಈಚೆಗೆ ವಚನಗಳಲ್ಲಿ ಕೆಲವು ವೈದಿಕ ಪಂಡಿತರು ಕೈ ಆಡಿಸಿ ಅದರಲ್ಲಿ ವೇದ ಉಪನಿಷತ್ತು ಆಗಮಗಳ , ಶಿವಲೀಲಾಮೃತ, ಮನುಸ್ಮೃತಿ, ಭಾಗವಾದ ಗೀತಾ ಮತ್ತಿತರ ಪ್ರಾಚೀನ ಗ್ರಂಥಗಳ ಸಂಸ್ಕೃತ ಸ್ಲೋಕಗಳನ್ನು ಸೇರಿಸಿ, ಬಸವಾದಿ ಶರಣರು ಹೇಳಿದ್ದು ನಮ್ಮ ಗ್ರಂಥಗಳಲ್ಲಿ ಇದ್ದವು ಎಂದು ಸಾಬೀತು ಪಡಿಸಲು ಪ್ರಯತ್ನ ಮಾಡಿದ್ದರು. ಕೆಲವು ವಚನಗಳ ಶಬ್ದಗಳ ಅನರ್ಥ ಮಾಡಿದರು. ಹೀಗೆ ಸನಾತನಿ ವೈದಿಕ ಪುರೋಹಿತಶಾಹಿಗಳು ವಚನಗಳನ್ನು ಕೆಡಿಸುವ ಪ್ರಯತ್ನ ನಿರಂತರ ಮಾಡಿದರು.*
ಇವಾಗ ಕೂಡ "ವಚನ ದರ್ಶನ" ಎನ್ನುವ ಪುಸ್ತಕ ಬರೆದು, ಅದರಲ್ಲಿ ವಚನಗಳನ್ನು ಕೊಂಡಾಡುತ್ತಾ, ಈ ವಚನಗಳ ಸ್ಲೋಕಗಳು ವೇದಗಳಲ್ಲಿ, ಉಪನಿಷತದಲ್ಲಿ, ಆಗಮಗಳಲ್ಲಿ, ಭಾಗವಾದ ಗೀತೆಯಲ್ಲಿ, ಮನುಸ್ಮೃತಿಯಲ್ಲಿ ಮೊದಲೇ ಇದ್ದವು, ಬಸವಾದಿ ಶರಣರು ಈ ಪರಂಪರೆ ಮುಂದುವರೆಸಿಕೊಂಡು ಕನ್ನಡದಲ್ಲಿ ಅನುವಾದಿಸಿ ವಚನಗಳ ಮುಖಾಂತರ ಸನಾತನ ಧರ್ಮ ಪ್ರಚಾರ ಮಾಡಿದರು, ಭಾರತೀಯ ಸಂಸ್ಕೃತಿಯನ್ನು ಉಳಿಸಿದರು ಎಂದು ಹೇಳಿ ಒಂದು ರೀತಿ ಬಸವಾದಿ ಶರಣರ ಕಲ್ಯಾಣ ಕ್ರಾಂತಿ, ಸಮಾಜೋ ಧಾರ್ಮಿಕ ಹೋರಾಟಕ್ಕೆ ತುಚಿ ತರುತ್ತಿದ್ದಾರೆ. ಪುಸ್ತಕದಲ್ಲಿ ಕಡಿಮೆ ಬರೆದರು, ಅದನ್ನು ಹಲವಾರು ಸಲ ಅದೇ ಪುಸ್ತಕವನ್ನು ರಾಜ್ಯದಂತೆ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯು ಬಿಡುಗಡೆ ಗೊಳಿಸಿ ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವು ಆರೆಸಸ್ ಮುಖಂಡರು ಭಾಷಣದಲ್ಲಿ ಪುಸ್ತಕದ ಅವಲೋಕನ ಬಿಟ್ಟು ಸೂಕ್ಷ್ಮವಾಗಿ ಬಸವಾದಿ ಶರಣರ ಅವಮಾನ ರೀತಿ ಮಾತಾಡುತ್ತಿದ್ದಾರೆ. ಕಲ್ಯಾಣ ಕ್ರಾಂತಿ ಆಗಿಲ್ಲ, ಬಸವಾದಿ ಶರಣರು ಸಾಮಾಜಿಕ ಹೋರಾಟ ಮಾಡೇ ಇಲ್ಲ, ಬಸವಾದಿ ಶರಣರು ಸನಾತನ ವೈದಿಕ ಧರ್ಮವನ್ನು ಹಾಗು ದೇಶದ ಪರಂಪರೆಯನ್ನು ಮಾತ್ರ ಪ್ರಚಾರ ಮಾಡಿದ್ದಾರೆ. ತಮ್ಮನ್ನು ತಾವೇ ಮೇಲ್ದರ್ಜೆಗೆ ಏರಿಸಿ ತಮ್ಮನ್ನು ತಾವೇ ದೇವರು ಆಗುವ ಮಾರ್ಗ ಕೊಟ್ಟಿದ್ದಾರೆ ವಿನಹ ಹೊಸದು ಏನು ಹೇಳಿಲ್ಲ, ಹೊಸ ಧರ್ಮ ಸ್ಥಾಪನೆ ಕೂಡ ಮಾಡಿಲ್ಲ ಎಂದು ಭಾಷಣ ಮಾಡಿ, ವಿಡಿಯೋ ತಮ್ಮ ಆರೆಸಸ್ ಮುಖವಾಣಿ ಸಾಮಾಜಿಕ ಜಾಲ ತಾಣಗಳಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
ಬಸವಾದಿ ಶರಣರ ತತ್ವ ಸಿದ್ದಾಂತಗಳನ್ನು ಆಧುನಿಕವಾಗಿ ಡಿಜಿಟಲ್ ವೆಬ್ಸೈಟ್ ಸಾಮಾಜಿಕ ಜಾಲ ತಾಣಗಳ ಮುಖಾಂತರ ಜನರಿಗೆ ತಪ್ಪು ತಿಳುವಳಿಕೆ ಮೂಡಿಸುವ ಭರಪೂರ ಪ್ರಯತ್ನ ಮಾಡುತ್ತಿದ್ದಾರೆ.
*2017ರಲಿ ನಡೆದ ಲಿಂಗಾಯತ ಧರ್ಮ ಮಾನ್ಯತೆ ಹೋರಾಟದಲ್ಲಿ ಕೂಡ ಆರೆಸಸ್ ಹಾಗೂ ಇತರ ಹಿಂದೂ ಪರ ಸಂಘಟನೆಗಳು ವಿರೋಧ ಮಾಡಿದ್ದವು. ಆರೆಸಸ್ ಮುಖಂಡರು ಲಿಂಗಾಯತರಿಗೆ ಶನಿ ಸಂತತಿ ಎಂದು ದೂರಿದ್ದರು, ಲಿಂಗಾಯತರಿಗೆ ಅಲ್ಪಸಂಖ್ಯಾತ ಮೀಸಲಾತಿ ಯಾವುದೇ ಕಾರಣಕ್ಕೂ ಕೊಡಿಸುವದಿಲ್ಲ ಎಂದು ಹೇಳಿ, ತನ್ನ ಸಂಸ್ಥೆಯ ನೆರಳಡಿಯ ರಾಜಕೀಯ ಪಕ್ಷ ಬಿಜೆಪಿ ಆಳುವ ಪಕ್ಷದ ಮುಖಾಂತರ ರಾಜ್ಯ ಸರ್ಕಾರದ ಶಿಫಾರಸು ತಿರಸ್ಕಾರ ಮಾಡಿಸಿದ್ದರು.*
ಗುರು ಬಸವಣ್ಣನವರು
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ
ಕುಲಜನೆಂಬುದಕ್ಕೆ ಆವುದು ದೃಷ್ಟ
ಸಪ್ತಧಾತುಸಮಂ ಪಿಂಡಂ ಸಮಯೋನಿಸಮದ್ಭವಂ
ಆತ್ಮಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ ಎಂದುದಾಗಿ,
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
*ಮೇಲ್ಕಂಡ ವಚನದಲ್ಲಿ ಸೇರಿಸಿದ ಸಂಸ್ಕೃತ ವಾಕ್ಯ ಹೊರತುಪಡಿಸಿದ ವಚನ, ಅರ್ಥದಲ್ಲಿ ಎಷ್ಟು ವ್ಯತ್ಯಾಸ ಇಲ್ಲ, ನಂತರ ಮೋಸದಿಂದ ಸೇರಿಸಿದ ಸಂಸ್ಕೃತ ವಾಕ್ಯ ಎಂದು ಸ್ಪಷ್ಟವಾಗಿದೆ.*
ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲ-ಬಿಂದುವಿನ ವ್ಯವಹಾರ ಒಂದೇ,
ಆಶೆಯಾಮಿಷರೋಷಹರುಷ ವಿಷಯಾದಿಗಳೆಲ್ಲಾ ಒಂದೇ.
ಏನನೋದಿ, ಏನ ಕೇಳಿ, ಏನು ಫಲ
ಕುಲಜನೆಂಬುದಕ್ಕೆ ಆವುದು ದೃಷ್ಟ.
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ
ಇದು ಕಾರಣ ಕೂಡಲಸಂಗಮದೇವಾ,
ಲಿಂಗಸ್ಥಲವನರಿದವನೆ ಕುಲಜನು.
ಅಕ್ಕಮಹಾದೇವಿ
ಹಾಲಹಿಡಿದು ಬೆಣ್ಣೆಯನರಸಲುಂಟೆ ?
ಲಿಂಗವಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ?
ಲಿಂಗದ ಪಾದತೀರ್ಥ ಪ್ರಸಾದವ ಕೊಂಡು
ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ
ತಡೆಯದೆ ಹುಟ್ಟಿಸುವನು ಶ್ವಾನನ ಗರ್ಭದಲ್ಲಿ.
ಅದೆಂತೆಂದಡೆ ಶಿವಧರ್ಮಪುರಾಣದಲ್ಲಿ
'ಇಷ್ಟಲಿಂಗಮವಿಶ್ವಸ್ಯ ತೀರ್ಥಲಿಂಗಸ್ಯ ಪೂಜಕಃ ೀ
ಶ್ವಾನಯೋನಿಶತಂ ಗತ್ವಾ ಚಾಂಡಾಲಗೃಹಮಾಚರೇತ್' ||ú
ಎಂದುದಾಗಿ,
ಇದನರಿದು ಗುರು ಕೊಟ್ಟ ಲಿಂಗದಲ್ಲಿಯೆ ಎಲ್ಲಾ ತೀರ್ಥಂಗಳೂ
ಎಲ್ಲಾ ಕ್ಷೇತ್ರಂಗಳೂ ಇದ್ದಾವೆಂದು ಭಾವಿಸಿ ಮುಕ್ತರಪ್ಪುದಯ್ಯಾ.
ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ,
ತೀರ್ಥಲಿಂಗವ ಹಿರಿದುಮಾಡಿ ಹೋದಾತಂಗೆ ಅಘೋರ ನರಕ ತಪ್ಪದು ಕಾಣಾ
ಚೆನ್ನಮಲ್ಲಿಕಾರ್ಜುನಾ.
*ಮೇಲ್ಕಂಡ ವಚನದಲ್ಲಿ ಸೇರಿಸಿದ ಸಂಸ್ಕೃತ ವಾಕ್ಯ ಹೊರತುಪಡಿಸಿದ ವಚನ, ಅರ್ಥದಲ್ಲಿ ಎಷ್ಟು ವ್ಯತ್ಯಾಸ ಇಲ್ಲ, ನಂತರ ಮೋಸದಿಂದ ಸೇರಿಸಿದ ಸಂಸ್ಕೃತ ವಾಕ್ಯ ಎಂದು ಸ್ಪಷ್ಟವಾಗಿದೆ.*
ಹಾಲಹಿಡಿದು ಬೆಣ್ಣೆಯನರಸಲುಂಟೆ ?
ಲಿಂಗವಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ ?
ಲಿಂಗದ ಪಾದತೀರ್ಥ ಪ್ರಸಾದವ ಕೊಂಡು
ಅನ್ಯಬೋಧೆ ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದೆನಾದಡೆ
ತಡೆಯದೆ ಹುಟ್ಟಿಸುವನು ಶ್ವಾನನ ಗರ್ಭದಲ್ಲಿ.
ಇದನರಿದು ಗುರು ಕೊಟ್ಟ ಲಿಂಗದಲ್ಲಿಯೆ ಎಲ್ಲಾ ತೀರ್ಥಂಗಳೂ
ಎಲ್ಲಾ ಕ್ಷೇತ್ರಂಗಳೂ ಇದ್ದಾವೆಂದು ಭಾವಿಸಿ ಮುಕ್ತರಪ್ಪುದಯ್ಯಾ.
ಇಂತಲ್ಲದೆ ಗುರು ಕೊಟ್ಟ ಲಿಂಗವ ಕಿರಿದುಮಾಡಿ,
ತೀರ್ಥಲಿಂಗವ ಹಿರಿದುಮಾಡಿ ಹೋದಾತಂಗೆ ಅಘೋರ ನರಕ ತಪ್ಪದು ಕಾಣಾ
ಚೆನ್ನಮಲ್ಲಿಕಾರ್ಜುನಾ.
ಗುರು ಬಸವಣ್ಣನವರು
ಶ್ರೀಗುರುಕರುಣಿಸಿ ಹಸ್ತಮಸ್ತಕಸಂಯೋಗದಿಂದ
ಪ್ರಾಣಲಿಂಗವನು ಕರತಳಾಮಳಕವಾಗಿ ಕರಸ್ಥಲಕ್ಕೆ ತಂದುಕೊಟ್ಟನಾಗಿ
ಒಳಗೆನ್ನದೆ ಹೊರಗೆನ್ನದೆ, ಆ ಲಿಂಗದಲ್ಲಿ ನಚ್ಚಿ ಮಚ್ಚಿ ಹರುಷದೊಳೋಲಾಡಿದೆ
ಅದೆಂತೆಂದಡೆ,
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ನಾದಬಿಂದುಕಲಾತೀತಂ ಗುರುಣಾ ಲಿಂಗಮುದ್ಭವಂ
ಎಂದುದಾಗಿ
ಆ ಲಿಂಗವ ಪಡೆದು ಆನಂದಿಸುವೆ, ಕೂಡಲಸಂಗಮದೇವಾ
*ಮೇಲ್ಕಂಡ ವಚನದಲ್ಲಿ ಸೇರಿಸಿದ ಸಂಸ್ಕೃತ ವಾಕ್ಯ ಹೊರತುಪಡಿಸಿದ ವಚನ, ಅರ್ಥದಲ್ಲಿ ಎಷ್ಟು ವ್ಯತ್ಯಾಸ ಇಲ್ಲ, ನಂತರ ಮೋಸದಿಂದ ಸೇರಿಸಿದ ಸಂಸ್ಕೃತ ವಾಕ್ಯ ಎಂದು ಸ್ಪಷ್ಟವಾಗಿದೆ.*
ಶ್ರೀಗುರುಕರುಣಿಸಿ ಹಸ್ತಮಸ್ತಕಸಂಯೋಗದಿಂದ
ಪ್ರಾಣಲಿಂಗವನು ಕರತಳಾಮಳಕವಾಗಿ ಕರಸ್ಥಲಕ್ಕೆ ತಂದುಕೊಟ್ಟನಾಗಿ
ಒಳಗೆನ್ನದೆ ಹೊರಗೆನ್ನದೆ, ಆ ಲಿಂಗದಲ್ಲಿ ನಚ್ಚಿ ಮಚ್ಚಿ ಹರುಷದೊಳೋಲಾಡಿದೆ
ಆ ಲಿಂಗವ ಪಡೆದು ಆನಂದಿಸುವೆ, ಕೂಡಲಸಂಗಮದೇವಾ.
ಚನ್ನಬಸವಣ್ಣ
ನಾನಾ ಜನ್ಮಾಂತರದಿಂದ ಮಾನವರಾಗಿ ಪುಟ್ಟಿ,
ಜಪದಿಂದ ಧ್ಯಾನದಿಂದ ತಪದಿಂದ ಸಮಾಧಿಯಿಂದ
ದೇವಾ, ನಿಮ್ಮನರಿದೆನೆಂದು ಬಳಲುತ್ತಿದ್ದರು.
``ಜನ್ಮಾಂತರ ಸಹಸ್ರೇಷು ತಪೋಧ್ಯಾನ ಸಮಾಧಿ ಭಿಃ
ನರಾಣಾಂ ಕ್ಷೀಣಪಾಪಾನಾಂ ಶಿವಭಕ್ತಿಃ ಪ್ರಜಾಯತೇ '
ಇಂತೆಂದುದಾಗಿ ಪಾಪಂಗಳು ಕೆಟ್ಟಲ್ಲದೆ,
ನಿಮ್ಮ ಭಕ್ತರಾಗರಯ್ಯಾ
ಕೂಡಲಚೆನ್ನಸಂಗಮದೇವಾ
*ಮೇಲ್ಕಂಡ ವಚನದಲ್ಲಿ ಸೇರಿಸಿದ ಸಂಸ್ಕೃತ ವಾಕ್ಯ ಹೊರತುಪಡಿಸಿದ ವಚನ, ಅರ್ಥದಲ್ಲಿ ಎಷ್ಟು ವ್ಯತ್ಯಾಸ ಇಲ್ಲ, ನಂತರ ಮೋಸದಿಂದ ಸೇರಿಸಿದ ಸಂಸ್ಕೃತ ವಾಕ್ಯ ಎಂದು ಸ್ಪಷ್ಟವಾಗಿದೆ.*
ನಾನಾ ಜನ್ಮಾಂತರದಿಂದ ಮಾನವರಾಗಿ ಪುಟ್ಟಿ,
ಜಪದಿಂದ ಧ್ಯಾನದಿಂದ ತಪದಿಂದ ಸಮಾಧಿಯಿಂದ
ದೇವಾ, ನಿಮ್ಮನರಿದೆನೆಂದು ಬಳಲುತ್ತಿದ್ದರು.
ಇಂತೆಂದುದಾಗಿ ಪಾಪಂಗಳು ಕೆಟ್ಟಲ್ಲದೆ,
ನಿಮ್ಮ ಭಕ್ತರಾಗರಯ್ಯಾ
ಕೂಡಲಚೆನ್ನಸಂಗಮದೇವಾ.
ಗುರು ಬಸವಣ್ಣನವರು
ಇಹದ ಪೂರ್ವವ ಜರೆದು, ಪರದ ಪೂರ್ವವನರಿದು,
ಗುರುಕಾರುಣ್ಯವ ಪಡೆದು, ಅಂತರ್ಬಾಹ್ಯದ ಭವಿಯ ತೊರೆದು
ಭಕ್ತಿಪರಾಯಣರಾಗಿ ನಿಂದುದೆ ಲಿಂಗದ ನಿಜದಂಗ.
ಅದೆಂತೆಂದಡೆ;
ತ್ರಿಗುಣಂ ಪಂಚಕಂ ಚೈವ ಚತ್ವಾರಿ ಷಡ್ವಿಧೈವ ಚ
ಸಘಾತಂ ವ್ಯಸನಂ ಚೈವ ಇತ್ಯಾದಿ ಭವಿಮಿಶ್ರಿತಂ
ಎಂದುದಾಗಿ, ಅಂತರಂಗದ ಭವಿಯನು ಹಿಂಗಿ,
ಅನೃತಮಸ್ಥಿರಂ ವಾಕ್ಯಂ ವಂಚನಂ ಪಙ್ತಭೇದನಂ
ಔದಾಸೀನಂ ನಿರ್ದಯತ್ವಂ ಷಡ್ವಿಧಂ ಭವಿಮಿಶ್ರಿತಂ
ಎಂಬೀ ಮಾನವರಂಗದ ಭವಿಯನು ಕಳೆದು,
ಅರ್ಚನಾದಿ ಕ್ರಿಯಾಕಾಲೇ ಪ್ರಚ್ಛನ್ನಂ ಪಟಮುತ್ತಮಂ
ಪಾಪೀ ಕೋಪೀ ಪರಿಭ್ರಷ್ಟೋನಾಸ್ತಿಕೋ ವ್ರತದೂಷಕಃ
ದುರ್ಜನಶ್ಚ ದುರಾಚಾರೀ ದುರ್ಮುಖಶ್ಚಾಪ್ಯದೀಕ್ಷಿತಃ
ಪ್ರಮಾದಾದ್ದೃಶ್ಯತೇ ಯೇನ ತಸ್ಯ ಪೂಜಾ ತು ನಿಷ್ಫಲಂ
ಎಂಬೀ ಬಹಿರಂಗದ ಭವಿಯನ್ನು ತೊಲಗಿಸಿ,
ಇಂತೀ ತ್ರಿವಿಧಭವಿಯನು ದೂರಮಾಡಿ,
ಶಿವಭಕ್ತಿಯೆ ಅಂಗವಾದ ಲಿಂಗೈಕ್ಯ ಲಿಂಗಪೂಜಕರಿಗೆ
ಪೂರ್ವವರ್ಣಾಶ್ರಮಾದಿ ಸೂತಕವಿಲ್ಲ, ಕೂಡಲಸಂಗಯ್ಯಾ
*ಮೇಲ್ಕಂಡ ವಚನದಲ್ಲಿ ಸೇರಿಸಿದ ಸಂಸ್ಕೃತ ವಾಕ್ಯ ಹೊರತುಪಡಿಸಿದ ವಚನ, ಅರ್ಥದಲ್ಲಿ ಎಷ್ಟು ವ್ಯತ್ಯಾಸ ಇಲ್ಲ, ನಂತರ ಮೋಸದಿಂದ ಸೇರಿಸಿದ ಸಂಸ್ಕೃತ ವಾಕ್ಯ ಎಂದು ಸ್ಪಷ್ಟವಾಗಿದೆ.*
ಗುರು ಬಸವಣ್ಣನವರು
ಇಹದ ಪೂರ್ವವ ಜರೆದು, ಪರದ ಪೂರ್ವವನರಿದು,
ಗುರುಕಾರುಣ್ಯವ ಪಡೆದು, ಅಂತರ್ಬಾಹ್ಯದ ಭವಿಯ ತೊರೆದು
ಭಕ್ತಿಪರಾಯಣರಾಗಿ ನಿಂದುದೆ ಲಿಂಗದ ನಿಜದಂಗ.
ಅಂತರಂಗದ ಭವಿಯನು ಹಿಂಗಿ,
ಮಾನವರಂಗದ ಭವಿಯನು ಕಳೆದು,
ಬಹಿರಂಗದ ಭವಿಯನ್ನು ತೊಲಗಿಸಿ,
ಇಂತೀ ತ್ರಿವಿಧಭವಿಯನು ದೂರಮಾಡಿ,
ಶಿವಭಕ್ತಿಯೆ ಅಂಗವಾದ ಲಿಂಗೈಕ್ಯ ಲಿಂಗಪೂಜಕರಿಗೆ
ಪೂರ್ವವರ್ಣಾಶ್ರಮಾದಿ ಸೂತಕವಿಲ್ಲ, ಕೂಡಲಸಂಗಯ್ಯಾ
*ವಿನಂತಿ: 🙏ಮೇಲ್ಕಂಡ ವಚನದಲ್ಲಿ ಸೇರಿಸಿದ ಸಂಸ್ಕೃತ ಪದಗಳು ಸಹಿತ ಮತ್ತು ಸಂಸ್ಕೃತ ಪದಗಳ ರಹಿತ ವಚನಗಳು ಓದಿ ತಿಳಿದುಕೊಂಡು, ಅದರಲ್ಲಿ ಆಗುವ ಬದಲಾವಣೆ ಬಗ್ಗೆ ತಿಳಿಸಿ, ತಮ್ಮ ಅನುಭವ ಹೇಳಿ.*
*ಬನ್ನಿ ಶರಣರೇ, ಬಸವಾದಿ ಶರಣರ ವಚನ ಸಾಹಿತ್ಯ ಉಳಿಸಲು ಹೋರಾಡೋಣ, ವಚನಗಳ ಪ್ರಚಾರ ದೇಶ ವಿದೇಶದಲ್ಲೂ ಮಾಡೋಣ,ವಿಶ್ವಕ್ಕೆ ಬಸವಾದಿ ಶರಣರ ತತ್ವ ಸಿದ್ದಾಂತ ಅವಶ್ಯಕತೆ ಇದೆ, ವಿಶ್ವದಲ್ಲಿ ಶಾಂತಿ ನೆಲೆಸಿ ಅಭಿವೃದ್ಧಿ ಹೊಂದಲು ಬಸವ ತತ್ವ ಸಿದ್ದಾಂತ ಸಹಕಾರಿ ಆಗುತ್ತದೆ.*
*ಜಯ ಬಸವ, ಜಯ ಭಾರತ*🌹🙏
ಶ್ರೀಕಾಂತ ಸ್ವಾಮಿ ಬೀದರ, ಕರ್ನಾಟಕ ರಾಜ್ಯ ಸಂಚಾಲಕ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ.
.png)

ಶರಣರೇ, ಹೀಗೆ ಸಂಸ್ಕೃತ ಶ್ಲೋಕಗಳು ' '
ReplyDelete' ಸೇರಿಸಿದ್ದಾರೆ ' ಅನ್ನಲು ನಮ್ಮ ಹತ್ತಿರ ಯಾವ ಆಧಾರಗಳೂ ಇವೆ? ಇದ್ದರೆ ದಯವಿಟ್ಟು ಹಂಚಿಕೊಳ್ಳಿ, ನಮಗೂ ಸ್ವಲ್ಪ ಅರ್ಥವಾಗಲಿ. ಮತ್ತೂಂದು, ಇದು ಒಂದು ಹಿಂದಿನ ವಚನ ವಿರೋಧ ಮಾಡುವವರ ಷಡ್ಯಂತ್ರ ವೆ ಅಥವಾ ಕಮ್ಯುನಿಷ್ಟ ಸಿದ್ಧಾಂತ ದ ಕಡೆ ಒಲವಿರುವವರ ಒಂದು ವ್ಯವಸ್ಥಿತ ಕಥನವೇ?