ಬಸವಧರ್ಮ ಪೀಠಕ್ಕೆ ಮುಜುಗರ ತರುವಂತಹ ಘಟನೆ

 ಬಸವಧರ್ಮ ಪೀಠಕ್ಕೆ ಮುಜುಗರ ತರುವಂತಹ ಘಟನೆ

ಬೀದರನಲ್ಲಿ "ಬಸವೇಶ್ವರ ದರ್ಶನ ಮಹಾನಾಟ್ಯ" ನಾಟಕದ ಸಮಾಲೋಚನೆ ಸಭೆ ಕರೆಯಲಾಗಿತ್ತು.   ವೇದಿಕೆ ಮೇಲೆ ಮಾತೆ ಗಂಗಾದೇವಿಯವರು, ಭಾಲ್ಕಿ ಶ್ರೀ ಗಳು, ಬೇಳ್ದಾಲೆ ಶರಣರು, ಮಾತೆ ಸತ್ಯಾದೇವೀ ಯವರು ಹಾಗು ಇತರರು ಇದ್ದರು. ಕಾರ್ಯಕ್ರಮದ ಆಯೋಜಕರು ಎಲ್ಲಾ ಪೂಜ್ಯರಿಗೆ ಆಮಂತ್ರಣವನ್ನು ನೀಡಿದ್ದರು.

ಯಾವಾಗ ಚನ್ನಬಸವಾನಂದ ಸ್ವಾಮೀಜಿ ಅವರು ಸ್ವಲ್ಪ ತಡವಾಗಿ ಬಂದು ಸಭೆಗೆ ಆಗಮಿಸಿ ವೇದಿಕೆ ಮೇಲೆ ಬಂದು ಕುರ್ಚಿ ಮೇಲೆ ಕೂತ ತಕ್ಷಣ ಗಂಗಾ ಮಾತಾಜಿ ಅವರು ತನ್ನ ಸ್ಥಾನದಿಂದ ಎದ್ದು ಸರಸರನೆ ಹೊರಗೆ ಹೋದರು. 

ನಂತರ ಕೆಲವರು ಅವರ ಹಿಂದೆ ಹೋಗಿ ವಿನಂತಿಸಿದಾಗ  ಸಭಾ ಮಂಟಪದ ಹಿಂದಿನ ಕೊನೆಯ ಸಾಲಿನಲ್ಲಿ ಜನರ ಜೊತೆ ಕೆಳಗಡೆಯೆ ಕುಳಿತರು. "ದಯವಿಟ್ಟು ವೇದಿಕೆ ಮೇಲೆ ಬನ್ನಿ" ಎಂದು ಕಾರ್ಯಕ್ರಮದ ಆಯೋಜಕರು ಗಂಗಾಮಾತಾಜಿ ಅವರಿಗೆ ಬಹಳಷ್ಟು ವಿನಂತಿ ಮಾಡಿಕೊಂಡರು. ಆದರೂ ಕೂಡ ಅವರು ಮೇಲೆ ಬರಲಿಲ್ಲ.

ಇದನ್ನು ನೋಡಿ, ಸ್ವಲ್ಪ ಸಮಯದ ನಂತರ  ಚನ್ನಬಸವಾನಂದ ಸ್ವಾಮೀಜಿ ಅವರು ದೊಡ್ಡ ಮನಸ್ಸು ಮಾಡಿ ತಾವೇ ವೇದಿಕೆ ಯಿಂದ ಇಳಿದು ಸಭಾ ಮಂಟಪದ ಹೊರಗಡೆ ಹೋಗಿ ಕುಳಿತರು. ಆವಾಗ ಕೆಳಗಡೆ ಕೂತಿದ್ದ ಗಂಗಾ ಮಾತಾಜಿ ಅವರು ಮತ್ತೆ ವೇದಿಕೆ ಮೇಲೆ ಬಂದು ತಮ್ಮ ಸ್ಥಾನ ದಲ್ಲಿ ಕುಳಿತರು. 

ಇದನ್ನೆಲ್ಲ ನೋಡಿ ಸಭೆಯಲ್ಲಿ ಭಾಗವಹಿಸಿದ ಜನರೆಲ್ಲಾ  ಅಚ್ಚರಿ ಪಡಬೇಕಾಯಿತು. ಒಂದು ಪೀಠಾಧ್ಯಕ್ಷ ಸ್ಥಾನದಲ್ಲಿ ಕುಳಿತು ಮಹಾಜಗದ್ಗುರು ಅನಿಸಿಕೊಂಡು "ಇವನಮ್ಮವ ಇವನಮ್ಮವ" ಎಂದು ಪ್ರವಚನ ಮಾಡುವ ಕಾವಿಧಾರಿಗಳ ಮನಸ್ಸಿನಲ್ಲಿಯೆ ಇಷ್ಟೊಂದು ದ್ವೇಷ ಇರುವುದು ಎಷ್ಟು ಸರಿ? ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು...








Comments

  1. ಮೊದಲು ಅವರು ಹೀಗಿರಲಿಲ್ಲ. ಪಾಪ! ಕಳೆದ ನಾಲ್ಕು ವರ್ಷಗಳಿಂದಲೇ ಈ ರೀತಿ ಆಡುತಿದ್ದಾರೆ.
    ಯಾಕೆ ಅಂತ ನಮಗೂ ಅರ್ಥ ಆಗುತ್ತಿಲ್ಲ.
    ಒಳಗೊಳಗೆ ಚಿಂತಿ ಮಾಡಿ ಕೊರಗುತ್ತಾರೆ. ನಿದ್ದೆ ಮಾಡಲ್ಲ. ಯಾರಿಗೋ ನೋಡಿ ಭಯ ಪಡುತ್ತಾರೆ. ಸ್ವಾಮೀಜಿ ಜೊತೆ
    ವೇದಿಕೆ ಹಂಚಿಕೊಳ್ಳಲು ವಕೀಲರು ಬೇಡ ಅಂದಿದ್ದಾರೆ ಅಂತಾರೆ.
    ಕೆಲವೊಮ್ಮೆ ಒಳಗಡೆ ಸ್ವಾಮೀಜಿ ಇದ್ದರೆ ಹೊರಗಡೆಯಿಂದಲೇ ಹೋಗುತ್ತಾರೆ.

    ತಾಯಿ ಸ್ಥಾನದಲ್ಲಿ ಇರುವವರು ಈ ರೀತಿ ಮಾನಸಿಕ ಸ್ಥಿರತೆ ಕಳೆದುಕೊಳ್ಳಬಾರದು.
    ನಾನು ಚಿಕ್ಕವನಿದ್ದಾಗ ಗಂಗಾಮಾತಾಜಿ ನಮ್ಮೂರು ಖಟಕ ಚಿಂಚೋಳಿಗೆ ಬಂದು
    "ನಿಮ್ಮ ಮಗ ದೇಶ ಆಳುತ್ತಾನೆ. ಸಾವಿರಾರು ತಾಯಂದಿರ ಕಣ್ಣೀರು ಒರೆಸುತ್ತಾನೆ. ಇವನನ್ನು ನಾವೇ ಕರೆದುಕೊಂಡು ಹೋಗುತ್ತೇವೆ" ಎಂದು ಸ್ವಾಮೀಜಿ ಕುರಿತು ನಗುನಗುತ್ತ ಹೇಳುತಿದ್ದರು. ಕರೆದುಕೊಂಡೂ ಹೋದರು.
    ಈಗ ನೋಡಿದರೆ ಈ ರೀತಿ ಚಿತ್ರವಿಚಿತ್ರವಾಗಿ ಆಡುತ್ತಿದ್ದಾರೆ.

    ಕಾಲಾಯ ತಸ್ಮೈ ನಮಃ

    - ಮಹಾರುದ್ರ

    ReplyDelete

Post a Comment

Popular posts from this blog

ಅರುಹಿನ ಮರಹು ಅಹಂಕಾರದ ಕುರುಹು

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು