Posts

🔯 ನೆನಹು 🔯 ಸಾಮೂಹಿಕ ಪ್ರಾರ್ಥನೆ

ಓಂ ಶ್ರೀ ಗುರು ಬಸವಲಿಂಗಾಯ ನಮಃ.       🔯🏵️*೮೬೬೬೬೬*🏵️🔯            🔯 ನೆನಹು 🔯                                                                    ಸಾಮೂಹಿಕ ಪ್ರಾರ್ಥನೆ  ಪ್ರತಿ ದಿನ ಸಂಜೆ ೦೭: ೦೦ಗಂಟೆಗೆ* 🔯🔯🔯🔯🔯🔯🔯🔯  *ಮಂತ್ರ ಪುರುಷ ಗುರು ಬಸವಣ್ಣನವರ ಪೂಜೆ* ಮುಕ್ತಿದಾಯಕ  ,ಶರಣರಕ್ಷಕ, ನಿತ್ಯ ಮೂರುತಿ ಬಸವನೆ, ಭಕ್ತಿಯಿಂದಲಿ ಚರಣ ಕಮಲಕೆ, ನಿತ್ಯವಂದಿಪೆ ತಂದೆಯೆ.              ॥ಪ॥ ಅರಿವು ಇಲ್ಲದ ಮನುಜ ಜನ್ಮವು, ಶಾಪವೆನ್ನುತ ನೊಂದೆನು, ಮರೆವ ಹರಿಯುವ, ಗುರುವೆ  ಎನುತಲಿ ನಿಮ್ಮ ಚರಣವ ಪಿಡಿದೆನು. ನಿಮ್ಮ ಕರುಣೆಯು, ಎನ್ನ ಬಾಳಿನ ರಕ್ಷೆ ಎನುತಲಿ ನಂಬಿಹೆ. ಬನ್ನ ತೊಡೆಯುವ ಬೆಳಗ ಬೀರುವ ಶಕ್ತಿ ಎನ್ನುತ ಕಾದಿಹೆ.     ॥೧॥ ಮೋಹರಹಿತನೆ ಜ್ಞಾನಭರಿತನೇ, ಪರಮಶಾಂತಿಯ ಧಾಮವೆ, ಕಾವುದೆಮ್ಮನು ಕೈಯಬಿಡದೆ, ಹರನ ಕರುಣೆಯ ಕಂದನೆ, ಕಾಮಕ್ರೋಧದ ಕೊಳೆಯ ಕಳೆದು, ಭಕ್ತಿ ಜಲದಲಿ ಮೀಯಿಸು .ಜ್ಞಾನ ದುಡುಗೆಯ ಮನಕೆ ಉಡಿಸಿ ಮೃಡನ ಪಾದಕ್ಕೆ ಏರಿಸು.                    ॥೨॥ ನಿಮ್ಮ ಚಿನ್ಮಯ ಜ್ಞಾನವೆನಗೆ, ಮಾರ್ಗದರ್ಶಕ ದೀಪ್ತಿಯು. ನಿಮ್ಮ ಮಮತೆಯ ಹೃದಯ ಮಂದಿರ, ನನಗೆ ಶಾಂತಿಯ ಹಂದರ. ನಿಮ್ಮ ಪಾವನ ಚರಣಯುಗ್ಮವು, ಭವವ ದಾಂಟಿಪ ದೋಣಿಯು. ಸನ್ನುತಾಂಗನೆ ನಿಮ್ಮ ನೆನಹಿದು, ಬಾಳಿಗಮೃತ ಸೋನೆಯು.             ॥ ೩॥ ನೀನು ಆಡಿಪ ಬೊಂಬೆನಾನು ಮಿಡಿಸೇ ನುಡಿಯುವ ವೀಣೆಯು. ನೀನು ಉಡಿಸಿ ಉಣಿಸಿ ಸಲಹಲು, ಎನ್ನ ಬಾಳೋಳ

ಜಾಗತಿಕ ಲಿಂಗಾಯತ ಮಹಾಸಭಾ" ಇದು ಲಿಂಗಾಯತ ಧರ್ಮಕ್ಕ್ ಮಾನ್ಯತೆ ಕೊಡಿಸಲು ಹುಟ್ಟಿದ ಸಂಸ್ಥೆ ಎಂದು ಹೇಳಲಾಗಿತ್ತು. ಇದರ ಮೂಲ ಉದ್ದೇಶದ ಕಡೆ ಗಮನ ಕೊಡಿ.

Image
  ಜಾಗತಿಕ ಲಿಂಗಾಯತ ಮಹಾಸಭಾ" ಇದು ಲಿಂಗಾಯತ ಧರ್ಮಕ್ಕ್ ಮಾನ್ಯತೆ ಕೊಡಿಸಲು ಹುಟ್ಟಿದ ಸಂಸ್ಥೆ ಎಂದು ಹೇಳಲಾಗಿತ್ತು. ಇದರ ಮೂಲ ಉದ್ದೇಶದ ಕಡೆ ಗಮನ ಕೊಡಿ. 👉 ಕಲಬುರ್ಗಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷರಾದ ಶರಣ ಪ್ರಭುಲಿಂಗ ಮಹಾಗಾಂವಕರ್ ಅವರೇ,....         ತಾವು ಪೂಜ್ಯ ಮಾತಾಜಿ ಸಂಸ್ಮರಣೆ ಕಾರ್ಯಕ್ರಮ ನಿಮಿತ್ಯ ಬರೆದ *ಪತ್ರ* ದಲ್ಲಿ ಈ ರೀತಿ ಬರೆದಿದ್ದೀರಿ. "ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಮಾಡಿದರೆ ಸೂಕ್ತ *ಕಾನೂನು ಕ್ರಮ* ತೆಗೆದುಕೊಳ್ಳಲಾಗುವುದು" ಎಂದು ಬರೆಯಲಾಗಿದೆ.       ತಾವು ಈ ಪತ್ರವನ್ನು ಬರೆದಿರುವ ದಾಟಿಯನ್ನು ನೋಡಿದರೆ ತಾವು ತಮ್ಮನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶರೆಂದು ಅಥವಾ ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿ ಎಂದು ತಿಳಿದುಕೊಂಡು ಬರೆದಿರುವ ಪತ್ರದ ಹಾಗೆ ಇದೆ.         ಮೊದಲು ಸುಪ್ರೀಂ ಕೋರ್ಟ್ ತೀರ್ಪಿನ *ದಾಖಲೆ* ಯನ್ನು (ಕಾಪಿ) ತೆಗೆದುಕೊಂಡು ಬನ್ನಿ.  ಅದನ್ನು ತೋರಿಸಿ ಹೇಳಿ. ನಿಮಗೆ ಚಾಲೆಂಜ್ ಮಾಡುತ್ತೇನೆ. ಸುಪ್ರೀಂ ಕೋರ್ಟ್ ಲಿಂಗದೇವ ವಚನಾಂಕಿತವನ್ನು ಬಳಸಬಾರದು ಎಂದು ಎಲ್ಲಿಯೂ ಹೇಳಿಲ್ಲ. ಸುಮ್ಮನೆ ತಮಗೆ ಬೇಕಾದ ಹಾಗೆ ಸುಪ್ರೀಂ ಕೋರ್ಟ್ ತೀರ್ಪನ್ನು ಚೇಂಜ್ ಮಾಡಿ *ಸುಳ್ಳು* ಹೇಳುವುದು ಸರಿಯಲ್ಲ.         ಪೂಜ್ಯ ಮಾತಾಜಿ ಅವರಿಗೆ ತಮ್ಮ ಜೀವಿತಾವಧಿಯಲ್ಲಿ ಇಂತಹ ನೂರಾರು *ಬೆದರಿಕೆ* ಗಳು ಬಂದಿದ್ದವು. "ನಿಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತ

ಚಪ್ಪಾಳೆ ಗಿಟ್ಟಿಸಿಕೊಳ್ಳವ ಭರದಲ್ಲಿ ಮೂಲ ಸಿದ್ಧಾಂತಕ್ಕೆ ಧಕ್ಕೆ ತಂದವರಿಗೊಂದು ಪತ್ರ

Image
ಚಪ್ಪಾಳೆ ಗಿಟ್ಟಿಸಿಕೊಳ್ಳವ ಭರದಲ್ಲಿ ಮೂಲ ಸಿದ್ಧಾಂತಕ್ಕೆ ಧಕ್ಕೆ ತಂದವರಿಗೊಂದು ಪತ್ರ   - ಜಾಗತಿಕ ಲಿಂಗಾಯತ ಮಾಹಾಸಭಾದ ಎಸ ಎಮ ಜಮಾದರ ಬೆಳಗಾವಿಯಲ್ಲಿ ೨೭-೦೧-೨೦೨೪ರಿಂದ  ಎರಡು ದಿನದಗಳ ಲಿಂಗಾಯತ ಮಹಿಳಾ ಅಧಿವೆಶನದಲ್ಲಿ ಭಾಷಣ ಮಾಡಿದ ಮೀನಾಕ್ಷಿ ಬಾಳೆಯವರಿಗೆ, ಬಹಳ ಮನನೊಂದು ಬಸವ ಅಭಿಮಾನಿಯೊಬ್ಬರು (ಸು ಮಲ್ಲಿಕಾರ್ಜುನಪ್ಪಾ, ಎಂ ಎ ಬಿ ಇಡ್) ಈ ಪತ್ರವನ್ನು ಬರೆದಿದ್ದಾರೆ. ಸು ಮಲ್ಲಿಕಾರ್ಜುನಪ್ಪಾ,  ಎಂ ಎ, ಬಿ ಇಡ್.

ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಮಲ್ಲಮ್ಮಾಜಿಯವರು.

Image
  ವಿಶ್ವದಲ್ಲಿ ಪ್ರಥಮ ಮಹಿಳಾ ಸೈನ್ಯ ಕಟ್ಟಿದ್ದು ಬೆಳವಡಿಯ ವೀರ ರಾಣಿ ಮಲ್ಲಮ್ಮಾಜಿಯವರು. ಬೆಳವಡಿ ಮಲ್ಲಮ್ಮ ಮತ್ತು ಶಿವಾಜಿ ನಡುವೆ ನಡೆದ ಯುದ್ಧದ ಐತಿಹಾಸಿಕ ದಾಖಲೆಗಳ ಪಟ್ಟಿ. 1. ಬೆಳವಡಿ ಸಂಸ್ಥಾನದ ಪಾರಂಪರಿಕ ತಾಣವಾದ ಬೃಹನ್ಮಠದ ಶಿವ ಬಸವ ಶಾಸ್ತ್ರಿಯವರು ಬರೆದ ತರಾತುರಿ ಪಂಚಮರ ಇತಿಹಾಸ ಪುಸ್ತಕದಲ್ಲಿ ಬೆಳವಡಿ ಸಂಸ್ಥಾನದ ಇತಿಹಾಸವು 1511ರಿಂದ ರಾಜ ಚಂದ್ರಶೇಖರ ರಾಜನೊಂದಿಗೆ ಪ್ರಾರಂಭವಾಗುತ್ತದೆ. ಈ ಪುಸ್ತಕದಲ್ಲಿ ಮರಾಠಿ ರಾಜ ಶಿವಾಜಿ ಮತ್ತು ಬೆಳವಡಿ ಮಲ್ಲಮ್ಮನವರ ನಡುವೆ ನಡೆದ ಯುದ್ಧ ದಾಖಲಾಗಿದೆ. ಇಶಪ್ರಭು ಯುದ್ಧಭೂಮಿಯಲ್ಲಿ ನಿಧನರಾದ ನಂತರ ಮಲ್ಲಮ್ಮ ಛತ್ರಪತಿ ಶಿವಾಜಿ ಮಹಾರಾಜರಣ ಸೋಲಿಸಿದಳು. ಈ ಯುದ್ಧದ ನೆನಪಿಗಾಗಿ ವೀರಗಲ್ಲುಗಳನ್ನು ಬೆಳವಡಿಯ ಸಂಸ್ಥಾನದಲ್ಲಿ ಮಲ್ಲಮ್ಮನ ಹೆಸರಲ್ಲಿ ಕಟ್ಟಿಸಲಾಯಿತು. ತರಾತುರಿ ಪಂಚಮರ ಇತಿಹಾಸ ಪುಸ್ತಕ 1929 ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು. 2. ಮಲ್ಲಮ್ಮನ ಗುರುಗಳಾಗಿದ್ದ ಶಂಕರ ಭಟ್ಟರು ಬರೆದ ಸಂಸ್ಕೃತ ಪುಸ್ತಕ ಶಿವವಂಶ ಸುಧರ್ನವದಲ್ಲಿ ಶಿವಾಜಿಯನ್ನು ಬೆಳವಡಿ ಮಲ್ಲಮ್ಮ ಸೋಲಿಸಿದರು ಎಂದು ದಾಖಲಾಗಿದೆ. ಶಿವಾಜಿಯ ಎರಡನೇ ಸೊಸೆಯಾಗಿದ್ದ ತಾರಾಬಾಯ್ ಅವರು ಈ ಪುಸ್ತಕಕ್ಕೆ ಪ್ರಥಮ ಬಹುಮಾನ ನೀಡಿದ್ದರು ಮತ್ತು ಈ ಪುಸ್ತಕದಲ್ಲಿ ಶಿವಾಜಿ ಮತ್ತು ಮಲ್ಲಮ್ಮರ ನಿಖರವಾದ ವಿಷಯವಿದೆ ಎಂದು ಹೇಳಿದ್ದಾರೆ. 3. . ಜಾದುನಾಥ್ ಸರ್ಕಾರ್ ಶಿವಾಜಿಯ ಜೀವನಚರಿತ್ರೆಯನ್ನು ಮರಾಠಿ ಭಾಷೆಯಲ್ಲಿ ಬರೆದಿದ್ದು ಈ ಪುಸ್ತಕ

ಓಂ ಶ್ರೀ ಗುರು ಬಸವಲಿಂಗಾಯ ನಮಃ

Image
 ಓಂ ಶ್ರೀ ಗುರು ಬಸವಲಿಂಗಾಯ ನಮಃ ವಚನ ಸಾಹಿತ್ಯದಲ್ಲಿ ಓಂ ಎಂಬ ಒಂದಕ್ಷರದ ಪದಕ್ಕೆ ಪ್ರಾಮುಖ್ಯತೆಯನ್ನು ನಿಡಲಾಗಿದೆ ಹಾಗು ಸಕರಾತ್ಮಕವಾಗಿ ಬಳಸಿಕೊಳ್ಳಲಾಗಿದೆ. ಕೆಲವರು ಲೆಖನದಲ್ಲಿ ಅಥವಾ ಆಮಂತ್ರಣ ಪತ್ರದಲ್ಲಿ ಬರಿ "ಶ್ರೀ ಗುರು ಬಸವಲಿಂಗಾಯ ನಮಃ" ವೆಂದು ಬಳಸುತ್ತಾರೆ, ಓಂ ಅನ್ನು ಬಿಟ್ಟು ಬಿಡುತ್ತಾರೆ, ದಯವಿಟ್ಟು ಕಮೆಂಟನಲ್ಲಿ ಕಾರಣ ತಿಳಿಸಿ ಅದು ವಯಕ್ತಿಕ ಅನಿಸಿಕೆ ಇರಬಾರದು ವಚನ ಸಾಹಿತ್ಯ‌ ಆಧಾರವಾಗಿರಬೆಕು. ಒಂದು ಪ್ರಗತಿಪರ ಚಿಂತಕರಿಂದ ಇದೆ ವಿಷಯದ ಬಗ್ಗೆ ಮತ ಕೈಗೊಂಡಾಗ , ಅವರ ಆಯ್ಕೆ ಯನ್ನು ಕೆಳಗಿನ ಚಿತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ** ‌🙏 **

ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ - ಇದು ಕ್ರಾಂತಿ ಶರಣ ಸರ್ವಜ್ಞ ತ್ರಿಪದಿ

Image
ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಕನ್ನಡ ಸಾಹಿತ್ಯಕ್ಕೆ ಹಿರಿಮೆ ಹೆಚ್ವಸುವಲ್ಲಿ ವಚನ ಸಾಹಿತ್ಯದ ಕೊಡುಗೆ ಬಹು ದೊಡ್ಡ ಪಾತ್ರವಹಿಸುತ್ತದೆ. ಶರಣ ಸರ್ವಜ್ಞ ವಚನ ತ್ರಿಪದಿಗಳು ಅಂಥಹ ಕೊಡುಗೆಯಲ್ಲಿ ಒಂದು.  ಜನರನ್ನು ಶರಣರಾನ್ನಾಗಿಸುವ ಅಥವಾ ಜನರನ್ನು ಬಡಿದೆಬ್ಬಿಸುವ ಅಥವಾ ಜನರನ್ನು ಯೋಚನೆಗೆ ಒಳಪಡಿಸುವಂತೆ ಮಡುವ ಶಕ್ತಿ ಸರ್ವಜ್ಞ ತ್ರಿಪದಿಗಳಿಗಿವೆ.  ಚಲನಚಿತ್ರಗಳ ಸಂಭಾಷಣೆ ಹಾಡು ಕೊಡಾ ವಚನ ಸಾಹಿತ್ಯದಿಂದ ಪ್ರಭಾವಿತವಾಗಿವೆ. ಉದಾಹರಣೆಗೆ ಈ ಚಿತ್ರದ ಹಾಡು ಪ್ರಭಾವಿತವಾಗಿರುವುದು ಕ್ರಾಂತಿ ಶರಣ ಸರ್ವಜ್ಞ ಈ ವಚನ ತ್ರಿಪದಿಯಿಂದ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ, ಕೊಟ್ಟದ್ದು ಕೆಟ್ಟಿತೆನಬೇಡ ಅದು ಮುಂದೆ ಕಟ್ಟಿಹುದು ಬುತ್ತಿ | ಸರ್ವಜ್ಞ.

ಇಷ್ಟಲಿಂಗ ಗುರು ಬಸವಣ್ಣನವರು ಆವಿಷ್ಕರಿಸಿದರು

 ೧. ‘ಲಿಂಗವೂ ಬಸವಣ್ಣನ ಉದರದಲ್ಲಿ ಹುಟ್ಟಿತ್ತು’ -ಚೆನ್ನಬಸವಣ್ಣ ೨. ‘ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು’ -ಮಡಿವಾಳ ಮಾಚಿದೇವರು ೩. ‘ಆದಿಯಲ್ಲಿ ನೀನೆ ಗುರುವಾದ ಕಾರಣ ನಿನ್ನಿಂದ ಹುಟ್ಟಿತ್ತು ಲಿಂಗ’ -ಅಲ್ಲಮಪ್ರಭುದೇವರು ೪. ‘ವೃಷಭರಾಜಂ ಪತಿಯನುಜ್ಞೆಯೊಡನೆ ಬಸವಣ್ಣನ ಹಸ್ತದೊಳು ಸಂಗಮೇಶ್ವರ ಲಿಂಗಮಂ ಭೋಂಕನೆ ಬಿಜಯಂಗೈಸಿ’ -ಬಸವರಾಜದೇವರ ರಗಳೆ, ಹರಿಹರ (ಹರಿಹರ ಬಸವಣ್ಣನವರನ್ನು ವೃಷಭನ ಅವತಾರ ಎಂದು ಚಿತ್ರಿಸಿರುವುದನ್ನು ಈ ಸಂದರ್ಭದಲ್ಲಿ ಗಮನಿಸಿ, ವೃಷಭನ ಬಾಯಿಂದ ಬಸವಣ್ಣನವರ ಕರಸ್ಥಲಕ್ಕೆ ಲಿಂಗ ಬಂದಿತು ಎಂಬುದರ ಅರ್ಥ ಸ್ಪಷ್ಟವಾಗುತ್ತದೆ.) ೫. ‘ಆ ತನಯನೊಳಗಿಹ ಶಿವಂ ಗುರ್ವಾಕಾರಮಂ ತಾಳ್ದಾತನಂಗದ ಮೇಲೆ ಲಿಂಗಸಂಗವಂ ಮಾಡಿ’ -ಬಸವ ಪುರಾಣ, ಭೀಮಕವಿ. (ಮಗುವಿನ ಒಳಗಿರುವ ಶಿವನೇ ಗುರುರೂಪ ಧರಿಸಿ ಬಸವಣ್ಣನವರಿಗೆ ಲಿಂಗವನ್ನು ನೀಡಿದನೆಂದು ಚಿತ್ರಿಸಿರುವ ಈ ಸಂಗತಿಯೂ ಕೂಡಾ ಬಸವಣ್ಣನವರಿಗೆ ಲಿಂಗದೀಕ್ಷೆ ನೀಡಿದ ಗುರುವಿಲ್ಲ. ಬಸವಣ್ಣ ತನಗೆ ತಾನೇ ಗುರು ಎಂದು ಅರಿವಿಗೆ ಬರುತ್ತದೆ.) ಮೇಲಿನ ಐದು ಉಲ್ಲೇಖಗಳನ್ನು ಗಮನಿಸಿದರೆ, ಬಸವಣ್ಣನವರು ಇಷ್ಟಲಿಂಗವನ್ನು ಆವಿಷ್ಕರಿಸಿದರು ಹಾಗು ಅವರಿಗೆ ದೀಕ್ಷಾಗುರು ಇಲ್ಲ ಎಂಬ ಸಂಗತಿ ನಮಗೆ ಅರಿವಿಗೆ ಬರುತ್ತದೆ.

ಲಿಂಗಾಯತ ಧರ್ಮದ ಗಣಾಧಿಪತಿ ಗುರು ಬಸವಣ್ಣನವರು ಮತ್ತು (ಆರು)ಷಟ್ ಗಣಾಧೀಶರು | Shatganadhisharu|

Image
  ಲಿಂಗಾಯತ ಧರ್ಮದ ಗಣಾಧಿಪತಿ ಗುರು ಬಸವಣ್ಣನವರು ಮತ್ತು (ಆರು)ಷಟ್ ಗಣಾಧೀಶರು ೧.ಮಹಾಮಾತೆ ಅಕ್ಕನಾಗಲಾಂಬಿಕೆಯವರು. ೨.ಜಗನ್ಮಾತೆ ಅಕ್ಕಮಹಾದೇವಿಯವರು. ೩.ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು. ೪.ಗಣಾಧಿಪತಿ ಗುರು ಬಸವಣ್ಣನವರು. ೫.ಶೂನ್ಯಪೀಥಾಧೀಶ ಅಲ್ಲಮಪ್ರಭುದೇವರು. ೬.ಲಿಂಗಾಂಗಯೋಗಿ ಸಿದ್ಧರಾಮೇಶ್ವರರು ೭.ವೀರಗಣಾಚಾರಿ ಮಡಿವಾಳ ಮಾಚಿದೇವರು.

ಹಿಂದು - ವೀರಶೈವ - ಲಿಂಗಾಯತ | Hindu Veerashaiva Lingayath

Image
ಹಿಂದು - ವೀರಶೈವ - ಲಿಂಗಾಯತ  Hindu Veerashaiva Lingayath "ನಾನು ಹಿಂದು ನಾವು ವೀರಶೈವರು" ಅನ್ನುವ ಲಿಂಗಾಯತರು  ದಯಮಾಡಿ ಇದನ್ನು ತಪ್ಪದೆ ಓದಿ. ಧರ್ಮದ ಬಗ್ಗೆ ಅಭಿಮಾನ ಇದ್ದವರು ಕಡ್ಡಾಯವಾಗಿ ಓದಿರಿ, ಪ್ರತಿ ಹತ್ತು ವರ್ಷಕೊಮ್ಮೆ ಭಾರತ ಸರಕಾರ ನಡೆಸುವ ಧರ್ಮ ಜನಗಣತಿಯಲ್ಲಿ ನಾವು ಲಿಂಗಾಯತರು "ಹಿಂದು-ಲಿಂಗಾಯತ",    "ವೀರಶೈವ-ಲಿಂಗಾಯತ", ಎಂದು ಬರೆಸುತ್ತೇವೆ ದಯಮಾಡಿ ಮೇಲಿನ ಎರಡನ್ನೂ ಬರೆಸದೆ ಕೇವಲ ಧರ್ಮದ ಕಾಲಂನಲ್ಲಿ ಲಿಂಗಾಯತ ಬರೆಸಿರಿ ಜಾತಿಯ ಕಾಲಂನಲ್ಲಿ ನಿಮ್ಮ ನಿಮ್ಮ ಜಾತಿಯನ್ನು ಬರೆಸಿರಿ, ನಾವು ಲಿಂಗಾಯತರು, ವೀರಶೈವರಲ್ಲ ಹಿಂದುಧರ್ಮದವರಲ್ಲ ಏಕೆಂದರೆ ನಾವು  ವೀರಶೈವ ಅನ್ನುತ್ತೇವೆ, ನಾನು ವೀರಶೈವ ಅನ್ನುವವರು ದಯಮಾಡಿ ನಿಮ್ಮ ಸ್ಕೂಲ್ ದಾಖಲಾತಿಯಲ್ಲಿ ಹಿಂದು-ಲಿಂಗಾಯತ ಇದೆ( ಭಾರತ ಸ್ವತಂತ್ರ ಸಿಕ್ಕ ನಂತರ 1951ನೇ ಜನಗಣತಿಯಲ್ಲಿ ಅಂದು ಹಿಂದು ಅಂದರೆ ಧರ್ಮ, ಮುಸ್ಲಿಮ್ ಅಂದರೆ ಜಾತಿ, ಸುನ್ನಿ ಅಂದರೆ ಉಪಜಾತಿ,ಹೀಗೆ ಹಿಂದು-ಜೈನ, ಹಿಂದು-ಕ್ರಿಶ್ಚಿಯನ್ನ, ಹಿಂದು-ಮುಸ್ಲಿಮ್, ಹಿಂದು-ಸಿಖ್ ಹಿಂದು-ಬೌದ್ಧ, ಹಿಂದು-ಪಾರ್ಸಿ, ಮತ್ತು ಹಿಂದು-ಲಿಂಗಾಯತ ಹೀಗೆ ಇತ್ತು ಮುಸ್ಲಿಮ್ ಕ್ರಿಶ್ಚಿಯನ್ ಜೈನ ಬೌದ್ಧ ಪಾರ್ಸಿ ಸಿಖ್ ಇವೆಲ್ಲವೂ ಧರ್ಮಗಳು ತಮ್ಮ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಸಿಕ್ಕ ನಂತರ ಹಿಂದು ಪದವನ್ನು ತೆಗೆದುಹಾಕಿದವು ನಾವು ಲಿಂಗಾಯತರು ಇನ್ನೂ ಅದಕ್ಕೆ ಹಿಂದು ಪದವನ್ನು ಹಿಡಿದ

ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ | ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ | ಕುವೆಂಪು

Image
ಆಧ್ಯಾತ್ಮ ಕ್ರಾಂತಿವೀರ ಗುರು ಬಸವೇಶ್ವರ -  ಕುವೆಂಪು ಕಾರ್ತೀಕದ ಕತ್ತಲಲಿ ಆಕಾಶದೀಪವಾಗಿ ನೀ ಬಂದೆ, ಬಟ್ಟೆಗೆಟ್ಟವರಿಗೊಂದು ದೊಂದಿ ದಿಕ್ಕಾಗಿ, ಎಂಟು ಶತಮಾನಗಳ ಹಿಂದೆ, ಅಗ್ನಿ ಖಡ್ಗವನಾಂತ ಓ ಆಧ್ಯಾತ್ಮ ಕ್ರಾಂತಿವೀರ, ದೇವದಯೆಯೊಂದು ಹೇ ಧೀರಾವತಾರ, ಶ್ರೀ ಬಸವೇಶ್ವರಾ! ಜಾತಿ ಪದ್ಧತಿಯ ಹೋಮ ಕೂಪಕ್ಕೆ ಬಿದ್ದು, ವೈದಿಕರ ಯಜ್ಞತಾಪಕ್ಕೆ ಬಲಿವೋದ ದಲಿತ ಜೀವರನೆತ್ತಿ ಮತಿ ವಿಚಾರಕ್ಕೆ, ಕಾಯಕದ ದಿವ್ಯತತ್ವದ ಸುಕ್ಷೇಮ ಧರ್ಮನಾಕಕ್ಕೆ ನಡೆಸಿದ ಮಹಾತ್ಮನೆ, ನಿನಗೆ ನಮೋ ನಮ:! ಇಂದಿಗೂ ನಾವು ನಿನ್ನೆತ್ತರಕೆ ಏಳಲಾರದೆ ಅಯ್ಯೊ ಮತದ ಉಸುಬಿಗೆ ಸಿಲುಕಿ ತತ್ತರಿಸುತಿಹೆವಯ್ಯ! ಬಾರಯ್ಯ, ಕೈ ಹಿಡಿದೆತ್ತಿ ಬದುಕಿಸು ನಮ್ಮನೆಳೆದು ವರ್ಣಾಶ್ರಮದ ಹೆಸರ ಹೊಲೆಗೆಸರ ವಂಚನೆಯ ಕುಂಡದಿಂದೆ; ಭಕ್ತಿಗಂಗೆಯನೆರೆದು ಭಾಗವತ ಶಕ್ತಿಯಂ ಕರೆದು ಮತ ಮೌಢ್ಯದಜ್ಞಾನ ಪಂಕವನು ತೊಳೆದು ಶುಚಿಗೊಳಿಸು ವಿಜ್ಞಾನ ವೇದಾಂತ ತೀರ್ಥದಿಂದೆ! ಗುರು ಬಸವಣ್ಣನವರ ಕುರಿತು ಕುವೆಂಪು ಅವರ ನುಡಿ ಸ್ಮರಣೆ ಬಸವಣ್ಣನವರು ಕಂಡ ಆಧ್ಯಾತ್ಮಿಕ ಸತ್ಯಗಳ, ಜೀವನಾನುಭವ ಹಾಗೂ ತಾತ್ವಿಕ ವಿಚಾರಗಳ ಅಭಿವ್ಯಕ್ತಿಗೆ ವಚನಗಳು ಮಾಧ್ಯಮವಾದುವೇ ಹೊರತು, ವಚನರಚನೆಯೇ ಅವರ ಜೀವನದ ಪ್ರಧಾನೋದ್ದೇಶವಾಗಿರಲಿಲ್ಲ. ಅವರು ಸೂಕ್ಷ್ಮ ಸಂವೇದನಾಶೀಲರಾದ್ದರಿಂದ, ಅವರ ಅಂತರ್ದೃಷ್ಟಿ ಬಹಿರ್ದೃಷ್ಟಿಗಳೆರಡೂ ಪ್ರಖರವಾಗಿದ್ದುದರಿಂದ ಅವರ ವಚನಗಳಲ್ಲಿ ಸಾಹಿತ್ಯಾಂಶಗಳು ಮೇಲಿಂದ ಮೇಲೆ ಮೈದೋರುತ್ತವೆ. ಹೃದಯದಿಂದ ನೇರವಾಗಿ ಹೊರ ಹೊ

ಗುರು ಬಸವಣ್ಣ ವರಿಗೆ ಗುರು ಇಲ್ಲಾ | Guru Basavanna does not have Guru (Physically)

Image
ಗುರು ಬಸವಣ್ಣ ವರಿಗೆ ಗುರು ಇಲ್ಲಾ | Guru Basavanna does not have Guru (Physically) ಮುನ್ನಿನ ಜನ್ಮದಲ್ಲಿ ಗುರುಲಿಂಗಜಂಗಮವ ಪೂಜಿಸಲರಿಯದ ಕಾರಣ ಬಹು ಜನ್ಮಕ್ಕೆ ತಂದು ಇಕ್ಕಿದೆಯಯ್ಯಾ ಎನ್ನನು ಎನಗೆ ಗುರು ಪಥವ ತೋರಿದವರಾರು? ಲಿಂಗ ಪಥವ ತೋರಿದವರಾರು? ಜಂಗಮ ಪಥವ ತೋರಿದವರಾರು? ಪಾದೋದಕ ಪ್ರಸಾದ ಪಥವ ತೋರಿದವರಾರು? ತೋರುವ ಮನವೆ ನೀವೆಂದರಿತೆ, ಎನ್ನಗಿನ್ನಾವ ಭವವಿಲ್ಲ, ಕೂಡಲಸಂಗಮದೇವ. - ಸ. ವ. ಸಂ.-೧ ವಚನ ಸಂಖ್ಯೆ: ೮೩೩ ಈ ವಚನದಲ್ಲಿ ಬಸವಣ್ಣ ವರು ಸ್ಪಷ್ಟವಾಗಿ "ತೋರುವ ಮನವೆ" ಎಂದು ಹೇಳಿದ್ದಾರೆ, ಇದನ್ನು ಗಮನಿಸಿದರೆ, ಬಸವಣ್ಣ ವರಿಗೆ, ಬೇರೆ ಯಾವುದೆ ಗುರುಗಳು, ಋಷಿಗಳು ಅಥವಾ ಇನ್ಯಾರೂ ಕೊಟ್ಟಿಲ್ಲವಂದು ಸ್ಪಷ್ಟವಾಗುತ್ತದೆ. ಒಂದು ವೇಳೆ ಬೇರೆ ಯಾರಾದರು ಕೊಟ್ಟಿದ್ದರೆ ಬಸವಣ್ಣ ನವರು ಅವರ ಹೆಸರನ್ನು ಇಲ್ಲಿ ಬಳಸುತ್ತಿದ್ದರು. ತೋರುವ ಮನವೇ ಎಂದು ಬಳಸುತ್ತಿರಲಿಲ್ಲ. ಬ ಸವಣ್ಣ ನವರಲ್ಲದೆ ಈಗ ನಾವು ಬೇರೆ ಶರಣರ ವಚನಗಳನ್ನು ಗಮನಿಸೋಣ ಬಸವಣ್ಣ ಮಾಡಲಿಕ್ಕೆ ಗುರುವಾಯಿತ್ತು ಬಸವಣ್ಣ ಮಾಡಲಿಕ್ಕೆ ಲಿಂಗವಾಯಿತ್ತು ಬಸವಣ್ಣ ಮಾಡಲಿಕ್ಕೆ ಜಂಗಮವಾಯಿತ್ತು ಬಸವಣ್ಣ ಮಾಡಲಿಕ್ಕೆ ಪ್ರಸಾದವಾಯಿತ್ತು ಇರೇಳು ಲೋಕವಾಯಿತ್ತು ಬಸವಣ್ಣ ನಿಂದ ಕಲಿದೇವಯ್ಯಾ . - ಮಡಿವಾಳ ಮಾಚಿದೇವ ಸವಸ ೮/೬೮೨ ವ. ಸಂ. ೨೪೫ ಮಡಿವಾಳ ಮಾಚಿದೇವ ಶರಣರು ಈ ವಚನದಲ್ಲಿ ಗುರು, ಲಿಂಗ, ಜಂಗಮ, ಪ್ರಸಾದ ಬಸವಣ್ಣ ನವರಿಂದಲೆ ಅಯುತು ಅಂತ ಸ್ಪಷ್ಟವಾಗಿ ತಿಳ

ಗುರು ಬಸವಣ್ಣನವರು ಅಂಚೆ ಚೀಟಿ | Gurubasavanna Stamp and Coins

Image
ಓಂ ಶ್ರೀ ಗುರು ಬಸವಲಿಂಗಾಯನಮಃ          866666  ಗುರು ಬಸವಣ್ಣನವರು ಅಂಚೆ ಚೀಟಿ ಮತ್ತು ನಾಣ್ಯದ ಮೇಲೆ. ಗುರು ಬಸವಣ್ಣವರ 800ನೇಯ ಲಿಂಗೈಕ್ಯ ದಿನಾಚರಣೆ ನಿಮಿತ್ಯ ಭಾರತ ಸರಕಾರದ ಅಂಚೆ ಇಲಾಖೆಯು 11ನೇ ಮೇ 1967 ರಲ್ಲಿ 15 ಪೈಸೆ ಮುಖ ಬೆಲೆಯುಳ್ಳ ಅಂಚೆ ಚೀಟಿಯನ್ನು ಮುದ್ರಿಸಿತು.  ಮತ್ತೋಮ್ಮೆ 1997 ರಲ್ಲಿ 2 ರೂಪಾಯಿ ಮುಖ ಬೆಲೆಯುಳ್ಳ ಅಂಚೆ ಚೀಟಿಯನ್ನು ಮುದ್ರಿಸಿತು. ಗುರು ಬಸವಣ್ಣವರ ಭಾವಚಿತ್ರವುಳ್ಳ 5 ರೂಪಾಯಿ ಮತ್ತು 100 ರೂಪಾಯಿ ನಾಣ್ಯಗಳನ್ನು ಡಾ. ಮನಮೋಹನ ಸಿಂಗ್ ಅವರು ದಿನಾಂಕ 23ನೇ ಜೂನ 2006 ರಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಬಸವಣ್ಣನವರು ನಾಣ್ಯದ ಮೇಲೆ ಪ್ರಕಟಿಸಲ್ಪಟ್ಟ ಪ್ರಥಮ ಕನ್ನಡಿಗರಾಗಿದ್ದಾರೆ.     ಗುರು ಬಸವಣ್ಣವರ ಅಶ್ವಾರೂಢ ಮೂರ್ತಿಯನ್ನು ದೆಹಲಿಯಲ್ಲಿರುವ ಪಾರ್ಲಿಮೆಂಟ ನಲ್ಲಿ ೨೮ನೇ ಎಪ್ರಿಲ್ ೨೦೦೩ರಲ್ಲಿ ಅನಾವರಣಗೊಳಿಸಲಾಯತು.